ಸ್ಯಾಂಡಲ್ವುಡ್ ಸಾನ್ವಿ ರಶ್ಮಿಕಾ ಮಂದಣ್ಣ ಅಭಿನಯಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್. ಕಿರಿಕ್ ಪಾರ್ಟಿ ಮೂಲಕ ಸಿನಿರಂಗ ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಆ ಬಳಿಕ ಟಾಲಿವುಡ್ನತ್ತ ಮುಖ ಮಾಡಿದ್ದರು. ಚಲೋ, ಗೀತಾ ಗೋವಿಂದಂ, ಚಿತ್ರಗಳು ಹಿಟ್ ಲಿಸ್ಟ್ಗೆ ಸೇರುತ್ತಿದ್ದಂತೆ ಟಾಲಿವುಡ್ನಲ್ಲಿ ರಶ್ಮಿಕಾ ಬಹು ಬೇಡಿಕೆಯ ನಟಿಯಾದರು ರಶ್ಮಿಕಾ. ತೆಲುಗಿನ ಸೂಪರ್ ಸ್ಟಾರ್ ಚಿತ್ರಗಳಿಗೆ ಆಫರ್ಗಳು ಬರಲಾರಂಭಿಸಿತು. ಇತ್ತ ಕನ್ನಡದಲ್ಲಿ ಯಜಮಾನ ತೆಲುಗಿನಲ್ಲಿ ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ಮೂಲಕ ಮತ್ತೆ ಮೋಡಿ ಮಾಡಿದ್ದರು.
ಇದರ ಬೆನ್ನಲ್ಲೇ ಪ್ರಿನ್ಸ್ ಮಹೇಶ್ ಬಾಬು ಜೊತೆ ಸರಿಲೇರು ನಿಕೆವ್ವರು ಮತ್ತು ನಿತಿನ್ ಅವರೊಂದಿಗೆ ಭೀಷ್ಮ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಟಾಪ್ ಹಿರೋಯಿನ್ ಪಟ್ಟಕ್ಕೇರಿದ್ದರು.ಇದೀಗ ಅಲ್ಲು ಅರ್ಜುನ್ ಅವರ ಸಿನಿಮಾ ಪುಷ್ಪ ಚಿತ್ರಕ್ಕೆ ರಶ್ಮಿಕಾ ಹೀರೋಯಿನ್. ಹೆಸರಾಂತ ನಟ ಕಾರ್ತಿ ಅಭಿನಯದ ಸುಲ್ತಾನ್ ಸಿನಿಮಾ ಮೂಲಕ ಕಾಲಿವುಡ್ಗೂ ಎಂಟ್ರಿ ಕೊಡಲಿದ್ದಾರೆ ರಶ್ಮಿಕಾ. ಇವರ ಬಗ್ಗೆ ಹೊಸದಾಗಿ ಹರಿದಾಡುತ್ತಿರುವ ವಿಷಯ ಇವರ ಸಂಭಾವನೆ ಕುರಿತು.
ಕೆಲ ತಿಂಗಳುಗಳ ಹಿಂದೆ ರಶ್ಮಿಕಾ ಅವರ ಮನೆಮೇಲೆ ಐಟಿ ದಾಳಿಯಾಗಿತ್ತು. ಇದಾದ ಬಳಿಕ ಮತ್ತೊಮ್ಮೆ ಈ ನಟಿ ಸಂಭವನೆ ಹೆಚ್ಚಿಸಲಿದ್ದಾರೆ ಎನ್ನಲಾಗುತ್ತಿದೆ. ಮಹೇಶ್ ಬಾಬು ಅವರ ಜೊತೆ ನಟಿಸಿದ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 1.1ಕೋಟಿ ಸಂಭಾವನೆ ಪಡೆದಿದ್ದರು ರಶ್ಮಿಕಾ, ಈ ಸುದ್ದಿ ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದೀಗ ಇವರ ಸಂಭಾವನೆಯನ್ನು 3 ಕೋಟಿಗೆ ಏರಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕರೊನಾ ಸಂಕಷ್ಟದ ಸಮಯದಲ್ಲಿ ಕಲಾವಿದರು ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ನಿರ್ಮಾಪಕರು ಮನವಿ ಮಾಡಿದ್ದರು. ಹಾಗಾಗಿ ರಶ್ಮಿಕಾ ಸಂಭಾವನೆ ಹೆಚ್ಚಾಗಿರುವ ಸುದ್ದಿ ಏನಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾಡು ನೋಡಬೇಕು. ಸ್ಯಾಂಡಲ್ವುಡ್ ಸಾನ್ವಿ ರಶ್ಮಿಕಾ ಮಂದಣ್ಣ ಅಭಿನಯಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್. ಕಿರಿಕ್ ಪಾರ್ಟಿ ಮೂಲಕ ಸಿನಿರಂಗ ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಆ ಬಳಿಕ ಟಾಲಿವುಡ್ನತ್ತ ಮುಖ ಮಾಡಿದ್ದರು. ಚಲೋ, ಗೀತಾ ಗೋವಿಂದಂ, ಚಿತ್ರಗಳು ಹಿಟ್ ಲಿಸ್ಟ್ಗೆ ಸೇರುತ್ತಿದ್ದಂತೆ ಟಾಲಿವುಡ್ನಲ್ಲಿ ರಶ್ಮಿಕಾ ಬಹು ಬೇಡಿಕೆಯ ನಟಿಯಾದರು ರಶ್ಮಿಕಾ. ತೆಲುಗಿನ ಸೂಪರ್ ಸ್ಟಾರ್ ಚಿತ್ರಗಳಿಗೆ ಆಫರ್ಗಳು ಬರಲಾರಂಭಿಸಿತು. ಇತ್ತ ಕನ್ನಡದಲ್ಲಿ ಯಜಮಾನ ತೆಲುಗಿನಲ್ಲಿ ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ಮೂಲಕ ಮತ್ತೆ ಮೋಡಿ ಮಾಡಿದ್ದರು.
