News

ಖ್ಯಾತ ಪತ್ರಕರ್ತ ಮಹಾದೇವ ಪ್ರಕಾಶ್ ನಿಧನ

ಕರ್ನಾಟಕದ ಖ್ಯಾತ ಪತ್ರಕರ್ತ ಹಾಗೂ ಯಡಿಯೂರಪ್ಪ ನವರ ಆಪ್ತ ಸ್ನೇಹಿತನಂತೆ ಇದ್ದ ಪತ್ರಪರ್ತರು ಈಗ ಸಾವನಪ್ಪಿದ್ದಾರೆ.ಈಗಂತೂ ಎಲ್ಲಿ ನೋಡಿದ್ದರು ಸಾವಿನ ಸುದ್ದಿಯೇ ಮೊದಲು ದೂರದಲ್ಲಿ ಒಬ್ಬ ವ್ಯಕ್ತಿ ಕೊರೋನದಿಂದ ಸತ್ತ ಎಂಬ ಮಾತು ಕೇಳಿಬರುತ್ತಿತ್ತು, ಈಗ ಜಿಲ್ಲೆ ತಾಲೂಕಿನಲ್ಲಯೂ ಸಹ ಸಾಮಾನ್ಯವಾಗಿ ಬಿಟ್ಟಿದೆ.

ಕರ್ನಾಟಕದಲ್ಲಿ ಇದೀಗ ಕೊರೋನ ತಾಂಡವವಾಡುತ್ತಿದೆ ಕೊರೋನ ಸಾಮಾನ್ಯ ಜನರು ಸೆಲೆಬ್ರೆಟಿಗಳು ಎಂದು ಯಾರನ್ನು ನೋಡುತ್ತಿಲ್ಲ.ಇತಿಚಿಗಷ್ಟೇ ಮಾಲಾಶ್ರೀ ಅವರ ಗಂಡ ಕೋಟಿ ರಾಮು ಅವರು, ಮತ್ತು ಬೆಟ್ಟದ ಹೂ ಖ್ಯಾತಿಯ ಶಂಖನಾದ್ ಅರವಿಂದ್ ಅವರು ಹೀಗೆ ಅಲವಾರು ಚಿತ್ರರಂಗದ ಗಣ್ಯಾತಿ ಗಣ್ಯರನ್ನು ಬಲಿತೆಗೆದುಕೊಂಡಿತ್ತು.

ಇದೀಗ ಕನ್ನಡದ ಖ್ಯಾತ ಪತ್ರಕರ್ತರಾದ ಮಹದೇವ ಪ್ರಕಾಶ್ ಅವರು ಕೊರೋನಾಗೆ ಬಲಿಯಾಗಿದ್ದಾರೆ.ಮಹದೇವ ಪ್ರಕಾಶ್ ಅವರು ಹಿರಿಯ ಪತ್ರಕರ್ತರಾಗಿ ಟಿವಿ ಮಾಧ್ಯಮದಲ್ಲಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಇವರು ಪಬ್ಲಿಕ್ ಟಿವಿಯಲ್ಲಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ವಿಶ್ಲೇಷಕರಾಗಿ ಬರುತ್ತಿದ್ದರು.ಮಹದೇವ ಪ್ರಕಾಶ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರ ಮಾಧ್ಯಮ ಸಲಹೆಗಾರರಾಗಿ ಕೆಲವು ದಿನಗಳ ಕಾಲ ಸೇವೆಸಲ್ಲಿಸಿದರು.

Trending

To Top