ಕಿರ್ಕ್ ಪಾರ್ಟಿ ಮೂಲಕ ತನ್ನ ಸಿನಿಮಾ ಕರಿಯರ್ ಶುರು ಮಾಡಿದ ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ದಕ್ಷಿಣ ಭಾರತದಲ್ಲೇ ಸಕತ್ ಫೇಮಸ್ ನಟಿ. ಸದ್ಯ ರಶ್ಮಿಕಾ ಮಂದಣ್ಣ ಅವರು ಕನ್ನಡ ಸೇರಿದಂತೆ, ತಮಿಳು, ತೆಲುಗು ಭಾಷೆಯಲ್ಲಿ ಕೂಡ ನಟಿಸಿದ್ದಾರೆ. ಸೂಪರ್ ಸ್ಟಾರ್ ಗಳಾದ ಮಹೇಶ್ ಬಾಬು, ವಿಜಯ್ ದೇವನಕೊಂಡ ಅವರ ಜೊತೆ ಕೂಡ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ಪೊಗರು ಚಿತ್ರದಲ್ಲಿ ನಟಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಜಿಮ್ ನಲ್ಲಿ ಹೇಗೆ ವರ್ಕೌಟ್ ಮಾಡುತ್ತಾರೆ ಗೊತ್ತಾ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಾನಿ ಹಾಗೂ ಕನ್ನಡದ ಶ್ರದ್ಧಾ ಶ್ರೀನಾಥ್ ನಟಿಸಿದ್ದ ತೆಲುಗಿನ ‘ಜೆರ್ಸಿ’ ಚಿತ್ರ ಅಪಾರ ಜನಪ್ರಿಯತೆ ಪಡೆದುಕೊಂಡಿತು. ಈ ಚಿತ್ರದ ರೀಮೇಕ್ಗೆ ಬಾಲಿವುಡ್ ಮಂದಿ ಮುಂದಾದರು. ನಾಯಕಿಯ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಸೂಟ್ ಆಗುತ್ತಾರೆ ಎಂದೂ ನಿರ್ಧರಿಸಲಾಯಿತು. ಇದಕ್ಕಾಗಿ ದಕ್ಷಿಣ ಭಾರತದ ಅನೇಕ ಚಿತ್ರಗಳ ಆಫರ್ಗಳನ್ನೂ ರಶ್ಮಿಕಾ ಕೈಬಿಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ರಶ್ಮಿಕಾ ಈ ಚಿತ್ರವನ್ನು ತಿರಸ್ಕರಿಸಿದ್ದಾರೆ. ಈ ಚಿತ್ರದಲ್ಲಿ ತಾವು ನಟಿಸುವುದಿಲ್ಲ ಎಂದು ರಶ್ಮಿಕಾ ಮಂದಣ್ಣ ಸ್ಪಷ್ಟಪಡಿಸಿದ್ದಾರೆ.
“ಈ ಪಾತ್ರಕ್ಕೆ ನ್ಯಾಯ ಸಲ್ಲಿಸುವುದಕ್ಕೆ ನನಗಾಗುವುದಿಲ್ಲ ಎನ್ನಿಸಿದೆ; ನಿರ್ದೇಶಕರು ಮತ್ತೊಬ್ಬ ಸಮರ್ಥ ನಟಿಯನ್ನು ಆ ಪಾತ್ರದಲ್ಲಿ ಬಿಂಬಿಸಲಿ” ಎನ್ನುವ ಮೂಲಕ ಈ ಚಿತ್ರದಿಂದ ಹಿಂದೆ ಸರಿದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ, “ನನ್ನಿಂದ ಪಾತ್ರ ನಿರ್ವಹಣೆ ಸಾಧ್ಯವಾಗದಂಥ ಯಾವ ಸಿನಿಮಾವನ್ನೂ ನಾನು ಒಪ್ಪಿಕೊಳ್ಳುವುದಿಲ್ಲ; ವಿನಾಕಾರಣ ಒಪ್ಪಿಕೊಂಡು ಸೆಟ್ಗೆ ಹೋಗಿ ಅಲ್ಲಿದ್ದವರಿಗೆ ಕಷ್ಟ ನೀಡಲು ನನಗಿಷ್ಟವಿಲ್ಲ” ಎಂದು ಒಪ್ಪಿಕೊಂಡಿರುವುದು ಅನೇಕ ಚಿತ್ರರಸಿಕರಿಗೆ ಮೆಚ್ಚುಗೆಯಾಗಿದೆ. ಕನ್ನಡ ಮತ್ತು ತೆಲುಗಿನ ಸ್ಟಾರ್ ಕಲಾವಿದರ ಜತೆ ನಟಿಸಿದ ಅನುಭವವಿದ್ದರೂ, ಹೀಗೆ ‘ನಾನು ನಿಭಾಯಿಸಲಾರೆ’ ಎಂದು ಹೇಳಿದ್ದಾರೆ.
