Film News

ಡಿಸೆಂಬರ್ 18 ಕ್ಕೆ ಆರ್.ಹೆಚ್. 100 ಹಾರರ್ ಚಿತ್ರ ಬಿಡುಗಡೆ

ಬೆಂಗಳೂರು: ಇತ್ತಿಚಿಗೆ ಹಾರರ್ ಸಿನೆಮಾಗಳು ಸದ್ದು ಹೆಚ್ಚಾಗುತ್ತಿದೆ. ಈ ಸಾಲಿಗೆ ಹೆಸರಿನ ಮೂಲಕವೇ ಗಮನಸೆಳೆದಿರುವ ಆರ್.ಹೆಚ್ 100 ಸಿನೆಮಾದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಡಿಸೆಂಬರ್ 18ಕ್ಕೆ ಚಿತ್ರ ರಿಲೀಸ್ ಆಗಲಿದೆ.

ಎಸ್.ಎಲ್.ಎಸ್ ಪ್ರೊಸಕ್ಷನ್ ಅಡಿಯಲ್ಲಿ ಎಲ್. ಹರೀಶ್ ಕುಮಾರ್ ನಿರ್ಮಿಸುತ್ತಿರುವ ಹಾರರ್ ಮೂವಿ ಆರ್.ಹೆಚ್.100 ಚಿತ್ರವನ್ನು ಎಂ.ಸಿ. ಮಹೇಶ್ ನಿರ್ದೇಶನ ಮಾಡಿದ್ದಾರೆ. ಆಕ್ಟ್ 1978 ಚಿತ್ರದ ನಿರ್ಮಾಪಕ ದೇವರಾಜ್, ನಿರ್ದೇಶಕ ಹರಿ ಸಂತು, ನಟ ಚೇತನ್ ರಾಜ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. ಇನ್ನೂ ಈ ಚಿತ್ರವನ್ನು ಬಹುತೇಕ ಹೊಸ ನಟರೇ ಸೇರಿ ನಿರ್ಮಾಣ ಮಾಡಿದ್ದು, ಚಿತ್ರತಂಡಕ್ಕೆ ಗಣ್ಯರು ಶುಭ ಕೋರಿದ್ದಾರೆ.

ಇನ್ನೂ ಈ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಮಹೇಶ್, ನಮ್ಮ ಆರ್.ಹೆಚ್.100 ಚಿತ್ರವನ್ನು ಒಟ್ಟು ಮೂವತ್ತೆಂಟು ದಿನಗಳ ಕಾಲ ಬೆಂಗಳೂರು ಸೇರಿದಂತೆ ಕೊಡಚಾದ್ರಿಯಲ್ಲಿ ಚಿತ್ರವನ್ನು ಶೂಟಿಂಗ್ ಮಾಡಿದ್ದು, ಸೆನ್ಸಾರ್ ಬೋರ್ಡಿನಿಂದಲೂ ಎ ಪ್ರಮಾಣ ಪತ್ರ ಸಿಕ್ಕಿದೆ. ಡಿಸೆಂಬರ್ 18ರಂದು ಚಿತ್ರ ಬಿಡುಗಡೆಯಾಗಲಿದ್ದು, ಆರ್.ಹೆಚ್.100 ಶೀರ್ಷಿಕೆಯ ಅರ್ಥವನ್ನು ಚಿತ್ರಮಂದಿರಗಳಲ್ಲಿ ನೋಡಿದರೇ ಅರ್ಥವಾಗುತ್ತದೆ ಎಂದು ಶೀರ್ಷಿಕೆಯ ರಹಸ್ಯವನ್ನು ನಿಗೂಡವಾಗಿಯೇ ಇಟ್ಟಿದ್ದಾರೆ.

ಈ ಚಿತ್ರಕ್ಕೆ ಮೆಲ್ವಿನ್ ಮೈಕಲ್ ಸಂಗೀತ ನಿರ್ದೇಶಿಸಿದ್ದು, ಸಿದ್ದು ಹಾಗೂ ಮನೋಜ್ ಹಾಡುಗಳನ್ನು ಬರೆದಿದ್ದಾರೆ. ಸಂಜಿತ್ ಹೆಗಡೆ, ಅನುರಾಧ ಭಟ್, ಮನು, ಸಿದ್ದಾರ್ಥ್ ಚಿತ್ರದ ಗೀತೆಗಳನ್ನು ಹಾಡಿದ್ದಾರೆ. ಗಣೇಶ್, ಹರ್ಷ, ಚಿತ್ರ, ಸೋಮ್, ಕಾವ್ಯ ನಟಿಸಿದ್ದಾರೆ. ಒಟ್ಟಿನಲ್ಲಿ ಅನೇಕ ಯುವ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರಲ್ಲಿ ಭಯ ಹುಟ್ಟಿಸಲಿದೆ ಎಂದೇ ಹೇಳಲಾಗುತ್ತಿದೆ.

Trending

To Top