Saturday, May 21, 2022
HomeFilm Newsದುಬಾರಿ ಮೊತ್ತಕ್ಕೆ ಸೇಲ್ ಆದ ರಾಬರ್ಟ್ ವಿತರಣೆ ಹಕ್ಕು!

ದುಬಾರಿ ಮೊತ್ತಕ್ಕೆ ಸೇಲ್ ಆದ ರಾಬರ್ಟ್ ವಿತರಣೆ ಹಕ್ಕು!

ಬೆಂಗಳೂರು: ಸ್ಯಾಂಡಲ್‌ವುಡ್ ನ ಬಹುನಿರೀಕ್ಷಿತ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಇದೇ ತಿಂಗಳ 11 ರಂದು ಬಿಡುಗಡೆಯಾಗಲಿದ್ದು, ಈ ಚಿತ್ರದ ವಿತರಣೆ ಹಕ್ಕು ದುಬಾರಿ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗಿದೆ.

ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ರಾಬರ್ಟ್ ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಸಹ ನಡೆದಿದ್ದು, ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಮೂಲಗಳ ಪ್ರಕಾರ ರಾಬರ್ಟ್ ಸಿನೆಮಾದ ಕರ್ನಾಟಕ ವಿತರಣೆ ಹಕ್ಕು ಸುಮಾರು 78 ಕೋಟಿ ಮೊತ್ತಕ್ಕೆ ಸೇಲ್ ಆಗಿದೆಯಂತೆ. ಕರಾವಳಿ ಹಾಗೂ ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಸೇರಿದಂತೆ ಅಖಂಡ ಕರ್ನಾಟಕದ ವಿತರಣೆ ಹಕ್ಕು 78  ಕೋಟಿಗೆ ಸೇಲ್ ಆಗಿದೆ ಎನ್ನಲಾಗಿದೆ.

ಇನ್ನೂ ರಾಬರ್ಟ್ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಉಮಾಪತಿ ಫಿಲ್ಮಂಸ್, ಶ್ರೀ ಭವಾನಿ ಆರ್ಟ್ಸ್ ಹಾಗೂ ಮೆಹಲ್ ಫಿಲ್ಮಂಸ್ ಕರ್ನಾಟಕಕ್ಕೆ ರಾಬರ್ಟ್ ಚಿತ್ರವನ್ನು ಹಂಚಿಕೆ ಮಾಡುತ್ತಿದ್ದಾರೆ. ರಾಬರ್ಟ್ ಚಿತ್ರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸೇಲ್ ಆಗಿದ್ದು, ಇಲ್ಲಿಯವರೆಗೂ ಕರ್ನಾಟಕದಲ್ಲಿ ಇಷ್ಟೊಂದು ದೊಡ್ಡ ಬೆಲೆ ಸಿಕ್ಕಿರಲಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ ಕೆಜಿಎಫ್ ಚಿತ್ರಕ್ಕೂ ಇಷ್ಟೊಂದು ಮೊತ್ತ ಸಿಕ್ಕಿರಲಿಲ್ಲ ಎನ್ನಲಾಗಿದೆ.

ಇನ್ನೂ ತೆಲುಗು ರಾಜ್ಯಗಳಾದ ಆಂಧ್ರ ಹಾಗೂ ತೆಲಂಗಾಣದಲ್ಲಿ ಸುಮಾರು 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ರಿಲೀಸ್‌ಗೂ ಮುಂಚೆಯೇ ದಾಖಲೆ ಮಟ್ಟದಲ್ಲಿ ರಾಬರ್ಟ್ ಚಿತ್ರ ದುಬಾರಿ ಮೊತ್ತದಲ್ಲಿ ಗಳಿಸುತ್ತಿದ್ದು, ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್ ಯಾವ ರೀತಿಯಲ್ಲಿ ಬ್ರೇಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

- Advertisement -

You May Like

More