ಕೊನೆಗೂ ಎನ್.ಟಿ.ಆರ್ ಸಿನೆಮಾಗೆ ಫಿಕ್ಸ್ ಆದರೇ ನಾಯಕಿ, ಆ ನಟಿ NTR30 ಸಿನೆಮಾದಲ್ಲಿ ನಟಿಸಲು ಒಪ್ಪಿದ್ದಾರಂತೆ?

ಟಾಲಿವುಡ್ ನ ಖ್ಯಾತ ನಟ ಯಂಗ್ ಟೈಗರ್‍ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಖ್ಯಾತ ನಿರ್ದೇಶಕ ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ NTR30 ಎಂಬ ಟೈಟಲ್ ನ ಸಿನೆಮಾ ಘೋಷಣೆ ಮಾಡಿ ತಿಂಗಳುಗಳೇ ಕಳೆಯುತ್ತಿದೆ. ಸಿನೆಮಾದ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ. ಈ ಸಿನೆಮಾದ ಶೂಟಿಂಗ್ ಈಗಾಗಲೇ ಶುರುವಾಗಬೇಕಿತ್ತು. ಆದರೆ ಇನ್ನೂ ಶೂಟಿಂಗ್ ಶೆಡ್ಯೂಲ್ಡ್ ಆಗದೇ ಇದ್ದ ಕಾರಣಕ್ಕೆ ಅಭಿಮಾನಿಗಳು ಸಹ ನಿರಾಸೆಗೊಂಡಿದ್ದರು. ಜೊತೆಗೆ ಈ ಸಿನೆಮಾದ ನಾಯಕಿಯ ಬಗ್ಗೆ ಸಹ ಅನೇಕ ರೂಮರ್‍ ಗಳು ಸಹ ಕೇಳಿಬಂದಿತ್ತು. ಇದೀಗ ನಾಯಕಿಯನ್ನು ಫೈನಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಎನ್.ಟಿ.ಆರ್‍ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ NTR30 ಸಿನೆಮಾ ಘೋಷಣೆ ಯಾಗಿ ಅನೇಕ ತಿಂಗಳು ಕಳೆದಿದೆ. ಈ ಇಬ್ಬರ ಕಾಂಬಿನೇಷನ್ ನಲ್ಲಿ ಸಿನೆಮಾದ ಸಕ್ಸಸ್ ಆಗಬಹುದು ಎಂಬ ಆಶಾಭಾವನೆಯನ್ನು ಸಹ ಫ್ಯಾನ್ಸ್ ಹೊಂದಿದ್ದಾರೆ. ಆದರೆ ಸಿನೆಮಾದ ಶೂಟಿಂಗ್ ಮಾತ್ರ ಆರಂಭವಾಗದೇ ಇರುವುದು ಫ್ಯಾನ್ಸ್ ಗೆ ನಿರಾಸೆಯನ್ನು ತಂದಿದೆ ಎನ್ನಲಾಗುತ್ತಿದೆ. ಇನ್ನೂ ಈ ಸಿನೆಮಾದ ಕಥೆಯನ್ನೂ ಸಹ ತುಂಬಾನೆ ಮಾರ್ಪಾಡು ಮಾಡಲಾಗುತ್ತಿದೆಯಂತೆ. ಈ ಕಾರಣದಿಂದ ಸಿನೆಮಾದ ಶೂಟಿಂಗ್ ಸಹ ತಡವಾಗುತ್ತಿದೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ಇನ್ನೂ ಈ ಸಿನೆಮಾಗೆ ನಾಯಕಿಯಾಗಿ ಅನೇಕರನ್ನು ಸಂಪರ್ಕ ಮಾಡಲಾಗಿತ್ತಂತೆ. ವಿವಿಧ ಕಾರಣಗಳಿಂದ ನಟಿಯರು ಒಪ್ಪಿಲಿಲ್ಲ ಎಂಬ ಸುದ್ದಿಗಳೂ ಸಹ ಕೇಳಿಬಂದಿತ್ತು. ಸಮಂತಾ ಸಹ ಸಂಭಾವನೆಯ ಕಾರಣದಿಂದ ನಟಿಸಲು ಒಪ್ಪಲಿಲ್ಲ ಎಂಬ ಮಾತುಗಳೂ ಸಹ ಕೇಳಿಬಂದಿತ್ತು.

