ಮುಂಬೈ: ಬಾಲಿವುಡ್ ನ ಮೇರು ನಟ ಅಮಿತಾಭ್ ಬಚ್ಚನ್ ರವರ ಮಗಳಾಗಿ ಕಿರಿಕ್ ಪಾರ್ಟಿ ಹುಡುಗಿ ರಶ್ಮೀಕಾ ಮಂದಣ್ಣ ನಟಿಸಲಿದ್ದಾರೆಂಬ ಮಾಹಿತಿ ಕೇಳಿಬರುತ್ತಿದೆ.
ಕಳೆದೆರಡು ದಿನಗಳ ಹಿಂದೆಯಷ್ಟೆ ರಶ್ಮೀಕಾ ಮಂದಣ್ಣ ಬಾಲಿವುಡ್ ಪ್ರವೇಶದ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಅದರ ಹಿಂದೆಯೇ ಮತ್ತೊಂದು ಬಾಲಿವುಡ್ ಸಿನೆಮಾದಲ್ಲಿ ರಶ್ಮೀಕಾ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆಂಬ ಮಾಹಿತಿ ಹರಿದಾಡುತ್ತಿದೆ. ಇನ್ನೂ ಈ ಬಾರಿ ರಶ್ಮೀಕಾ ಖ್ಯಾತ ಹಾಗೂ ಮೇರು ನಟ ಅಮಿತಾಭ್ ಬಚ್ಚನ್ ರವರ ಮಗಳ ಪಾತ್ರದಲ್ಲಿ ನಟಿಸಲಿದ್ದಾರಂತೆ.
ಬಾಲಿವುಡ್ ನ ಖ್ಯಾತ ನಿರ್ದೇಶಕರೊಲ್ಲೊಬ್ಬರಾದ ವಿಕಾಸ್ ಬಹ್ಲ್ ರವರ ಹೊಸ ಸಿನೆಮಾದಲ್ಲಿ ರಶ್ಮಿಕಾ ಹಾಗೂ ಅಮಿತಾಭ್ ಬಚ್ಚನ್ ತಂದೆ-ಮಗಳ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ನಟಿ ನೀನಾ ಗುಪ್ತಾ ರವರು ಸಹ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಇನ್ನೂ ಮುಂದಿನ ವರ್ಷದ ಮಾರ್ಚ್ ಮಾಹೆಯಲ್ಲಿ ಈ ಚಿತ್ರದ ಶೂಟಿಂಗ್ ಸಹ ಪ್ರಾರಂಭವಾಗಲಿದೆ ಎಂಬ ಮಾತುಗಳು ಸಹ ಹಿಂದಿ ಸಿನಿರಂಗದಲ್ಲಿ ಕೇಳಿಬರುತ್ತಿದೆ. ಆದರೆ ಈ ಕುರಿತು ರಶ್ಮೀಕಾ ಆಗಲಿ, ಅಥವಾ ನಿರ್ದೇಶಕ ವಿಕಾಸ್ ರವರಾಗಲಿ ಮಾಹಿತಿ ಬಹಿರಂಗಗೊಳಿಸಿಲ್ಲ. ಆದರೆ ಬಾಲಿವುಡ್ ನಲ್ಲಂತೂ ಈ ವಿಚಾರ ವೈರಲ್ ಆಗಿ ಹರಿದಾಡುತ್ತಿದೆ ಎನ್ನಲಾಗಿದೆ.
