ಹೈದರಾಬಾದ್: ಟಾಲಿವುಡ್ನ ಕಾಂಟ್ರವರ್ಸಿ ಡೈರೆಕ್ಟರ್ ಆರ್.ಜಿ.ವಿ ಏನು ಸ್ಟೇಟ್ಮೆಂಟ್ ಕೊಟ್ಟರೂ ಸಹ ಅದು ಸಂಚಲನವಾಗಿ ಮಾರ್ಪಾಡು ಆಗುತ್ತದೆ. ಇದೀಗ ಕಾಂಟ್ರವರ್ಸಿ ನಟಿ ಎಂತಲೇ ಕರೆಯುವ ಕಂಗನಾ ರಾಣಾವತ್ ಕುರಿತು ಕೆಲವೊಂದು ಸಂಚಲನಾತ್ಮಕ ಕಾಮೆಂಟ್ಸ್ಗಳನ್ನು ನೀಡಿದ್ದಾರೆ ಆರ್.ಜಿ.ವಿ.
ನಟಿ ಕಂಗನಾ ರಾಣವತ್ ಧಾಕಡ್ ಎಂಬ ಸಿನೆಮಾದಲ್ಲಿ ಏಜೆಂಟ್ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ವಿಷಯವೇ. ಈ ಚಿತ್ರಕ್ಕಾಗಿ ಕಂಗನಾ ತುಂಬಾ ಕಷ್ಟಪಡುತ್ತಿದ್ದಾರಂತೆ. ಬಿಗ್ ಬಜೆಟ್ ಸಿನೆಮಾ ಇದಾಗಿದ್ದು, ಏಜೆಂಟ್ ಪಾತ್ರದಲ್ಲಿ ಕಂಗನಾ ರಂಜಿಸಲಿದ್ದಾರೆ. ಇನ್ನೂ ಈ ಸಿನೆಮಾದ ಕೆಲವೊಂದು ಪೊಟೋಗಳನ್ನು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಪೊಟೋಗಳನ್ನು ಕಂಡ ಆರ್.ಜಿ.ವಿ. ಶಾಕ್ ಆಗಿದ್ದಾರಂತೆ.
ನಾನು ನನ್ನ ಸಿನಿ ಕೆರಿಯರ್ನಲ್ಲಿ ಇಲ್ಲಿಯವರೆಗೂ ಕಾಣದ ನಟಿ ಕಂಗನಾ ಆಗಿದ್ದಾರೆ. ಕಂಗನಾ ನ್ಯೂಕ್ಲಿಯರ್ ಬಾಂಬ್ ಇದ್ದಂಗೆ. ಓರ್ವ ಪ್ರೊಫೆಷನಲ್ ಫಿಲಂ ಮೇಕರ್ ಆಗಿ ನನ್ನ ಕೆರಿಯರ್ ನಲ್ಲಿ ನಾನು ನೋಡಿದ ಬೆಸ್ಟ್ ಕ್ಲೋಜಪ್ ಇದಾಗಿದೆ. ಇಂತಹ ರಿಯಾಲಿಟ ಪೊಟೋ ನೋಡಿದ ಮೇಲೆ ನಾನು ಅಷ್ಟರ ಮಟ್ಟಿಗೆ ಬೇರೆ ಯಾರನ್ನೂ ನೋಡಲು ಇಷ್ಟಪಡುವುದಿಲ್ಲ ಎಂಬೆಲ್ಲಾ ಶಾಕಿಂಗ್ ಕಾಮೆಂಟ್ಸ್ಗಳನ್ನು ನೀಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೆ ಕಂಗನಾ ಧಕಾಡ್ ಚಿತ್ರದ ಪೊಟೋವೊಂದನ್ನು ಶೇರ್ ಮಾಡಿ ಯುದ್ದದಲ್ಲಿ ಹೋರಾಡಿ ಸಂತೈಸಿಕೊಳ್ಳುವುದು ವಿಚಿತ್ರವಾಗಿ ನೀವು ಅಂದುಕೊಳ್ಳಬಹುದು, ಕತ್ತಿಗಳ ಘರ್ಷಣೆಯ ಶಬ್ದದ ನಡುವೆ ಪ್ರೀತಿಗೆ ಬೀಳುವುದು ಸಾಧ್ಯವಿಲ್ಲ ಎಂದು ನೀವು ಅಂದುಕೊಳ್ಳಬಹುದು, ನಿಮಗೆ ಯುದ್ದ ರಂಗ ಅನ್ನುವುದು ಕೇವಲ ರಿಯಾಲಿಟಿ ಆಗಬಹುದು ಆದರೆ ಹೋರಾಟಕ್ಕಾಗಿ ಜನಿಸಿದವರಿಗೆ ಅದಕ್ಕಿಂತಲೂ ಗೌರವದ ಪ್ರದೇಶ ಬೇರೆ ಯಾವುದು ಇರಲ್ಲ ಎಂದು ಟ್ವೀಟ್ ಮಾಡಿದ್ದರು.
