ಹೈದರಾಬಾದ್: ಈ ತೆಲುಗು ಸ್ಟಾರ್ ನಟ ಜೊತೆ ನಟಿಸಲು ಅವಕಾಶ ಸಿಕ್ಕರೇ ಸಾಕು ಅಂತ ಅನೇಕ ನಟಿಯರು ಸಿದ್ದರಿದ್ದರೇ, ಇಲ್ಲೊಬ್ಬ ನಟಿ ಅವರ ಜೊತೆಗೆ ನಟಿಸುವ ಅವಕಾಶವನ್ನು ಕೈಬಿಟ್ಟಿದಾರೆ.
ಅಂದಹಾಗೆ ಆ ಸ್ಟಾರ್ ನಟ ಯಾರೆಂದರೇ ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್.ಟಿ.ಆರ್, ಇವರ ಜೊತೆಗೆ ನಟಿಸುವ ಅವಕಾಶವನ್ನು ಕೈಬಿಟ್ಟ ನಟಿಯೇ ರಶ್ಮೀಕಾ ಮಂದಣ್ಣ. ಹೌದು ಕಿರಿಕ್ ಪಾರ್ಟಿ ಮೂಲಕ ಸಿನಿರಂಗಕ್ಕೆ ಕಾಲಿಟ್ಟು, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ರಶ್ಮೀಕಾ ಇದೀಗ ಬಾಲಿವುಡ್ ಗೆ ಹಾರಿದ್ದಾರೆ.
ರಶ್ಮೀಕಾ ಮಂದಣ್ಣ ಸ್ಟಾರ್ ನಟರೊಡನೆ ಸಿನೆಮಾ ಮಾಡಿದ ನಂತರ ಇದೀಗ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಈಗಾಗಲೇ ಮಿಷನ್ ಮಜ್ನು ಚಿತ್ರವನ್ನು ಒಪ್ಪಿಕೊಂಡಿರುವ ರಶ್ಮಿಕಾ ಅಮಿತಾಭ್ ಬಚ್ಚನ್ ಮಗಳ ಪಾತ್ರದಲ್ಲಿ ಸಹ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದು, ಭಾರಿ ಮೊತ್ತದ ಸಂಭಾವನೆ ಸಹ ಪಡೆಯಲಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ಅವಕಾಶ ಸಿಕ್ಕ ತಕ್ಷಣ ಮಾತುಕತೆ ಹಂತದಲ್ಲಿರುವ ತೆಲುಗು ಸ್ಟಾರ್ ನಟನ ಸಿನೆಮಾ ವೊಂದನ್ನು ಕೈಬಿಟ್ಟಿದ್ದಾರೆ. ತ್ರಿವಿಕ್ರಮ್ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನೆಮಾದಲ್ಲಿ ಜೂನಿಯರ್ ಎನ್.ಟಿ.ಆರ್ ನಾಯಕನ ಪಾತ್ರ ಪೋಷಿಸಲಿದ್ದಾರೆ. ಈ ಸಿನೆಮಾದಲ್ಲಿ ನಟಿಸಲು ರಶ್ಮಿಕಾ ಮಂದಣ್ನ ರವರಿಗೆ ಅವಕಾಶ ಸಿಕ್ಕಿತ್ತು. ಆದರೆ ಬಾಲಿವುಡ್ ನಲ್ಲಿ ಅವಕಾಶ ಸಿಕ್ಕ ಕಾರಣ ರಶ್ಮೀಕಾ ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
