Film News

ಸಲಾರ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ ರವಿ ಬಸ್ರೂರ್

ಬೆಂಗಳೂರು: ಕೆಜಿಎಫ್ ಚಿತ್ರದ ಮೂಲಕ ಇಡೀ ವಿಶ್ವವನ್ನೇ ಕನ್ನಡ ಸಿನಿರಂಗದತ್ತ ತಿರುಗಿ ನೋಡುವಂತೆ ಮಾಡಿದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ರವರ ಮುಂದಿನ ಸಲಾರ್ ಚಿತ್ರಕ್ಕೆ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಂಗೀತ ನೀಡಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.

ಪ್ರಶಾಂತ್ ನೀಲ್ ರವರ ಮೊದಲ ಚಿತ್ರವಾದ ಉಗ್ರಂ ಚಿತ್ರಕ್ಕೆ ರವಿ ಬಸ್ರೂರ್ ರವರೇ ಸಂಗೀತ ನಿರ್ದೇಶನ ಮಾಡಿದ್ದು, ಇದೀಗ ಕೆಜಿಎಫ್-೧, ಕೆಜಿಎಫ್-೨ ಚಿತ್ರಗಳಿಗೂ ರವಿ ಬಸ್ರೂರ್ ರವರೇ ಸಂಗೀತ ನೀಡಿದ್ದಾರೆ. ಇದೀಗ ಸಲಾರ್ ಚಿತ್ರಕ್ಕೂ ರವಿ ಬಸ್ರೂರ್ ರವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಪ್ರಶಾಂತ್ ನೀಲ್. ಇನ್ನೂ ಈ ಕುರಿತು ಪ್ರಶಾಂತ್ ನೀಲ್ ತಮ್ಮ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.

ಪ್ರಶಾಂತ್ ನೀಲ್ ರವರು ತಮ್ಮ ಚಿತ್ರಗಳಲ್ಲಿ ಕೆಲಸ ಮಾಡಿದಂತಹ ಅನೇಕರನ್ನು ತಮ್ಮ ಮುಂದಿನ ಚಿತ್ರಕ್ಕೂ ಮುಂದುವರೆಸುತ್ತಿದ್ದಾರೆ. ಇನ್ನೂ ಜನವರಿ ಮಾಹೆಯಿಂದ ಚಿತ್ರೀಕರಣ ಸಹ ಪ್ರಾರಂಭವಾಗಲಿದ್ದು, ದಿನಾಂಕ ಇನಷ್ಟೇ ಘೋಷಣೆ ಮಾಡಬೇಕಿದೆ. ಈಗಾಗಲೇ ಮಾಸ್ ಸಿನೆಮಾಗಳು, ಥ್ರಿಲ್ಲಿಂಗ್ ಸಿನೆಮಾಗಳಲ್ಲಿ ರವಿಬಸ್ರೂರ್ ಸಂಗೀತ ನೀಡಿ ಸಕ್ಸಸ್ ಕಂಡಿದ್ದಾರೆ. ಮುಖ್ಯವಾಗಿ ಉಪೇಂದ್ರ ಅಭಿನಯಿಸುವ ಕಬ್ಜ ಚಿತ್ರಕ್ಕೂ ರವಿ ಬಸ್ರೂರ್ ರವರದ್ದೇ ಸಂಗೀತ ನಿರ್ದೇಶನವಿರಲಿದೆ.

ಇನ್ನೂ ಅನೇಕ ವರ್ಷಗಳಿಂದ ತಮ್ಮ ಹುಟ್ಟೂರಿನಲ್ಲಿ ಸ್ಟುಡಿಯೋ ಕಟ್ಟುವ ಕನಸು ಹೊಂದಿದ್ದ ರವಿ ಬಸ್ರೂರ್ ರವರು ಬಸ್ರೂರಿನಲ್ಲಿ ’ರವಿ ಬಸ್ರೂರು ಮ್ಯೂಸಿಕ್ ಅಂಡ್ ಮೂವೀಸ್’ ಹೆಸರಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಸ್ಟುಡಿಯೋ ನಿರ್ಮಿಸಿದ್ದಾರೆ. ಇನ್ನೂ ರವಿ ರವರ ಗೆಳೆಯ ನಿರ್ದೇಶಕ ಪ್ರಶಾಂತ್ ನೀಲ್ ರವರೇ ಲೋಕಾರ್ಪಣೆ ಮಾಡಿದ್ದಾರೆ.

Trending

To Top