ಸ್ಯಾಂಡಲ್ ವುಡ್ ನಲ್ಲಿ ಬಿಗ್ ಬಜೆಟ್ ಸಿನೆಮಾ ಹಾಗೂ ಬಹುನಿರೀಕ್ಷಿತ ಸಿನೆಮಾ ಕಬ್ಜ ಶೂಟಿಂಗ್ ಮುಗಿಸಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕಳೆದ ಶನಿವಾರ (ಸೆ.17) ರಂದು ಈ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ. ಇನ್ನೂ ಈ ಟೀಸರ್ ಕಂಡ ಪರಭಾಷೆಯ ಸ್ಟಾರ್ ನಟರೂ ಸಹ ಫಿದಾ ಆಗಿದ್ದು, ಮೆಚ್ಚುಗೆಯನ್ನು ಸಹ ಸೂಚಿಸಿದ್ದಾರೆ. ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಈ ಸಿನೆಮಾದ ಟೀಸರ್ ಒಂದೇ ದಿನದಲ್ಲಿ ಒಂದೂವರೆ ಕೋಟಿಗೂ ಅಧಿಕ ವೀಕ್ಷಣೆಯನ್ನು ಕಂಡು ದಾಖಲೆ ಕ್ರಿಯೇಟ್ ಮಾಡಿದೆ.
ಕೆಜಿಎಫ್ ಸಿನೆಮಾದ ಬಳಿಕ ಸ್ಯಾಂಡಲ್ ವುಡ್ ಮೂಲಕ ಸಿನಿರಂಗದಲ್ಲಿ ಕಮಾಲ್ ಮಾಡಲು ಮತ್ತೊಂದು ಸಿನೆಮಾ ಬರಲಿದ್ದು, ಅದೇ ಉಪ್ಪಿ ಅಭಿನಯದ ಕಬ್ಜ ಸಿನೆಮಾ. ಈಗಾಗಲೇ ಈ ಸಿನೆಮಾದ ಮೇಲೆ ತುಂಬಾ ನಿರೀಕ್ಷೆ ಹುಟ್ಟಿಸಿತ್ತು. ಇದೀಗ ಟ್ರೈಲರ್ ಬಿಡುಗಡೆಯಾಗಿದ್ದು, ಸಿನೆಮಾದ ಮೇಲಿನ ನಿರೀಕ್ಷೆ ಮತಷ್ಟು ಹೆಚ್ಚಿಸಿದೆ. ಇನ್ನೂ ಬಿಡುಗಡೆಯಾದ ಟೀಸರ್ ನಲ್ಲಿ ಪ್ರತಿಯೊಂದು ದೃಶ್ಯದಲ್ಲೂ ಸಹ ಶ್ರೀಮಂತಿಕೆ ಕಾಣುತ್ತಿದೆ. ಇನ್ನೂ ಟೀಸರ್ ನಲ್ಲಿನ ಮ್ಯೂಸಿಕ್ ಸಹ ತುಂಬಾ ಅಟ್ರಾಕ್ಟ್ ಮಾಡಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ರವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಛಾಯಾಗ್ರಹಣವನ್ನು ಎ.ಜೆ.ಶೆಟ್ಟಿ ನಿರ್ವಹಿಸಿದ್ದು, ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೂ ಟೀಸರ್ ನೋಡಿದ ಮೇಳೆ ಸಿನೆಮಾ ದೊಡ್ಡ ರೇಂಜ್ ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿದೆ ಎನ್ನಬಹುದಾಗಿದೆ. ಟೀಸರ್ ನಲ್ಲಿ ಕಿಚ್ಚ ಸುದೀಪ್ ರವರ ಗೆಟಪ್ ಸಹ ರವೀಲ್ ಆಗಿದ್ದು, ಸಿನೆಮಾದಲ್ಲಿನ ಉಪ್ಪಿ ನ್ಯೂ ಲುಕ್ ಕಂಡ ಅವರ ಅಭಿಮಾನಿಗಳು ಶಿಳ್ಳೆ ಹೊಡೆದಿದ್ದಾರೆ.
ಇನ್ನೂ ಉಪ್ಪಿ ಅಭಿನಯದ ಕಬ್ಜ ಸಿನೆಮಾದ ಟೀಸರ್ ಕಂಡ ದೇಶದ ವಿವಿಧ ಭಾಷೆಗಳ ಸಿನಿರಂಗ ಮೆಚ್ಚುಗೆ ವ್ಯಕ್ತಪಡಿಸಿದೆ. ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಹ ಟೀಸರ್ ನೋಡಿ ವಾವ್ ಅಂದಿದ್ದಾರೆ. ಟೀಸರ್ ತುಂಬಾ ಚೆನ್ನಾಗಿದೆ. ಉಪೇಂದ್ರ, ಸುದೀಪ್ ಹಾಗೂ ಡೈರೆಕ್ಟರ್ ಆರ್.ಚಂದ್ರು ರವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ಇನ್ನೂ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲೇ ಸುಮಾರು ಒಂದೂ ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. ಸ್ಯಾಂಡಲ್ ವುಡ್ ನ ಈ ಪ್ಯಾನ್ ಇಂಡಿಯಾ ಸಿನೆಮಾಗೆ ನನ್ನ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಸಿನೆಮಾದ ಟೀಸರ್ ಯೂಟ್ಯೂಬ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದು. ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇನ್ನೂ ಈ ಸಿನೆಮಾಗಾಗಿ ಇಡೀ ದೇಶದ ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನೂ ಕನ್ನಡದ ಸಿನೆಮಾ ಕೆಜಿಎಫ್ ಇಡೀ ವಿಶ್ವವೇ ಕನ್ನಡ ಸಿನಿರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಅದರಲ್ಲೂ ಕೆಜಿಎಫ್-2 ಸಿನೆಮಾ ದೇಶದ ಅನೇಕ ರೆಕಾರ್ಡ್‌ಗಳನ್ನು ಸಹ ಬ್ರೇಕ್ ಮಾಡಿತ್ತು. ಇದೀಗ ಕಬ್ಜ ಸಿನೆಮಾ ಸಹ ದೇಶದಲ್ಲಿ ಹವಾ ಸೃಷ್ಟಿ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
