News

(video)ನನ್ನ ಮಗಳ ಮದುವೆ ಅಂದ್ರೆ ಪ್ರಚಾರ ಅಲ್ಲ ,ಯಾವ ಮೀಡಿಯಾನೂ ಬಿಡಲ್ಲ ಎಂದು ಖಡಕ್ ಆಗಿ ಹೇಳಿದ ರವಿ ಚಂದ್ರನ್!

marriaage1

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಮಗಳ ಸದ್ಯದಲ್ಲೇ ಬಹಳ ಅದ್ದೂರಿ ಆಗಿ ನಡೆಯಲಿದೆ. ಇತ್ತೀಚಿಗೆ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಕನ್ನಡ ಚಿತ್ರ ರಂಗದ ಗಣ್ಯರಿಗೆ, ದೊಡ್ಡ ದೊಡ್ಡ ಸ್ಟಾರ್ ಗಳಿಗೆ, ಆಹ್ವಾನ ಕೊಟ್ಟಿದ್ದಾರೆ. ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ, ಪುನೀತ್ ರಾಜಕುಮಾರ್ ಅವರಿಗೆ, ಶಿವಣ್ಣ ಅವರಿಗೆ, ಶ್ರೀ ಮುರಳಿ ಅವರಿಗೆ, ಸುದೀಪ್ ಅವರಿಗೆ ಆಹ್ವಾನ ಪತ್ರ ಕೊಟ್ಟಿದ್ದಾರೆ. ನೆನ್ನೆ ರವಿ ಚಂದ್ರನ್ ಅವರು ಮೀಡಿಯಾದವರನ್ನು ತಮ್ಮ ಮನೆಗೆ ಕರಿಸಿ, ದಯವಿಟ್ಟು ನೀವು ಮಾತ್ರ ಬನ್ನಿ, ನಿಮ್ಮ ಕ್ಯಾಮೆರಾ ವನ್ನು ತರಬೇಡಿ! ನಾನೇ ನಿಮಗೆ CD ಕೊಡುತ್ತೇನೆ ಎಂದು ಖಡಕ್ ಆಗಿ ಹೇಳಿದ್ದಾರೆ! ರವಿ ಸರ್ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ತಕಧಿಮಿತಾ ಕನ್ನಡದ ಟಾಪ್ ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಒಂದು. ಈ ಶೋನಲ್ಲಿ ನಮ್ಮ ಅಕುಲ್ ಬಾಲಾಜಿ ಅವರು ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಶೋನಲ್ಲಿ ನಮ್ಮ ಕ್ರೇಝಿ ಸ್ಟಾರ್ ರವಿಚಂದ್ರನ್ ಹಾಗು ನಟಿ ಸುಮನ್ ರಂಗನಾಥ್ ಅವರು ಜಡ್ಜ್ ಆಗಿದ್ದಾರೆ. ತಕಧಿಮಿತಾ ಶೋನ ಇತ್ತೀಚಿನ ಒಂದು ಎಪಿಸೋಡ್ ನಲ್ಲಿ ನಮ್ಮ ಕ್ರೇಝಿ ಸ್ಟಾರ್ ರವಿ ಚಂದ್ರನ್ ಅವರು “ನಾನು ಕೂಡ ಚಿಕ್ಕ ವಯಸ್ಸಿನಲ್ಲಿ ಕಾಂಪೌಂಡ್ ಹಾರಿದ್ದೇನೆ” ಎಂದು ತಾವು ಚಿಕ್ಕವರಾಗಿದ್ದಾಗ ಆಗಿರುವ ನೆನಪುಗಳನ್ನು ಹಂಚಿಕೊಂಡಿದ್ದಾರೆ! ಅದರ ಬಗ್ಗೆ ಕಾಮಿಡಿ ಮಾಡಬೇಡ ಎಂದು ಅಕುಲ್ ಗೆ ಖಡಕ್ ವಾರ್ನ್ ಮಾಡಿದ್ದಾರೆ! ಅಕುಲ್ ಅವರಿಗೆ ಕ್ಲಾಸ್ ತಗೊಂಡ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನೆನ್ನೆ ಬೆಂಗಳೂರಿನಲ್ಲಿ ನಮ್ಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ರಿಯಾಲಿಟಿ ಷೋ ತಕಧಿಮಿತ ಉಧ್ಘಟನೆ ಸಮಾರಂಭ ಆಯೋಜಿಸಲಾಗಿತ್ತು. ಈ ರಿಯಾಲಿಟಿ ಶೋನಲ್ಲಿ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಕೂಡ ಒಬ್ಬ ಜಡ್ಜ್! ಇದರ ಪ್ರೆಸ್ ಮೀಟ್ ನಲ್ಲಿ ರವಿ ಚಂದ್ರನ್ ಅವರನ್ನು ತಮ್ಮ ಹೊಸ ಚಿತ್ರವಾದ ದಶರಥ ಚಿತ್ರದ ಬಗ್ಗೆ ಕೇಳಿದಾಗ, ರವಿ ಚಂದ್ರನ್ ಅವರು, “ದಶರಥ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಧ್ವನಿ ಕೊಟ್ಟಿರುವ ವಿಷ್ಯ ನನಗೆ ಈಗಲೇ ಗೊತ್ತಾಗಿದ್ದು, ದರ್ಶನ್ ಅವರ ಹೆಸರನ್ನು ಪೋಸ್ಟರ್ ಮೇಲೆ ನೋಡಿದ ಮೇಲೆ ತಿಳಿಯಿತು, ನಿರ್ಮಾಪಕರು ನನಗೆ ಇದರ ಬಗ್ಗೆ ಹೇಳಿರಲಿಲ್ಲ” ಎಂದು ರವಿ ಚಂದ್ರನ್ ಹೇಳಿದ್ದಾರೆ. ರವಿ ಚಂದ್ರನ್ ಅವರು ದರ್ಶನ್ ಅವರು ದಶರಥ ಚಿತ್ರದಲ್ಲಿರುವ ಬಗ್ಗೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ಇತ್ತೀಚಿಗೆ ನಮ್ಮ ಕನ್ನಡದ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಕಲರ್ಸ್ ಅಲ್ಲಿ ಬರುವಂತಹ ಹೊಸ ರಿಯಾಲಿಟಿ ಶೋನ ಉಧ್ಘಟನೆ ಕಾರ್ಯಕ್ರಮದಲ್ಲಿ ಬಂದಿದ್ದರು. ಈ ರಿಯಾಲಿಟಿ ಶೋವಿನ ಹೆಸರು ತಕಧಿಮಿತ. ತಕಧಿಮಿತ ರಿಯಾಲಿಟಿ ಶೋನಲ್ಲಿ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಸರ್ ಅವರು ಕೂಡ ಜಡ್ಜ್ ಆಗಿದ್ದಾರೆ. ಈ ಸಮಯದಲ್ಲಿ ಮಾಧ್ಯಮದವರ ಜೊತೆ ಮಾತಾಡುವಾಗ ರವಿ ಚಂದ್ರನ್ ಅವರು, “ನಾನು ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ, ನನ್ನ ಕುಟುಂಬವನ್ನು ಸಾಕಿದ್ದೇನೆ, ಈಗ ನನ್ನ ಇಬ್ಬರು ಗಂಡು ಮಕ್ಕಳು ಕೂಡ ಕೈ ಜೋಡಿಸಿದ್ದಾರೆ, ಅವರು ಕೂಡ ಸೀರಿಯಸ್ ಆಗಿ ದುಡಿಯುತ್ತಿದ್ದಾರೆ” ಎಂದು ರವಿ ಸರ್ ಹೇಳಿದ್ದಾರೆ. ರವಿ ಚಂದ್ರನ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಮ್ಮ ಕನ್ನಡದ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರು ಸದ್ಯ ದಶರಥ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ದಶರಥ ಚಿತ್ರ ಇನ್ನೊಂದು ಎರಡು ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇನ್ನೊಂದೆಡೆ ನಮ್ಮ ರವಿ ಚಂದ್ರನ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷೆಯ ಕುರುಕ್ಷೇತ್ರ ಚಿತ್ರದಲ್ಲಿ ಕೃಷ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಕುರುಕ್ಷೇತ್ರ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ, ರವಿ ಚಂದ್ರನ್, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ , ರೆಬೆಲ್ ಸ್ಟಾರ್ ಅಂಬರೀಷ್ ಅವರು ಕೂಡ ನಟಿಸಿದ್ದಾರೆ. ಕುರುಕ್ಷೇತ್ರ ಚಿತ್ರ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೆ ಕುರುಕ್ಷೇತ್ರ ಚಿತ್ರ 3D ಯಲ್ಲಿ ಬಿಡುಗಡೆ ಆಗಲಿದೆ. ಇತ್ತೀಚಿಗೆ ನಮ್ಮ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಸುಮಾರು 2 ವರ್ಷಗಳ ಹಿಂದೆ ಬಂದಿದ್ದ ಚಿತ್ರ ದ್ರಿಶ್ಯ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ರವಿ ಚಂದ್ರನ್ ಅವರು ರಾಜೇಂದ್ರ ಪೊನ್ನಪ್ಪ ಎಂಬ ಪಾತ್ರವನ್ನು ಮಾಡಿದ್ದರು. ಈಗ ಇದೆ ಹೆಸರಿನ ಒಂದು ಚಿತ್ರದಲ್ಲಿ ರವಿ ಚಂದ್ರನ್ ಅವರು ನಟಿಸುತ್ತಿದ್ದಾರೆ. ಹೌದು ದಶರಥ ಚಿತ್ರದ ನಂತರ ರವಿ ಚಂದ್ರನ್ ಅವರು ರಾಜೇಂದ್ರ ಪೊನ್ನಪ್ಪ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ. ಕಳೆದ ವರ್ಷ ರವಿ ಚಂದ್ರನ್ ಅವರು ಬಕಾಸುರ ಹಾಗು seizer ಎಂಬ ಚಿತ್ರದಲ್ಲಿ ನಟಿಸಿದ್ದರು. ಸದ್ಯ ರವಿ ಚಂದ್ರನ್ ಅವರು ಕನ್ನಡದ ಬ್ಯುಸಿ ಆದ ಸ್ಟಾರ್ ಗಳಲ್ಲಿ ಒಬ್ಬರು.

Trending

To Top