Film News

ರಿಷಭ್ ಶೆಟ್ಟಿ ಅಭಿನಯದ ಹೀರೋ ಟ್ರೈಲರ್ ಬಿಡುಗಡೆ!

ಬೆಂಗಳೂರು: ಸ್ಯಾಂಡಲ್ ವುಡ್ ನಟ ರಿಷಭ್ ಶೆಟ್ಟಿ ಅಭಿನಯದ ಹೀರೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಮೂಲಕ ಚಿತ್ರದ ಕುರಿತಂತೆ ಕುತೂಹಲ ಹೆಚ್ಚುವಂತೆ ಮಾಡಿದೆ.

ಇನ್ನೂ ಈ ಟ್ರೈಲರ್ ಮೂಲಕ ಹೀರೋ ಚಿತ್ರ ಹೇಗಿರಲಿದೆ ಎಂಬುದು ಸಹ ತಿಳಿಯುತ್ತದೆ. ರಕ್ತದೋಕುಳಿ, ಹಾಸ್ಯ, ಆಕ್ಷನ್, ಪ್ರೇಮ ಎಲ್ಲವನ್ನು ಒಳಗೊಂಡಿರುವ ಸಿನೆಮಾ ಇದಾಗಲಿದೆ ಎನ್ನಲಾಗುತ್ತಿದೆ. ಇನ್ನೂ ಈ ಚಿತ್ರ ಸೀಮಿತ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದ್ದು, ಬಹುತೇಕ ಸಿನೆಮಾ ಒಂದೇ ಲೊಕೇಚನ್ ನಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ.

ಇನ್ನೂ ಟ್ರೈಲರ್ ನೋಡಿದರೇ ರಿಷಭ್ ಶೆಟ್ಟಿ ಹೀರೋನಾ ಅಥವಾ ಖಳನಾಯಕನಾ ಎಂಬ ಅನುಮಾನ ಮೂಡುವಂತಹ ಟ್ವಿಸ್ಟ್ ಸಹ ಟ್ರೈಲರ್ ಕೊನೆಯಲ್ಲಿ ನೀಡಲಾಗಿದೆ. ಈ ಚಿತ್ರವನ್ನು ಭರತ್ ರಾಜ್ ನಿರ್ದೇಶನ ಮಾಡುತ್ತಿದ್ದು, ರಿಷಭ್ ಶೆಟ್ಟಿಯೇ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರದ ನಾಯಕಿಯಾಗಿ ಗಾನವಿ ಲಕ್ಷ್ಮಣ್ ನಟಿಸಲಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ಇನ್ನೂ ರಿಷಭ್ ಶೆಟ್ಟಿ ಗರುಡ ಗಮನ ವೃಷಭ ವಾಹನ ಸಿನೆಮಾದಲ್ಲಿ ನಟಿಸಿದ್ದು, ಹರಿಕತೆ ಅಲ್ಲ ಗಿರಿಕತೆ ಹಾಗೂ ಬೆಟ್ ಬಾಟಂ-2 ಚಿತ್ರಗಳ ಶೂಟಿಂಗ್ ನಡೆಯಲಿದೆ. ಜೊತೆಗೆ ಕಿರಕ್ ಪಾರ್ಟಿ-2 ಹಾಗೂ ರುದ್ರಪ್ರಯಾಗ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

Trending

To Top