ಅಷ್ಟೇಅಲ್ಲದೇ ಸೀತಾರಾಮಂ ಸಿನೆಮಾದ ಮೂಲಕ ಸ್ಟಾರ್‍ ಆದ ಮೃಣಾಲ್ ಠಾಕೂರ್‍ ಈ ಸಿನೆಮಾದಲ್ಲಿ ನಾಯಕಿಯಾಗಿ ಫೈನಲ್ ಆಗಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು, ಆದರೆ ಇದೀಗ ಮತ್ತೊಂದು ನಾಯಕಿಯ ಹೆಸರು ಕೇಳಿಬರುತ್ತಿದ್ದು, ಈಕೆಯ ಫೈನಲ್ ಎನ್ನಲಾಗುತ್ತಿದೆ. ಆಕೆ ಬೇರೆ ಯಾರೂ ಅಲ್ಲ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ. ಇತ್ತಿಚಿಗಷ್ಟೆ ರಶ್ಮಿಕಾ ಬಾಲಿವುಡ್ ನ ಗುಡ್ ಬೈ ಸಿನೆಮಾದ ಪ್ರಮೋಷನ್ ನಲ್ಲಿ ಈ ಕುರಿತು ಮಾತನಾಡಿದ್ದಾರೆ. ಎನ್.ಟಿ.ಆರ್‍. ಜೊತೆಗೆ ನಟಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ ಎಂದು ಹೇಳುವ ಮೂಲಕ NTR30 ಸಿನೆಮಾದಲ್ಲಿ ರಶ್ಮಿಕಾ ರವರೇ ಎನ್.ಟಿ.ಆರ್‍ ಗೆ ಜೋಡಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಆದರೆ ಈ ಸುದ್ದಿ ಇನ್ನೂ ಅಧಿಕೃತವಾಗಿ ಘೋಷಣೆಯಾಗದೇ ಇದ್ದರೂ ಸಹ ಎನ್.ಟಿ.ಆರ್‍ ಸಿನೆಮಾದಲ್ಲಿ ರಶ್ಮಿಕಾ ಫೈನಲ್ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇನ್ನೂ ಇಡೀ ಚಿತ್ರತಂಡ ಸಹ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಸಿನೆಮಾದ ಕಥೆ ಸಹ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇನ್ನೂ ಶೀಘ್ರದಲ್ಲೇ ಸಿನೆಮಾ ಶೂಟಿಂಗ್ ಸಹ ಪ್ರಾರಂಭವಾಗಲಿದ್ದು, ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಸಿನೆಮಾ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಸದ್ಯ ರಶ್ಮಿಕಾ ಮಂದಣ್ಣ ಎನ್.ಟಿ.ಆರ್‍ ಜೊತೆ ನಟಿಸುವ ವಿಷಯ ತಿಳಿದು ರಶ್ಮಿಕಾ ಅಭಿಮಾನಿಗಳೂ ಪುಲ್ ಖುಷಿಯಾಗಿದ್ದಾರೆ.

Previous articleಮೈಮೇಲೆ ಬಟ್ಟೆಯಿಲ್ಲದೇ ಹಾಟ್ ಆಗಿ ಕಾಣಿಸಿಕೊಂಡ ಈಷಾ ಗುಪ್ತಾ, ಆ ಭಾಗ ಕಾಣಿಸುವಂತೆ ಪೋಸ್ ಕೊಟ್ಟ ನಟಿ…!
Next articleಗರ್ಭಿಣಿಯಾದರೂ ಕ್ಯೂಟ್ ನೆಸ್ ಮಾತ್ರ ಕಡಿಮೆಯಾಗಿಲ್ಲ, ಅದ್ದೂರಿಯಾಗಿ ನಡೆದ ಕ್ಯೂಟ್ ನಟಿ ಅಲಿಯಾ ಭಟ್ ಸೀಮಂತ ಕಾರ್ಯಕ್ರಮ..!