Film News

ಮತ್ತೊಂದು ಭೂಗತ ಲೋಕದ ಸಿನೆಮಾ ಮಾಡಲಿದ್ದಾರೆ ಆರ್.ಜಿ.ವಿ!

ಹೈದರಾಬಾದ್: ಇಡೀ ದೇಶದ ಸಿನಿರಂಗದಲ್ಲೇ ಸ್ಪೆಷಲ್ ಡೈರೆಕ್ಟರ್ ಎಂದು ಕರೆಯಲಾಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿಜ ಜೀವನದಲ್ಲಿ ನಡೆದಂತಹ ಕಥೆಗಳನ್ನು ಸಿನೆಮಾ ರೂಪದಲ್ಲಿ ತೆರೆಮೇಲೆ ತರವುದರಲ್ಲಿ ಎಕ್ಸಪರ್ಟ್. ಈ ಹಾದಿಯಲ್ಲಿ ಆರ್.ಜಿ.ವಿ ಮತ್ತೊಂದು ಅಂಡರ್ ವರ್ಲ್ಡ್ ಕುರಿತಂತೆ ಚಿತ್ರವನ್ನು ತೆರೆಮೇಲೆ ತರಲಿದ್ದಾರೆ.

ಆರ್.ಜಿ.ವಿ ತೆರೆಮೇಲೆ ತರಲಿರುವ ಭೂಗತ ಲೋಕಕ್ಕೆ ಸಂಬಂಧಿಸಿದಂತ ಚಿತ್ರವೇ ’ಡಿ ಕಂಪನಿ’ಎಂಬ ಚಿತ್ರ. ನಿನ್ನೆಯಷ್ಟೆ ಆರ್.ಜಿ.ವಿ.ಯವರೇ ಸ್ವತಃ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಟೀಸರ್ ಅನ್ನು ಶೇರ್ ಮಾಡಿದ್ದಾರೆ. ಜೊತೆಗೆ ಯೂಟೂಬ್ ಚಾನಲ್‌ನಲ್ಲಿ ಸಹ ಅಪ್‌ಲೋಡ್ ಮಾಡಿದ್ದಾರೆ. ಅಂದಹಾಗೆ ’ಡಿ ಕಂಪನಿ’ಚಿತ್ರ ಭೂಗತ ಲೋಕದ ಪಾತಕಿ ದಾವುದ್ ಇಬ್ರಾಹಿಂ ರವರ ಕಥನವೇ ’ಡಿ ಕಂಪನಿ’ಸಿನೆಮಾ ರೀತಿಯಲ್ಲಿ ತೆರೆಮೇಲೆ ಬರಲಿದೆ ಎನ್ನಲಾಗಿದೆ.

ಇನ್ನೂ ಆರ್.ಜಿ.ವಿ. ಈ ಹಿಂದೆ 2002 ನೇ ಇಸವಿಯಲ್ಲಿ ’ಕಂಪನಿ’ ಎಂಬ ಸಿನೆಮಾ ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ದಾವುದ್ ಇಬ್ರಾಹಿಂ ಹಾಗೂ ಚೋಟಾ ರಾಜನ್ ರವರ ಬಗೆಗಿನ ಚಿತ್ರಣ ನೀಡಿದ್ದರು. ಇನ್ನೂ ಡಿ ಕಂಪನಿ ಚಿತ್ರದ ಮೂಲಕ ಕ್ರೈಂ, ರಾಜಕೀಯ ಹಾಗೂ ಪಾತಕ ಲೋಕದಲ್ಲಿ ನಡೆದ ಘಟನೆಗಳ ಕುರಿತಂತೆ ಎಕ್ಸೈಟಿಂಗ್ ಮಾಹಿತಿಯನ್ನು ಬಹಿರಂಗಗೊಳಿಸಲಿದ್ದಾರಂತೆ.

ಈಗಾಗಲೇ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ೫ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಡಿ ಕಂಪನಿ ಟೀಸರ್ ಈ ಐದು ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಚಿತ್ರದ ನಿರ್ಮಾಣ ಕೆಲಸಗಳೂ ಸಹ ಭರದಿಂದ ಸಾಗಿದ್ದು, ಶೀಘ್ರದಲ್ಲೇ ತೆರೆ ಮೇಲೆ ಬರಲಿದೆಯಂತೆ.

Trending

To Top