Film News

ನಾಳೆ ರವಿತೇಜ ಅಭಿನಯದ ಕ್ರ್ಯಾಕ್ ಚಿತ್ರ ಬಿಡುಗಡೆ

ಹೈದರಾಬಾದ್: ಟಾಲಿವುಡ್ ಮಾಸ್ ಮಹಾರಾಜ ಎಂದು ಖ್ಯಾತಿ ಪಡೆದಿರುವಂತಹ ರವಿತೇಜ ನಟನೆಯ ಕ್ರ್ಯಾಕ್ ಚಿತ್ರ ಇದೇ ಜನವರಿ ೯ ರಂದು ಬಿಡುಗಡೆಯಾಗಲಿದೆ. ಪಕ್ಕಾ ಮಾಸ್ ಚಿತ್ರ ಇದಾಗಿದ್ದು, ಸಿನಿರಸಿಕರನ್ನು ಸೆಳೆಯಲಿದೆ ಎನ್ನಲಾಗುತ್ತಿದೆ.

ಕೆಲವು ದಿನಗಳ ಹಿಂದೆ ರವಿತೇಜ ರವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಇದೀಗ ಆರೋಗ್ಯವಂತರಾಗಿದ್ದು ಸಿನೆಮಾಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದೀಗ ಕ್ರ್ಯಾಕ್ ಚಿತ್ರ ಬಿಡುಗಡೆಯಾಗಲಿದ್ದು, ಈ ಚಿತ್ರದ ಮೇಲೆ ರವಿತೇಜ ರವರು ಭಾರಿ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರಂತೆ. ಇನ್ನೂ ಈ ಚಿತ್ರ ಹಿಟ್ ಆದ ಬಳಿಕ ತಮ್ಮ ಸಂಭಾವನೆಯನ್ನು ಸಹ ಏರಿಸಿಕೊಳ್ಳುವುದಾಗಿ ನಿರ್ಧರಿಸಿದ್ದಾರಂತೆ ರವಿತೇಜ.

ಟಾಲಿವುಡ್ ನ ಸ್ಟಾರ್ ನಟರ ಪೈಕಿ ಕಡಿಮೆ ಸಂಭಾವನೆ ಪಡೆಯುತ್ತಿರುವ ರವಿತೇಜ ರವರು, ಇದೀಗ ಸಂಭಾವನೆ ಹೆಚ್ಚಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಕ್ರ್ಯಾಕ್ ಚಿತ್ರ ಹಿಟ್ ಆಗುವವರೆಗೂ ಯಾವುದೇ ಹೊಸ ಸಿನೆಮಾ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸಂಭಾವನೆ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ೨ ಚಿತ್ರಗಳನ್ನು ಸಹ ತಿರಸ್ಕರಿಸಿದ್ದಾರಂತೆ. ಟಾಲಿವುಡ್ ನ ನಿರ್ದೇಶಕ ನಕ್ಕಿನಿ ತ್ರಿನಾಥ್ ರಾವ್ ಹಾಗೂ ಮಾರುತಿ ಅವರು ಸಿನೆಮಾ ಕಥೆಗಳನ್ನು ಹೇಳಿದ್ದು, ಕಥೆ ಸಹ ರವಿತೇಜ ಒಪ್ಪಿದ್ದರಂತೆ. ಸಂಭಾವನೆ ಕಡಿಮೆ ಎಂಬ ಕಾರಣಕ್ಕಾಗಿ ಈ ಸಿನೆಮಾಗಳಲ್ಲಿ ನಟಿಸಲು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಕೆಲವೊಂದು ಮೂಲಗಳ ಪ್ರಕಾರ ರವಿತೇಜ ತಮ್ಮ ಕ್ರ್ಯಾಕ್ ಚಿತ್ರ ಹಿಟ್ ಆದ ನಂತರ ಪ್ರಸ್ತುತ ತಾವು ಪಡೆಯುತ್ತಿರುವ ಸಂಭಾವನೆಗಿಂತ ೩೫ ರಿಂದ ೪೦% ರಷ್ಟು ಹೆಚ್ಚುವರಿ ಸಂಭಾವನೆಗಾಗಿ ಬೇಡಿಕೆ ಇಡಲಿದ್ದಾರಂತೆ. ಇನ್ನೂ ಕ್ರ್ಯಾಕ್ ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಗೋಪಿಚಂದ್ ಮಲಿನೇನಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

Trending

To Top