Film News

ಕೆಜಿಎಫ್-2 ಚಿತ್ರದ ಬಗ್ಗೆ ರವೀನಾ ಟಂಡನ್ ಟಾಕ್!

ಬೆಂಗಳೂರು: ಬಹುನಿರೀಕ್ಷಿತ ಚಿತ್ರ ಕೆಜಿಎಫ್-2 ಚಿತ್ರದ ಕುರಿತು ಈಗಾಗಲೇ ಭಾರತದ ಸಿನೆಮಾರಂಗದಲ್ಲಿ ಭಾರಿ ನೀರಿಕ್ಷೆಗಳು ಹುಟ್ಟಿಕೊಂಡಿದ್ದು, ಬಹುತೇಕ ಚಿತ್ರೀಕರಣ ಸಹ ಪೂರ್ಣಗೊಂಡಿದೆ. ಇನ್ನೂ ಈ ಚಿತ್ರದ ಟೀಸರ್ ಇದೇ ಜ.೮ ರಂದು ಬಿಡುಗಡೆಯಾಗಲಿದೆ.

ಇದೀಗ ಕೆಜಿಎಫ್-2 ಚಿತ್ರದಲ್ಲಿ ರಮೀಕಾ ಸೇನ್ ಪಾತ್ರ ಪೋಷಿಸಿರುವ ರವಿನಾ ಟಂಡನ್ ಚಿತ್ರದಲ್ಲಿನ ಅನುಭವಗಳ ಕುರಿತು ಬಹಿರಂಗಗೊಳಿಸಿದ್ದು, ಆಂಗ್ಲ ಮಾದ್ಯಮವೊದಕ್ಕೆ ನೀಡಿದ ಸಂದರ್ಶನದಲ್ಲಿ ಸಿನೆಮಾ ಹಾಗೂ ಸಿನೆಮಾ ತಂಡದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕೆಜಿಎಫ್-೨ ಚಿತ್ರದಲ್ಲಿನ ರವಿನಾ ಟಂಡನ್ ರವರ ತಮ್ಮ ಫಸ್ಟ್ ಲುಕ್ ಮೂಲಕ ಭಾರಿ ಗಮನ ಸೆಳೆದಿದ್ದಾರೆ.

ಇನ್ನೂ ರವೀನಾ ಟಂಡನ್ ಕೆಜಿಎಫ್-೨ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಸಿನೆಮಾತಂಡದ ಬಗ್ಗೆ ಮಾತನಾಡಿದ ರವೀನಾ ಪ್ರಶಾಂತ್ ನೀಲ್ ರವರ ಜೊತೆ ಕೆಲಸ ಮಾಡಿದ್ದು ತುಂಬಾ ಪವರ್ ಪುಲ್ ಆಗಿದ್ದು, ಅವರ ಕೆಲಸವೇ ಅವರನ್ನು ಉನ್ನತ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ. ಮತ್ತೊಂದು ವಿಚಾರ ಅವರ ಶಾಂತವಾದ ಮನಸ್ಸಿನಲ್ಲಿ ಯಾವ ರೀತಿಯ ಯೋಚನೆಗಳು ಇದೆ ಎಂಬುದನ್ನು ಊಹಿಸಲು ಸಹ ಸಾಧ್ಯವಾಗುತ್ತಿಲ್ಲ ಎಂದಿದ್ದು, ಅವರು ಕಥೆ ತಿಳಿಸಿದ ನಂತರ ಚಿತ್ರದಲ್ಲಿ ನಟಿಸಲು ಒಪ್ಪದೇ ಇರಲು ಸಾಧ್ಯವಾಗಲಿಲ್ಲ ಎಂದ ಅವರು, ಕೆಜಿಎಫ್-೨ ಚಿತ್ರದಲ್ಲಿ ನನ್ನ ಪಾತ್ರ ತುಂಭಾ ಆಸಕ್ತಿಯಿಂದ ಕೂಡಿದೆ. ಸಿನೆಮಾ ಹೊಸ ಯುಗದ ವಿಧಾನವಾಗಿದೆ ಎಂದಿದ್ದಾರೆ.

ಇನ್ನೂ ಈಗಾಗಲೇ ಚಿತ್ರದ ಟೀಸರ್ ಬಿಡುಗಡೆ ಕುರಿತಂತೆ ಚಿತ್ರತಂಡ ದಿನಾಂಕ ಸಹ ಘೋಷಣೆ ಮಾಡಿದ್ದು, ಜನವರಿ ೮ ರಂದು ಚಿತ್ರದ ನಾಯಕ ಯಶ್ ರವರ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. ಇನ್ನೂ ಟೀಸರ್ ನೋಡಲು ಕೆಜಿಎಫ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Trending

To Top