ನಾನಿ ಹಾಗೂ ಕನ್ನಡದ ಶ್ರದ್ಧಾ ಶ್ರೀನಾಥ್ ನಟಿಸಿದ್ದ ತೆಲುಗಿನ ‘ಜೆರ್ಸಿ’ ಚಿತ್ರ ಅಪಾರ ಜನಪ್ರಿಯತೆ ಪಡೆದುಕೊಂಡಿತು. ಈ ಚಿತ್ರದ ರೀಮೇಕ್ಗೆ ಬಾಲಿವುಡ್ ಮಂದಿ ಮುಂದಾದರು. ನಾಯಕಿಯ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಸೂಟ್ ಆಗುತ್ತಾರೆ ಎಂದೂ ನಿರ್ಧರಿಸಲಾಯಿತು. ಇದಕ್ಕಾಗಿ ದಕ್ಷಿಣ ಭಾರತದ ಅನೇಕ ಚಿತ್ರಗಳ ಆಫರ್ಗಳನ್ನೂ ರಶ್ಮಿಕಾ ಕೈಬಿಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ರಶ್ಮಿಕಾ ಈ ಚಿತ್ರವನ್ನು ತಿರಸ್ಕರಿಸಿದ್ದಾರೆ. ಈ ಚಿತ್ರದಲ್ಲಿ ತಾವು ನಟಿಸುವುದಿಲ್ಲ ಎಂದು ರಶ್ಮಿಕಾ ಮಂದಣ್ಣ ಸ್ಪಷ್ಟಪಡಿಸಿದ್ದಾರೆ. “ಈ ಪಾತ್ರಕ್ಕೆ ನ್ಯಾಯ ಸಲ್ಲಿಸುವುದಕ್ಕೆ ನನಗಾಗುವುದಿಲ್ಲ ಎನ್ನಿಸಿದೆ; ನಿರ್ದೇಶಕರು ಮತ್ತೊಬ್ಬ ಸಮರ್ಥ ನಟಿಯನ್ನು ಆ ಪಾತ್ರದಲ್ಲಿ ಬಿಂಬಿಸಲಿ” ಎನ್ನುವ ಮೂಲಕ ಈ ಚಿತ್ರದಿಂದ ಹಿಂದೆ ಸರಿದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ, “ನನ್ನಿಂದ ಪಾತ್ರ ನಿರ್ವಹಣೆ ಸಾಧ್ಯವಾಗದಂಥ ಯಾವ ಸಿನಿಮಾವನ್ನೂ ನಾನು ಒಪ್ಪಿಕೊಳ್ಳುವುದಿಲ್ಲ; ವಿನಾಕಾರಣ ಒಪ್ಪಿಕೊಂಡು ಸೆಟ್ಗೆ ಹೋಗಿ ಅಲ್ಲಿದ್ದವರಿಗೆ ಕಷ್ಟ ನೀಡಲು ನನಗಿಷ್ಟವಿಲ್ಲ” ಎಂದು ಒಪ್ಪಿಕೊಂಡಿರುವುದು ಅನೇಕ ಚಿತ್ರರಸಿಕರಿಗೆ ಮೆಚ್ಚುಗೆಯಾಗಿದೆ. ಕನ್ನಡ ಮತ್ತು ತೆಲುಗಿನ ಸ್ಟಾರ್ ಕಲಾವಿದರ ಜತೆ ನಟಿಸಿದ ಅನುಭವವಿದ್ದರೂ, ಹೀಗೆ ‘ನಾನು ನಿಭಾಯಿಸಲಾರೆ’ ಎಂದು ಹೇಳಿದ್ದಾರೆ.
