ಆರ್.ಜಿ.ವಿ – ಉಪ್ಪಿ ಕಾಂಬಿನೇಷನ್ ನಲ್ಲಿ ಹೊಸ ಸಿನೆಮಾ, ಟೈಟಲ್ ರಿವೀಲ್

ದೇಶದ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರುಗಳಿಸಿರುವ ಕಾಂಟ್ರವರ್ಸಿ ನಿರ್ದೆಶಕ ಎಂದೇ ಕರೆಯಲಾಗುವ ರಾಮ್ ಗೋಪಾಲ್ ವರ್ಮ ಹಾಗೂ ಕನ್ನಡ ಸಿನಿರಂಗದ ರಿಯಲ್ ಸ್ಟಾರ್‍ ಉಪೇಂದ್ರ ಕಾಂಬಿನೇಷನ್‌ ನಲ್ಲಿ ಹೊಸ ಸಿನೆಮಾ ಶುರುವಾಗಿದ್ದು, ಸಿನೆಮಾಗೆ ಐ ಆಮ್ ’R’ ಎಂಬ ಟೈಟಲ್ ಇಡಲಾಗಿದೆ.

ಇನ್ನೂ ಚಿತ್ರದ ಶೀರ್ಷಿಕೆ ಬಿಡುಗಡೆಯ ಕಾರ್ಯಕ್ರಮ ಇತ್ತೀಚಿಗಷ್ಟೆ ಅದ್ದೂರಿಯಾಗಿ ನೆರವೇರಿದ್ದು, ಆರ್‍.ಜಿ.ವಿ ನಿರ್ದೇಶನ ಪ್ಯಾನ್ ಇಂಡಿಯಾ ಸಿನೆಮಾ ಇದಾಗಲಿದೆ. ಚಿತ್ರದ ನಾಯಕ ನಟರಾಗಿ ಉಪೇಂದ್ರ ಬಣ್ಣಹಚ್ಚಲಿದ್ದಾರೆ. ಎಸ್ಕೇರ್‍ ಪ್ರೊಡಕ್ಷನ್ ಬ್ಯಾನರ್‍ ಅಡಿಯಲ್ಲಿ ಈ ಸಿನೆಮಾ ನಿರ್ಮಾಣವಾಗುತ್ತಿದೆ. ಈ ಚಿತ್ರದ ಟೈಟಲ್ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ್ಪಿ, ಆರ್‍.ಜಿ.ವಿ ಯವರು ಒಳ್ಳೆಯ ನಿರ್ದೇಶಕರು, ನಾನು ಕಾಲೇಜಿನಲ್ಲಿ ಓದುವಾಗ ಓಂ ಚಿತ್ರದ ಸ್ಕ್ರಿಪ್ಟ್ ಸಿದ್ದಮಾಡಿಕೊಂಡಿದ್ದೆ. ಅದೇ ಸಮಯದಲ್ಲಿ ಅವರ ಶಿವ ಚಿತ್ರ ಬಿಡುಗಡೆಯಾಗಿದ್ದು, ಆ ಚಿತ್ರ ನೋಡಿದ  ಬಳಿಕ ನನ್ನ ಓಂ ಕಥೆಯನ್ನು ಪಕ್ಕಕ್ಕೆ ಇಟ್ಟೆ. ನಾಲ್ಕು ವರ್ಷಗಳ ಬಳಿಕ ಪುನಃ ಓಂ ಚಿತ್ರದ ಸ್ಕ್ರಿಪ್ಟ್ ಬದಲಾವಣೆ ಮಾಡಿದೆ. ಇದೀಗ ಅಂತಹ ನಿರ್ದೇಶಕರ ಜೊತೆ ಕೆಲಸ ಮಾಡಲು ಸಂತಸದ ವಿಚಾರ ಎಂದರು.

ಬಳಿಕ ಆರ್‍.ಜಿ.ವಿ ಮಾತನಾಡಿ, ಇತ್ತಿಚಿಗೆ ದಕ್ಷಿಣ ಭಾರತದ ಚಲನಚಿತ್ರ ಉದ್ಯಮ ಬಾಲಿವುಡ್ ಉದ್ಯಮಕ್ಕಿಂತ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕೆ.ಜಿಎಫ್ ಚಿತ್ರದ ಮೂಲಕ ಇಡೀ ಬಾಲಿವುಡ್ ದಕ್ಷಿಣ ಭಾರತದ ಸಿನಿರಂಗವನ್ನು ನೋಡುವಂತೆ ಮಾಡಿದೆ ಎಂದರು.

ಇನ್ನೂ ಟೈಟಲ್ ಬಿಡುಗಡೆಗೊಳಿಸಿ ಮಾತನಾಡಿದ ಕಿಚ್ಚ ಸುದೀಪ್, ನಾನು ಈ ಚಿತ್ರದಲ್ಲಿ ನಟನೆ ಮಾಡದೇ ಇರುವುದು ನೋವಿನ ಸಂಗತಿಯಾಗಿದೆ ಎಂದು ಹಾಸ್ಯಾತ್ನಕವಾಗಿ ನುಡಿದರು. ಚಲನಚಿತ್ರ ರಂಗದಲ್ಲಿ ನಾನು ಈ ಮಟ್ಟಿಗೆ ಬೆಳೆಯಲು ಕಾರಣ ಉಪೇಂದ್ರ, ಅದೇ ರೀತಿ ಬಾಲಿವುಡ್ ರಂಗಕ್ಕೆ ನನ್ನನ್ನು ಪರಚಿಯಿಸಿದವರು ಆರ್‍.ಜಿ.ವಿ. ಇದೀಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನೆಮಾ ಮೂಡಿಬರುತ್ತಿರುವುದು ಶುಭಸುದ್ದಿಯಾಗಿದೆ ಎಂದರು.

Previous articleಕೇಜಿಫ್ ಬಗ್ಗೆ ಸುದೀಪ್ ಮಾತಾಡಿರುವ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಜಾಕ್ ಮಂಜು ಹೇಳಿದ್ದೇನು ವಿಡಿಯೋ ನೋಡಿ!
Next articleಜಿ-5 ನಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಪ್ರದರ್ಶನ