Film News

ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ಉಪೇಂದ್ರ ದಾಖಲು, ವಿಡಿಯೋ ಮೂಲಕ ಉಪ್ಪಿ ಕೊಟ್ರು ಕ್ಲಾರಿಟಿ….!

ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್‍ ಉಪೇಂದ್ರ ರಾಜಕೀಯ ಹಾಗೂ ಸಿನೆಮಾ ಎರಡೂ ರಂಗದಲ್ಲೂ ಸಕ್ರಿಯರಾಗಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂಬ ಸುದ್ದಿಯೊಂದು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದಂತೆ ಈ ಬಗ್ಗೆ ನಟ ಉಪೇಂದ್ರ ರವರೇ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋದಲ್ಲಿ ಉಪೇಂದ್ರ ಏನು ಹೇಳಿದ್ದಾರೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಕನ್ನಡ ಸಿನಿರಂಗದ ಖ್ಯಾತ ಸ್ಟಾರ್‍ ನಟ ಉಪೇಂದ್ರ ರವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಬೆಂಗಳೂರಿನ ನೆಲಮಂಗಳ ಬಳಿಯಿರುವಂತಹ ಹರ್ಷ ಎಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ನೀಡಲಾಗುತ್ತಿದೆ ಎಂದು ಸುದ್ದಿಯೊಂದು ಹರಿದಾಡಿತ್ತು. ಈ ಸುದ್ದಿ ಕೇಳಿದ ಉಪ್ಪಿ ಅಭಿಮಾನಿಗಳು ಸೇರಿದಂತೆ ಅನೇಕರು ಆಂತಕಗೊಂಡಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಉಪೇಂದ್ರ ರವರು ಸ್ಪಷ್ಟನೆ ನೀಡಿದ್ದಾರೆ. ಶೂಟಿಂಗ್ ಸೆಟ್ ನಿಂದಲೇ ಆತ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋ ಹೊರಬಂದ ಬಳಿಕ ಉಪ್ಪಿ ಅಭಿಮಾನಿಗಳು ನಿರಾಳರಾಗಿದ್ದಾರೆ.

ಇನ್ನೂ ತಮ್ಮ ಬಗೆಗಿನ ರೂಮರ್‍ ಬಗ್ಗೆ ಸ್ಪಷ್ಟನೆ ನೀಡಿರುವ ಉಪೇಂದ್ರ ರವರು ನಾನು ಆರೋಗ್ಯವಾಗಿಯೇ ಇದ್ದೀನಿ, ನನಗೆ ಏನು ಆಗಿಲ್ಲ. ನಾವು ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಆರಾಮಾಗಿ ಇದ್ದೀನಿ, ಇಲ್ಲಿ ಧೂಳು ಜಾಸ್ತಿ ಇದ್ದ ಕಾರಣ ಕೊಂಚ ಕಷ್ಟವಾಗಿತ್ತು. ಏನು ಆಗಿಲ್ಲ ಶೂಟಿಂಗ್ ಸಹ ಮುಂದುವರೆಸಿದ್ದೇವೆ. ಎಲ್ಲರೂ ಇಲ್ಲೇ ಇದ್ದಿವಿ ನೋಡಿ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ರಿಯಲ್ ಸ್ಟಾರ್‍ ಉಪೇಂದ್ರ ರವರು ಸದ್ಯ ಯುಐ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಶೂಟಿಂಗ್ ಶೆಡ್ಯೂಲ್ಡ್ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಇದೀಗ ಅಲ್ಲಿಂದಲೇ ತಮ್ಮ ಮೇಲಿನ ರೂಮರ್‍ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಉಪೇಂದ್ರ ರವರ ಯುಐ ಸಿನೆಮಾದ ಆಕ್ಷನ್ ಸೀನ್ ಗಳ ಚಿತ್ರೀಕರಣ ನಡೆಯುತ್ತಿದೆ. ಸುಮಾರು ವರ್ಷಗಳ ಬಳಿಕ ಉಪೇಂದ್ರ ರವರೇ ನಿರ್ದೇಶಿಸಿ ನಟಿಸುತ್ತಿರುವ ಸಿನೆಮಾ ಇದಾಗಿದೆ. ಈ ಸಿನೆಮಾದಲ್ಲಿ ಕನ್ನಡ ಸಿನಿರಂಗದ ದೊಡ್ಡ ಕಲಾವಿದರ ಬಳಗವೇ ಇದೆ. ಇನ್ನೂ ಅವರು ಕಬ್ಜ ಸಿನೆಮಾದಲ್ಲೂ ಸಹ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಕನ್ನಡ ಸಿನಿರಂಗದಲ್ಲಿ ತುಂಬಾ ನಿರೀಕ್ಷೆ ಹುಟ್ಟಿಸಿದ ಸಿನೆಮಾ ಆಗಿದೆ. ಈ ಸಿನೆಮಾ ಮುಂದಿನ ವರ್ಷ ತೆರೆಗೆ ಬರಲಿದ್ದು, ಇತ್ತೀಚಿಗಷ್ಟೆ ಸಿನೆಮಾ ಟ್ರೈಲರ್‍ ಸಹ ರಿಲೀಸ್ ಆಗಿದ್ದು, ಸಿನೆಮಾದ ಮೇಲಿನ ನಿರೀಕ್ಷೆ ಮೂಡಿಸಿದೆ.

Trending

To Top