Film News

ವಿನೋದ್ ಪ್ರಭಾಕರ್ ಗೆ ಹುಟ್ಟು ಹಬ್ಬದ ಕಾಣಿಕೆ ನೀಡಿದ ರಾಬರ್ಟ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಬರ್ಟ್ ತಂಡದಿಂದ ನಟ ವಿನೋದ್ ಪ್ರಭಾಕರ್ ರವರ ಹುಟ್ಟುಹಬ್ಬಕ್ಕೆ ಕಾಣಿಕೆ ನೀಡಿದ್ದಾರೆ. ಅಂದ ಹಾಗೆ ಆ ಕಾಣಿಕೆ ಏನು ಅಂತ ನೋಡೊಣಾ ಬನ್ನಿ…

ರಾಬರ್ಟ್ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ವಿನೋದ್ ಪ್ರಭಾಕರ್ ರವರ ಹುಟ್ಟುಹಬ್ಬಕ್ಕೆ ಖಡಕ್ ಲುಕ್‌ನಲ್ಲಿ ಗನ್ ಹಿಡಿದು ಪೋಸ್ ಕೊಡುತ್ತಿರುವ ಪೊಸ್ಟರ್ ವೊಂದನ್ನು ಬಿಡುಗಡೆ ಮಾಡಿದ ಸಿನೆಮಾ ತಂಡ ಆ ಮೂಲಕ ನಿಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಈ ನಮ್ಮ ಪುಟ್ಟ ಕಾಣಿಕೆ ಎಂದು ವಿನೋಧ್ ಪ್ರಭಾಕರ್ ರವರ ಟ್ವಿಟರ್ ಪೇಜ್‌ನಲ್ಲಿ ಸಿನೆಮಾ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿದ್ದಾರೆ.

ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ರಾಬರ್ಟ್ ಕೊರೋನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಲ್ಪಟ್ಟಿತ್ತು. ಪ್ರಸ್ತುತ ಲಾಕ್‌ಡೌನ್ ತೆರವು ಆದ ಕಾರಣ ಜನವರಿ ೨೦೨೧ ರ ಆರಂಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಇನ್ನೂ ಈ ಚಿತ್ರದಲ್ಲಿ ದರ್ಶನ್ ಜೊತೆಯಾಗಲಿರುವುದು ಆಶಾ ಭಟ್, ಮುಖ್ಯವಾಗಿ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ರವಿಶಂಕರ್, ಚಿಕ್ಕಣ್ಣ, ದೇವರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.

Trending

To Top