ವೈಜಾಗ್ ನಲ್ಲಿ ನಡೆಯಲಿದೆ RC15 ಶೂಟಿಂಗ್: ನಿರ್ದೇಶಕ ಶಂಕರ್ ವಿಭಿನ್ನ ಪ್ಲಾನ್

ಖ್ಯಾತ ನಿರ್ದೇಶಕ ಶಂಕರ್‍ ಹಾಗೂ ಮೆಗಾ ಫ್ಯಾಮಿಲಿಯ ನಟ ರಾಮ್ ಚರಣ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೊಸ ಸಿನೆಮಾದ ಶೂಟಿಂಗ್ ಕೆಲಸಗಳು ವೈಜಾಗ್ ನಲ್ಲಿ ನಡೆಯಲಿದೆ. ನಿರ್ದೇಶಕ ಶಂಕರ್‍ ಹೊಸ ಪ್ಲಾನ್ ಗಳೊಂದಿಗೆ ಶೂಟಿಂಗ್ ವೈಜಾಗ್ ನಲ್ಲಿ ಫಿಕ್ಸ್ ಮಾಡಿದ್ದಾರೆ ಎನ್ನಲಾಗುತ್ತಿದ್ದು. ಈ ಸಿನೆಮಾದಲ್ಲಿ ಇಲ್ಲಿ ತೆಗೆಯುವ ದೃಶ್ಯಗಳೆ ಹೈಲೆಟ್ ಆಗಲಿದೆ ಎಂದು ಹೇಳಲಾಗುತ್ತಿದೆ.

ನಟ ರಾಮ್ ಚರಣ್ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿ ಇದ್ದಾರೆ. ಆರ್‍.ಆರ್‍.ಆರ್‍ ಬಳಿಕ, ಆಚಾರ್ಯ ಇದೀಗ ಹೊಸ ಸಿನೆಮಾ.  ಇದೀಗ ನಿರ್ದೇಶಕ ಶಂಕರ್‍ ಸಾರಥ್ಯದಲ್ಲಿ ಮೂಡಿಬರಲಿರುವ ಈ ಸಿನೆಮಾಗೆ ಇನ್ನೂ ಟೈಟಲ್ ಫಿಕ್ಸ್ ಮಾಡಿಲ್ಲ. ರಾಮ್ ಚರಣ್ ರವರ 15 ನೇ ಸಿನೆಮಾ ಇದಾಗಿದ್ದು. ಸಿನೆಮಾದ ಶೂಟಿಂಗ್ ಕೆಲಸಗಳು ಭರದಿಂದ ಸಾಗುತ್ತಿದೆ. ಮೂಲಗಳ ಪ್ರಕಾರ ಈ ಸಿನೆಮಾದ ಆಕ್ಷನ್ ಸೀನ್ ಗಳು, ಒಂದು ಸಾಂಗ್ ಪೂರ್ಣ ಗೊಂಡಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ವೈಜಾಗ್ ನಲ್ಲಿ ಸಿನೆಮಾದ ಮುಂದಿನ ಭಾಗವನ್ನು ಚಿತ್ರೀಕರಿಸಲು ಶಂಕರ್‍ ಸಿದ್ದವಾಗಿದ್ದಾರೆ. ಮೇ 5 ರ ಬಳಿಕ ಶೂಟಿಂಗ್ ಕೆಲಸಗಳು ನಡೆಯಲಿದೆ ಎನ್ನಲಾಗುತ್ತಿದೆ. ಈ ಸಮಯದಲ್ಲಿ ಹಿರೋ ಹಿರೋಯಿನ್ ನಡುವಣ ಪ್ರಮುಖ ಸನ್ನಿವೇಶಗಳನ್ನು ಚಿತ್ರೀಕರಣ ನಡೆಸಲಿದ್ದಾರಂತೆ. ಮತ್ತೊಂದು ಮಾಹಿತಿಯಂತೆ ಇಲ್ಲಿ ಚಿತ್ರೀಕರಿಸುವ ದೃಶ್ಯಗಳು ಸಿನೆಮಾದಲ್ಲಿ ಹೈಲೆಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ವಾಗಲಿರುವ ಈ ಸಿನೆಮಾದಲ್ಲಿ ರಾಮ್ ಚರಣ್ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ರಾಮ್ ಚರಣ್ ಸಿನಿರಂಗದ 15ನೇ ಸಿನೆಮಾ ಇದಾಗಿದ್ದು, ರಾಮ್ ಚರಣ್ ಗೆ ನಾಯಕಿಯಾಗಿ ಕಿಯಾರಾ ಅದ್ವಾನಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಅಂಜಲಿ, ನವಿನ್ ಚಂದ್ರ, ಸುನೀಲ್, ಜಯರಾಂ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳನ್ನು ಪೋಷಣೆ ಮಾಡಲಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ ಬ್ಯಾನರ್‍ ನಡಿ ಖ್ಯಾತ ನಿರ್ಮಾಪಕ ದಿಲ್ ರಾಜು ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬದಂದು ಸಿನೆಮಾ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡ ಹೊಂದಿದೆ.

Previous articleಚಿರು ನೆನಪಲ್ಲೇ 4ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನಟಿ ಮೇಘನಾ ರಾಜ್
Next articleಸರ್ಕಾರು ವಾರಿ ಪಾಟ ಟ್ರೈಲರ್ ರಿಲೀಸ್, ಜಗನ್ ಡೈಲಾಗ್ ಭಟ್ಟಿ ಇಳಿಸಿದ ಮಹೇಶ್