ಬೆಂಗಳೂರು: ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ ಅಭಿನಯದ ಹೀರೋ ಚಿತ್ರ ಮಾರ್ಚ್ 5 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಈಗಾಗಲೇ ಸ್ಯಾಂಡಲ್ವುಡ್ನ ಬಿಗ್ ಬಜೆಟ್ ಚಿತ್ರಗಳು ಬಿಡುಗಡೆ ದಿನಾಂಕ ಬಹಿರಂಗ ಮಾಡಿ ಚಿತ್ರಮಂದಿರಗಳನ್ನು ಸಹ ಕಾಯ್ದಿರಿಸಿದೆ. ಫೆಬ್ರವರಿ 19 ರಂದು ಪೊಗರು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ನಂತರ ಮಾರ್ಚ್ ನಿಂದ ಜುಲೈ ವರೆಗೂ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಲಿದ್ದು, ಇದರ ಜೊತೆಗೆ ಟಾಲಿವುಡ್ ಸಿನೆಮಾಗಳು ಸಹ ಬಿಡುಗಡೆ ರೇಸ್ ನಲ್ಲಿದ್ದು, ಸಿನಿಪ್ರೇಕ್ಷಕರನ್ನು ರಂಜಿಸಲಿದೆ. ಇದೀಗ ರಿಷಭ್ ಶೆಟ್ಟ ಅಭಿನಯದ ಹೀರೋ ಸಿನೆಮಾ ರಿಲೀಸ್ ಮಾರ್ಚ್ ೫ ರಂದು ರಿಲೀಸ್ ಆಗಲಿದೆ.
ಇನ್ನೂ ದರ್ಶನ್ ಅಭಿನಯದ ರಾಬರ್ಟ್ ಸಿನೆಮಾ ಬಿಡುಗಡೆಗೂ ಮುನ್ನವೇ ಹೀರೋ ಚಿತ್ರ ಬಿಡುಗಡೆಯಾಗಲಿದೆ. ಈ ಸಿನೆಮಾ ಲಾಕ್ಡೌನ್ ಸಮಯದಲ್ಲಿ ಸಿದ್ದವಾಗಿದೆ. ಈಗಾಗಲೇ ಈ ಸಿನೆಮಾದ ಟ್ರೈಲರ್ ಸಹ ಬಿಡುಗಡೆಯಾಗಿದ್ದು ಸಖತ್ ಸದ್ದು ಮಾಡಿತ್ತು. ಇನ್ನೂ ಈ ಚಿತ್ರ ಕ್ರೈಂ ಥ್ರಿಲ್ಲರ್ ಹಾಗೂ ಕಾಮಿಡಿ ಕಥೆಯನ್ನು ಒಳಗೊಂಡಿದೆ ಎನ್ನಲಾಗಿದೆ.
ಇನ್ನೂ ಈ ಚಿತ್ರವನ್ನು ಭರತ್ ರಾಜ್ ನಿರ್ದೇಶನ ಮಾಡಿದ್ದು, ಅಜನೀಶ್ ಲೋಕನಾಥ್ ಮ್ಯೂಸಿಕ್ ಸಂಯೋಜನೆ ಮಾಡಿದ್ದಾರೆ. ರಿಷಭ್ ಜೊತೆ ಮಗಳು ಗಾನವಿ ಲಕ್ಷ್ಮಣ್ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಜೊತೆಗೆ ಈಗಾಗಲೇ ರಿಷಭ್ ಶೆಟ್ಟಿಯವರ ಕೈಯಲ್ಲಿ ಅನೇಕ ಪ್ರಾಜೆಕ್ಟ್ಗಳಿವೆ. ಹರಿಕಥೆ ಅಲ್ಲ ಗಿರಿಕಥೆ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ ಸೇರಿದಂತೆ ಹಲವು ಚಿತ್ರಗಳಲ್ಲಿ ರಿಷಭ್ ಶೆಟ್ಟಿ ಬಣ್ಣ ಹಚ್ಚಲಿದ್ದಾರೆ.
