Film News

ರಶ್ಮಿಕಾಗೆ ಟಕ್ಕರ್ ಕೊಡ್ತಾರ ಸನ್ನಿ ?

ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಹಾಗೂ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ತೆಲುಗಿನ ಬಹು ನಿರೀಕ್ಷಿತ ಸಿನಿಮಾ ಪುಷ್ಪ ದಲ್ಲಿ ನಟಿ ಸನ್ನಿ ಲಿಯೋನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಟಾಲಿವುಡ್ ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ.

ಬಾಲಿವುಡ್ ಬಾದ್ ಶಾ ಕಿಂಗ್ ಖಾನ್ ಶಾರುಖ್ ಖಾನ್ ಸಂಜಯ್ ದತ್ ಇಮ್ರಾನ್ ಹಶ್ಮಿ ಸಿನಿಮಾಗಳಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ ಸನ್ನಿ ಲಿಯೋನ್ ಅವರನ್ನು ಪುಷ್ಪ ಸಿನಿಮಾಗು ಕೂಡ ಕರೆತರಲು ಚಿತ್ರ ತಂಡ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಈ ಕುರಿತಂತೆ ಪುಷ್ಪ ಸಿನಿಮಾದ ನಿರ್ದೇಶಕ ಸುಕುಮಾರನ್ ಸನ್ನಿ ಲಿಯೋನ್ ಜೊತೆ ಒಂದು ಸುತ್ತಿನ ಮಾತು ಕತೆ ನಡೆಸಿದ್ದಾರೆ.

ಚಿತ್ರದ ಒಂದು ಹಾಡಿಗೆ ಸನ್ನಿ ಲಿಯೋನ್ ಬರೋಬ್ಬರಿ 50 ಲಕ್ಷ ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.ಪುಷ್ಪ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ನಟಿ ರಶ್ಮಿಕಾ ಮಂದಣ್ಣ ಡಾಲಿ ಧನಂಜಯ್, ಜಗಪತಿ ಬಾಬು, ಪ್ರಕಾಶ್ ರಾಜ್ ಮುಂತಾದ ದೊಡ್ಡ ಸ್ಟಾರ್ ಕಲಾವಿದರು ನಟಿಸಿದ್ದು. ದೇಶಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸನ್ನಿ ಲಿಯೋನ್ ಪುಷ್ಪ ಚಿತ್ರತಂಡಕ್ಕೆ ಸೇರಿಕೊಂಡರೆ ಚಿತ್ರಕ್ಕೆ ಮತ್ತಷ್ಟು ಪ್ಲಸ್ ಪಾಯಿಂಟ್ ಆಗುತ್ತೆ ಎನ್ನುವುದು ಚಿತ್ರ ತಂಡದ ಪ್ಲಾನ್ ಆಗಿದೆ.

Trending

To Top