ಹೈದರಾಬಾದ್: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನೆಮಾದ ಮಾರ್ಚ್ 11, 2021 ರಂದು ಬಿಡುಗಡೆಯಾಗಲಿದ್ದು, ಇದರ ಅಂಗವಾಗಿ ಹೈದರಾಬಾದ್‌ನಲ್ಲಿ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನಟ ದರ್ಶನ್, ನಾಯಕಿ ಆಶಾ ಭಟ್, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದರು. ಈ ವೇಳೆ ಕನ್ನಡದಲ್ಲಿ ಭಾಷಣ ಆರಂಭಿಸಿ ಕನ್ನಡ ಪ್ರೇಮ ಮೆರೆದಿದ್ದಾರೆ ದರ್ಶನ್. ನಂತರ ತೆಲುಗಿನಲ್ಲಿಯೂ ಮಾತನಾಡಿ ತೆಲುಗು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಜೊತೆಗೆ ತೆಲುಗು ಪ್ರೇಕ್ಷಕರಿಗೆ ವಿತರಕರಿಗೆ ಧನ್ಯವಾದಗಳನ್ನು ಸಹ ಅರ್ಪಿಸಿದ್ದಾರೆ. ಅಷ್ಟೇ ಅಲ್ಲದೇ ಜಗಪತಿ ಬಾಬು ರವರ ಬಗ್ಗೆ ಮಾತನಾಡಿದ್ದು, ರಾಬರ್ಟ್ ಸಿನೆಮಾದಲ್ಲಿ ನಾನು ಹಿರೋ ಅಲ್ಲ ನಿಜವಾದ ಹಿರೋ ಜಗಪತಿಬಾಬು ನಿರ್ವಹಿಸಿರುವ ನಾನಾ ಪಾತ್ರ ಎಂದಿದ್ದಾರೆ.
ಇನ್ನೂ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿಯವರ ಬಗ್ಗೆಯೂ ಮಾತನಾಡಿದ್ದು, ನಾವೆಲ್ಲಾ ಹಣ ಪಡೆದುಕೊಂಡು ನಟಿಸಿರುವವರು ಮಾತ್ರವಷ್ಟೆ. ಆದರೆ ಸಿನೆಮಾದ ನಿಜವಾದ ಹಿರೋ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ರವರು. ಈ ಸಿನೆಮಾದ ಜೀವ ಅವರೇ ಆಗಿದ್ದಾರೆ ಎಂದು ಮನಸಾರೆ ಹೊಗಳಿದ್ದಾರೆ.
ನಾನು ಸಿನೆಮಾ ರಂಗಕ್ಕೆ ಪ್ರವೇಶಿಸುವ ಮುನ್ನವೇ ನನ್ನ ತಂದೆಯನ್ನು ಕಳೆದುಕೊಂಡೆ. ನನ್ನ ತಂದೆಯೊಂದಿಗೆ ನಟಿಸಿದ ಎಲ್ಲರೂ ನನ್ನ ತಂದೆಗೆ ಸಮಾನ, ನನ್ನನ್ನು ಹೊಡೆಯುವ ತಿದ್ದುವ ಹಕ್ಕು ಅವರಿಗೆ ಇದೆ ಎಂದು ನಟ ದೇವರಾಜ್ ರವರ ಬಗ್ಗೆ ಮಾತನಾಡಿದ್ದಾರೆ. ಅವರೊಂದಿಗೆ ಈ ಸಿನೆಮಾದಲ್ಲಿ ನಟಿಸಿರುವು ನನ್ನ ಭಾಗ್ಯ ಎಂದಿದ್ದಾರೆ.
