Cinema

ನಾನು ಶುಶಾಂತ್ ನ ಕೊ#ಲೇ ಮಾಡಿಲ್ಲ! ವಿಡಿಯೋ ಮಾಡಿದ ಗರ್ಲ್ ಫ್ರೆಂಡ್ ರಿಯಾ

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕೇಸ್ ಇಂದಾಗಿ ಹಲವಾರು ವಿಚಾರಗಳು ಹೊರಬರುತ್ತಿವೆ. ಇವರ ಅಗಲಿಕೆಯ ಹಿಂದೆ ಹಲವಾರು ಕೈಗಳ ಕೈವಾಡ ಇದೆ. ದೊಡ್ಡ ವ್ಯಕ್ತಿಗಳು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಯಾಗುತ್ತಿದೆ. ಸುಶಾಂತ್ ಅಗಲಿದ ಒಂದು ತಿಂಗಳ ನಂತರ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಬಿಹಾರದಲ್ಲಿ ಪೊಲೀಸ್ ಠಾಣೆಯಲ್ಲಿ ಸುಶಾಂತ್ ರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಮೇಲೆ ದೂರು ನೀಡಿದ್ದಾರೆ. ಸುಶಾಂತ್ ರಿಗೆ ರಿಯಾ ಮಾನ#ಸಿಕ ಕಿರು#ಕುಳ ನೀಡಿದ್ದರು. ಸುಶಾಂತ್ ಖಾತೆಯಿಂದ ಸಂಪೂರ್ಣ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಿಯಾ ಏನ್ ಹೇಳಿದ್ದಾರೆ, ಸ್ಕ್ರೋಲ್ ಡೌನ್ ಮಾಡಿ ವಿಡಿಯೋ ನೋಡಿ
ಬಿಹಾರ್ ಪೊಲೀಸರು ದೂರಿನ ಪರವಾಗಿ ತನಿಖೆ ಆರಂಭಿಸಿದ್ದರು, ಇದೀಗ ಈ ದೂರಿಗೆ ರಿಯಾ ಚಕ್ರವರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಲಾಯರ್ ಮೂಲಕ ವಿಡಿಯೋ ಒಂದನ್ನು ಪೋಸ್ಟ್ ಮಾಡಿಸಿ, ತಮ್ಮ ಅನಿಸಿಕೆಯನ್ನು ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ. “ದೇವರು ಮತ್ತು ನ್ಯಾಯಾಲಯದ ಬಗ್ಗೆ ನನಗೆ ನಂಬಿಕೆ ಇದೆ. ನಾನು ದೇವರನ್ನು ನಂಬುತ್ತೇನೆ. ಸತ್ಯವನ್ನು ನಂಬುತ್ತೇನೆ. ನನಗೆ ನ್ಯಾಯ ಸಿಗಲಿದೆ ಎಂದು ನಂಬುತ್ತೇನೆ. ಏನೆಲ್ಲಾ ನಡೆಯುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ನನ್ನ ಲಾಯರ್ ಜೊತೆ ಸಂಪರ್ಕದಲ್ಲಿದ್ದೇನೆ.. ಸತ್ಯಮೇವ ಜಯತೆ.. ಸತ್ಯ ಮೇಲುಗೈ ಸಾಧಿಸುತ್ತದೆ..” ಎಂದು ಹೇಳಿ ಮಾತನ್ನು ಮುಗಿಸಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ
ಸುಶಾಂತ್ ಅಗಲಿಕೆಯ ವಿಚಾರದಲ್ಲಿ ರಿಯಾ ಚಕ್ರವರ್ತಿ ಕೂಡ ಇನ್ವಾಲ್ವ್ ಆಗಿದ್ದಾರೋ ಇಲ್ಲವೋ ತಿಳಿದಿಲ್ಲ. ಆದರೆ ಸುಶಾಂತ್ ಸಾ#ವಿನ ನಂತರ ಈ ನಟಿಗೆ ಕೊ#ಲೆ ಬೆದ#ರಿಕೆಗಳು ತುಂಬಾ ಬರುತ್ತಿವೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸುಶಾಂತ್ ಅವರ ಪ್ರಕರಣದಲ್ಲಿ ಅವರ ತಂದೆ ರಿಯಾ ಚಕ್ರವರ್ತಿ ವಿರುದ್ಧ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿರುವ ಪ್ರಕಾರ, ನಟ ಸುಶಾಂತ್ ಸಿಂಗ್ ಬಾಲಿವುಡ್ ನ ವೃತ್ತಿಜೀವನವನ್ನು ತ್ಯಜಿಸಿ ಗೆಳೆಯ ಮಹೇಶ್ ಜೊತೆ ಕೈಜೋಡಿಸಿ ಕರ್ನಾಟಕದ ಕೊಡಗಿನಲ್ಲಿ ಸಾವಯವ ಕೃಷಿ ಮಾಡಬೇಕು ಎಂದುಕೊಂಡಿದ್ದರಂತೆ. ಆದರೆ ಸುಶಾಂತ್ ಕೃಷಿ ಕೆಲಸ ಮಾಡಲು ರಿಯಾ ಚಕ್ರವರ್ತಿ ಅನುಮತಿ ನೀಡಲಿಲ್ಲ.
ಜೊತೆಗೆ, ಸುಶಾಂತ್ ಮುಂಬೈ ಬಿಟ್ಟು ಬೇರೆ ಕಡೆ ಹೋಗಬಾರದು ಎಂದು ಕಟ್ಟುಪಾಡು ಹಾಕಿದ್ದರು. ಸುಶಾಂತ್ ಬೇರೆ ಕಡೆ ಹೋಗುವ ಪ್ಲಾನ್ ಮಾಡಿದರೆ ಅವರ ವೈದ್ಯಕೀಯ ರಿಪೋರ್ಟ್ ಗಳನ್ನು ಮಾಧ್ಯಮದ ಮುಂದೆ ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದರು.. ಮಾ#ನಸಿಕ ಖಿ#ನ್ನತೆಗೆ ಒಳಗಾಗಿದ್ದ ಸುಶಾಂತ್, ಈ ವಿಚಾರ ಮಾಧ್ಯಮದಲ್ಲಿ ಬಂದರೆ, ತಮ್ಮ ವೃತ್ತಿ#ಜೀವನ ಹಾಳಾಗುತ್ತದೆ. ಕೆಲಸ ಇಲ್ಲದಂತೆ ಆಗುತ್ತದೆ ಎಂಬ ಕಾರಣಕ್ಕೆ ರಿಯಾ ಚಕ್ರವರ್ತಿ ಅವರ ಮಾತುಗಳನ್ನು ಕೇಳಬೇಕಾಯಿತು ಎಂದು ಸುಶಾಂತ್ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ನಡೆದ ವಿಚಾರಣೆಯಲ್ಲಿ, ಪೊಲೀಸರಿಗೆ ರಿಯಾ ಚಕ್ರವರ್ತಿ ನೀಡಿರುವ ಮಾಹಿತಿ ಪ್ರಕಾರ ಜೂನ್ 8ರ ವರೆಗೆ ಸುಶಾಂತ್ ಹಾಗೂ ರಿಯಾ ಲಿ#ವ್ ಇನ್ ರಿಲೇ#ಶನ್ಷಿಪ್ ನಲ್ಲಿ ಇದ್ದರು ಎಂದು ತಿಳಿಸಿದ್ದಾರೆ.

Trending

To Top