Film News

ಮಾ.11 ರಂದು ರಾಬರ್ಟ್ ಚಿತ್ರ ಬಿಡುಗಡೆ

ಬೆಂಗಳೂರು: ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನೆಮಾ ಮಾರ್ಚ್ 11 ರಂದು ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಂದಿದೆ. ಮಾರ್ಚ್ 11 ರಂದು ಶಿವರಾತ್ರಿ ಹಬ್ಬದಂದು ಚಿತ್ರ ಬಿಡುಗಡೆಯಾಗಲಿದೆ.

ದರ್ಶನ್ ಅಭಿನಯನದ ರಾಬರ್ಟ್ ಚಿತ್ರದ ಚಿತ್ರೀಕರಣ ಮುಗಿದು ಅನೇಕ ತಿಂಗಳುಗಳೇ ಕಳೆದಿದೆ. ಏಪ್ರಿಲ್ ಮಾಹೆ 2020 ರಲ್ಲಿ ಬಿಡುಗಡೆಯಾಗಬೇಕಿದ್ದ ರಾಬರ್ಟ್ ಚಿತ್ರ ಕೊರೋನಾ ಹಿನ್ನೆಲೆಯಲ್ಲಿ ಬಿಡುಗಡೆಗೆ ತಡೆಯಾಗಿತ್ತು. ಲಾಕ್ ಡೌನ್ ತೆರವಿನ ನಂತರ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಶುಭಸುದ್ದಿ ದೊರೆತಿದ್ದು, ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.

ಮಾರ್ಚ್ 11 ಮಹಾಶಿವರಾತ್ರಿ ಹಬ್ಬದ ದಿನದಂದೇ ಸಿನೆಮಾ ತೆರೆಗೆ ಬರಲಿದೆ. ಮತ್ತೊಂದು ವಿಚಾರ ರಾಬರ್ಟ್ ಸಿನೆಮಾ ತೆಲುಗು ಭಾಷೆಯಲ್ಲಿ ಸಹ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಬಿಡುಗಡೆ ದಿನಾಂಕ ನಿಗಧಿಯಾಗುತ್ತಿದ್ದಂತೆ ಚಿತ್ರದ ಪ್ರಮೋಷನ್ ಸಹ ಶುರು ಮಾಡಲಾಗುತ್ತದೆ ಎನ್ನಲಾಗಿದೆ. ಜೊತೆಗೆ  ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಕುರಿತಂತೆ ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡಿದೆಯಂತೆ ಚಿತ್ರತಂಡ. ಇನ್ನೂ ಮುಂದೆ ರಾಬರ್ಟ್ ಚಿತ್ರತಂಡದಿಂದ ಹಂತ ಹಂತವಾಗಿ ಶುಭ ಸುದ್ದಿ ಬಹಿರಂಗವಾಗಲಿದೆ ಎನ್ನಲಾಗುತ್ತಿದೆ.

ಇನ್ನೂ ರಾಬರ್ಟ್ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ಉಮಾಪತಿ ನಿರ್ಮಾಪಕರಾಗಿದ್ದಾರೆ. ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಅಭಿನಯಿಸಲಿದ್ದಾರೆ.

Trending

To Top