Film News

ರಾಬರ್ಟ್ ಟ್ರೈಲರ್ ಬಿಡುಗಡೆ: ಜೋರಾಯ್ತು ಡೈಲಾಗ್ ಗಳ ಅಬ್ಬರ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಟ್ರೈಲರ್ ದರ್ಶನ್ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡುವ ಮೂಲಕ ಭರ್ಜರಿ ಗಿಫ್ಟ್ ಕೊಟ್ಟಿದೆ ರಾಬರ್ಟ್ ಚಿತ್ರ ತಂಡ. ರಾಬರ್ಟ್ ಟ್ರೈಲರ್‌ನಲ್ಲಿನ ಡೈಲಾಗ್‌ಗಳ ಅಬ್ಬರ ಈಗ ಬಲು ಜೋರಾಗಿದೆ.

ಉಮಾಪತಿ ಫಿಲ್ಮಂಸ್ ಬ್ಯಾನರ್‌ನಡಿ ರಾಬರ್ಟ್ ಚಿತ್ರ ಬಿಡುಗಡೆಯಾಗಲಿದ್ದು, ಸದ್ಯ ಬಿಡುಗಡೆಯಾದ ಟ್ರೈಲರ್ ಸಖತ್ ಟ್ರೆಂಡಿಂಗ್ ನಲ್ಲಿದೆ. ಇನ್ನೂ ಟ್ರೈಲರ್‌ನಲ್ಲಿನ ಡೈಲಾಗ್‌ಗಳಂತೂ ಎಲ್ಲರ ಬಾಯಲ್ಲೂ ಬರುತ್ತಿದೆ. ದರ್ಶನ್ ಸಿನೆಮಾಗಳೆಂದರೇ ಪಕ್ಕಾ ಮಾಸ್ ನಿಂದ ಕೂಡಿರುತ್ತದೆ ಎನ್ನಲಾಗುತ್ತದೆ. ಇದೇ ಹಾದಿಯಲ್ಲಿ ರಾಬರ್ಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳನ್ನು ಫಿದಾ ಮಾಡುವುದರ ಜೊತೆಗೆ ಚಿತ್ರದ ಬಿಡುಗಡೆಯ ದಿನಾಂಕ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಇನ್ನೂ ಟ್ರೈಲರ್ ನಲ್ಲಿ ಕಾಣುವಂತೆ ರಾಬರ್ಟ್ ಮೇಕಿಂಗ್, ಜಲ್ ಎನ್ನುವಂತಹ ಆಕ್ಷನ್ ಸೀನ್ಸ್, ಪವರ್ ಪುಲ್ ಮಾಸ್ ಡೈಲಾಗ್‌ಗಳು ಅಬ್ಬರಿಸುತ್ತಿದೆ. ಈ ಪೈಕಿ ಒಬ್ರು ಲೈಫ್‌ನಲ್ಲಿ ಹೀರೋ ಆಗಬೇಕು ಅಂದ್ರೆ, ಇನ್ನೊಬ್ರ ಲೈಫ್‌ನಲ್ಲಿ ನಾವು ವಿಲನ್ ಆಗಬೇಕು ಎಂಬ ಡೈಲಾಗ್ ಮಾತ್ರ ಹಲ್ ಚಲ್ ಸೃಷ್ಟಿ ಮಾಡಿದೆ. ಇನ್ನೂ ನಾವು ನೋಡೋಕ್ ಮಾತ್ರ ಕ್ಲಾಸು, ವಾರ್‌ಗೆ ಇಳಿದ್ರೆ ಪುಲ್ ಮಾಸ್, ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು ಹಾಗೂ ಏ ತುಕಾಲಿ, ನೀನು ಮಾಸ್ ಆದ್ರೆ ನಾನು ಆ ಮಾಸ್‌ಗೆ ಬಾಸ್ ಎನ್ನುವ ಡೈಲಾಗ್‌ಗಳು ಟ್ರೆಂಡಿಂಗ್‌ನಲ್ಲಿದೆ.

ಇನ್ನೂ ವಸಿಷ್ಠ ಸಿಂಹ ಧ್ವನಿಯಿಂದ ಟ್ರೈಲರ್ ಪ್ರಾರಂಭವಾಗಿದ್ದು, ದರ್ಶನ್ ಎಂಟ್ರಿ, ನಾಯಕಿ ಆಶಾ ಭಟ್ ಲುಕ್, ಜಗಪತಿ ಬಾಬು ರವರ ಪವರ್ ಪುಲ್ ಡೈಲಾಗ್ ರಾಬರ್ಟ್ ಚಿತ್ರದ ಮೇಲಿನ ನಿರೀಕ್ಷೆ ಇನಷ್ಟು ಹೆಚ್ಚಿಸಿದೆ. ಇನ್ನೂ ಮಾರ್ಚ್ 11 ರಂದು ಚಿತ್ರ ತೆರೆಗೆ ಬರಲಿದೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

Trending

To Top