Film News

ಬಾಲಿವುಡ್ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ರಾಖಿ ಭಾಯ್!

ಬೆಂಗಳೂರು: ಕೆಜಿಎಫ್ ಚಿತ್ರದ ಮೂಲಕ ದೇಶ ಸೇರಿದಂತೆ ವಿದೇಶದಲ್ಲೂ ಖ್ಯಾತಿ ಪಡೆದಿರುವ ರಾಖಿ ಭಾಯ್ ಎಂದು ಕರೆಯಲಾಗುವ ಯಶ್ ಬಾಲಿವುಡ್ ನ ಆಕ್ಷನ್ ಆಧಾರಿತ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.

ಹೌದು ನಟ ಯಶ್ ಇದೀಗ ನ್ಯಾಷನಲ್ ಲೆವಲ್ ಹಿರೋ ಆಗಿದ್ದಾರೆ. ಕೆಜಿಎಫ್ ಚಿತ್ರದ ಬಳಿಕ ಯಶ್‌ಗೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ದೊರೆತಿದೆ. ಇದೀಗ ನಟ ಯಶ್ ಬಾಲಿವುಡ್‌ಗೂ ಎಂಟ್ರಿ ಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕ ವಿಷ್ಣುವರ್ಧನ್ ಇಂದೂರಿ ರಾಕಿಂಗ್ ಸ್ಟಾರ್ ಯಶ್ ರವರೊಂದಿಗೆ ಸಿನೆಮಾ ಮಾಡಲು ನಿರ್ಧರಿಸಿದ್ದಾರಂತೆ. ಜೊತೆಗೆ ವಿಷ್ಣುವರ್ಧನ್ ಯಶ್ ರವರೊಂದಿಗೆ ಒಂದು ಬಾರಿ ಮಾತುಕತೆ ಸಹ ನಡೆಸಲಾಗಿದೆಯಂತೆ.

ಅಂದಹಾಗೆ ಇದೊಂದು ಪಕ್ಕಾ ಆಕ್ಷನ್ ಚಿತ್ರವಾಗಿದ್ದು, ಪ್ಯಾನ್ ಇಂಡಿಯಾದಡಿ ನಿರ್ಮಾಣವಾಗಲಿದೆಯಂತೆ. ಈಗಾಗಲೇ ಒಂದು ರೌಂಡ್ ಮಾತುಕತೆ ಮುಗಿಸಿರುವ ನಿರ್ಮಾಪಕ ಯಶ್ ರವರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಹಿಂದಿ ನಿರ್ಮಾಪಕ ವಿಷ್ಣುವರ್ಧನ್ ಜೊತೆ ಸಿನೆಮಾ ಮಾಡಲು ಯಶ್ ಒಪ್ಪಿಗೆ ಸೂಚಿಸಲಿದ್ದಾರೆ ಎನ್ನಲಾಗಿದೆ.

ಇನ್ನೂ ಈಗಾಗಲೇ ಸಖತ್ ಹೈಪ್ ಹುಟ್ಟಿಸಿರುವ ಕೆಜಿಎಫ್-2 ಚಿತ್ರ ಇದೇ ಜುಲೈ 16 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ತಾರೆಯರೂ ಇರುವುದರಿಂದ ಮತಷ್ಟು ನಿರೀಕ್ಷೆ ಹೆಚ್ಚಾಗಿದೆ.

Trending

To Top