Film News

ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲಂಸ್ ನಿಂದ ಗಿಫ್ಟ್….

ಸ್ಯಾಂಡಲ್ ವುಡ್ ನ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಸಿನೆಮಾ ಈಗಾಗಲೇ ಕೆಜಿಎಫ್ ಸಿನೆಮಾ ಮೂಲಕ ದೊಡ್ಡ ಮಟ್ಟದಲ್ಲೇ ಹೆಸರು ಗಳಿಸಿದೆ. ಇಂದು (ಮೇ.20) ಕನ್ನಡ ಸಿನಿರಂಗದ ರೋರಿಂಗ್ ಸ್ಟಾರ್‍ ಶ್ರೀಮುರಳಿ ಹುಟ್ಟುಹಬ್ಬದ ಸಂಭ್ರಮ ಅವರ ಹುಟ್ಟು ಹಬ್ಬಕ್ಕೆ ಹೊಂಬಾಳೆ ಫಿಲಂಸ್ ಗಿಫ್ಟ್ ಒಂದನ್ನು ನೀಡಿದೆ. ಬಘೀರ ಎಂಬ ಸಿನೆಮಾದ ಮುಹೂರ್ತ ಸಹ ಶ್ರೀಮುರಳಿ ಹುಟ್ಟುಹಬ್ಬದಂದೇ ನಡೆದಿದೆ.

ಸದ್ಯ ಹೊಂಬಾಳೆ ಫಿಲಂಸ್ ಕೆಜಿಎಫ್-2 ಗ್ರಾಂಡ್ ಸಕ್ಸಸ್ ಖುಷಿಯಲ್ಲಿದೆ. ಕನ್ನಡದ ಸಿನೆಮಾ ಒಂದು ವಿಶ್ವ ಮಟ್ಟದಲ್ಲಿ ಪ್ರಸಿದ್ದಿಯಾಗುತ್ತಿದೆ. ಇದೀಗ ಮತ್ತೊಂದು ಸಿನೆಮಾವನ್ನು ನಿರ್ಮಾಣ ಮಾಡಲು ಹೊಂಬಾಳೆ ಫಿಲಂಸ್ ಮುಂದಾಗಿದೆ. ಕೆಜಿಎಫ್ ಸಿನೆಮಾದ ಮೂಲಕ ಖ್ಯಾತಿ ಪಡೆದುಕೊಂಡ ಈ ನಿರ್ಮಾಣ ಸಂಸ್ಥೆ ನಟ ಶ್ರೀಮುರಳಿ ಜೊತೆ ಬಘೀರ ಎಂಬ ಸಿನೆಮಾ ಮಾಡಲು ಮುಂದಾಗಿದೆ. ನಟ ಶ್ರೀಮುರಳಿ ಹುಟ್ಟುಹಬ್ಬದಂದು ಬಘೀರ ಸಿನೆಮಾದ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಈಗಾಗಲೇ ಬಘೀರ ಸಿನೆಮಾದ ಪೋಸ್ಟರ್‍ ಗಳು ಬಿಡುಗಡೆಯಾಗಿದ್ದು, ಸಖತ್ ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ಬಘೀರ ಸಿನೆಮಾ ಸೆಟ್ಟೇರಿದ್ದು, ಅಭಿಮಾನಿಗಳು ಸಿನೆಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಅಂದಹಾಗೆ ಈ ಬಘೀರ ಸಿನೆಮಾ ಕಥೆ ಬರೆದಿದ್ದು, ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್. ಕೆಜಿಎಫ್ ಸಿನೆಮಾ ಮೂಲಕ ಕನ್ನಡ ಸಿನಿರಂಗದ ಖ್ಯಾತಿಯನ್ನು ವಿಶ್ವ ಮಟ್ಟಕ್ಕೆ ಕರೆದೊಯ್ದ ಪ್ರಶಾಂತ್ ನೀಲ್ ರವರೇ ಬಘೀರ ಸಿನೆಮಾದ ಕಥೆಯನ್ನು ಬರೆದಿದ್ದಾರೆ. ಆಕ್ಷನ್ ಕಥೆಗಳ ಪ್ರಿಯಾರಾದ ನೀಲ್ ರೋರಿಂಗ್ ಸ್ಟಾರ್‍ ಮುರಳಿಗೆ ಶೂಟ್ ಆಗುವಂತಹ ಆಕ್ಷನ್ ಕಥೆಯನ್ನು ಸಿದ್ದ ಮಾಡಿದ್ದಾರೆ. ಇನ್ನೂ ಆಕ್ಷನ್ ಪ್ರಿಯರಂತೂ ಬಘೀರ ಸಿನೆಮಾದ ಪೋಸ್ಟರ್‍ ನೋಡಿದ ಮೇಲೆ ಮತಷ್ಟು ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಕೆಜಿಎಫ್-2 ಸಿನೆಮಾದ ಬಳಿಕ ಸಿನಿರಸಿಕರಿಗೆ ಪ್ರಶಾಂತ್ ನೀಲ್ ರವರ ಸಿನೆಮಾಗಳೆಂದರೇ ವಿಶೇಷ ಆಸಕ್ತಿ. ಬಘೀರಾ ಇದೀಗ ಸೆಟ್ಟೇರಿದ್ದು ಅಭಿಮಾನಿಗಳು ಶೀಘ್ರ ಟೀಸರ್‍, ಟ್ರೈಲರ್‍ ಗಳಿಗಾಗಿ ಸಹ ಕಾಯುತ್ತಿದ್ದಾರೆ.

ಇನ್ನೂ ಈ ಸಿನೆಮಾದಲ್ಲಿ ನಟ ಶ್ರೀಮುರಳಿ ಖಡಕ್ ಪೊಲೀಸ್ ಆಫಿಸರ್‍ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಮುರಳಿ ಪುನಃ ಮಾಸ್ ಲುಕ್ ನಲ್ಲಿ ತೆರೆ ಮೇಲೆ ಅಬ್ಬರಿಸಲಿದ್ದಾರೆ. ಮದಗಜ ಸಿನೆಮಾದ ಬಳಿಕ ಶ್ರೀಮುರಳಿಯವರು ಬಘೀರ ಸಿನೆಮಾದ ಮೂಲಕ ಮಾಸ್ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಉಗ್ರಂ ಸಿನೆಮಾದ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡ ಶ್ರೀಮುರಳಿ ಬಘೀರ ಸಿನೆಮಾದಲ್ಲಿ ಉಗ್ರಂ ಸಿನೆಮಾದ ಮಾದರಿಯಲ್ಲಿ ಹವಾ ಸೃಷ್ಟಿ ಮಾಡುತ್ತಾರೆ ಎಂಬ ನಿರೀಕ್ಷೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ. ಈ ಸಿನೆಮಾವನ್ನು ಡಾ.ಸೂರಿ ನಿರ್ದೇಶನ ಮಾಡಲಿದ್ದಾರೆ. ಹೊಂಬಾಳೆ ಫಿಲಂಸ್ ಬಂಡವಾಳ ಹೂಡಲಿದೆ.

Trending

To Top