Film News

ರಶ್ಮೀಕಾ ಮಂದಣ್ಣಗೆ ಬಿಗ್-ಬಿ ಜೊತೆ ನಟಿಸೋಕೆ ದೊರೆಯಲಿದೆ ಭರ್ಜರಿ ಸಂಭಾವನೆ!

ಮುಂಬೈ: ಕಿರಿಕ್ ಪಾರ್ಟಿ ಚಿತ್ರದ ಮೂಲಕ ದಕ್ಷಿಣ ಭಾರತದ ಬಹುಬೇಡಿಕೆ ನಟಿಯಾಗಿ ಬೇಡಿಕೆ ಪಡೆದುಕೊಂಡ ನಟಿ ರಶ್ಮೀಕಾ ಮಂದಣ್ಣ ಅಮಿತಾಭ್ ಬಚ್ಚನ್ ರವರ ಮಗಳ ಪಾತ್ರದಲ್ಲಿ ನಟಿಸಲಿದ್ದು, ಇದಕ್ಕಾಗಿ ರಶ್ಮೀಕಾ ೫ ಕೋಟಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.

ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ರಶ್ಮೀಕಾ ಮಂದಣ್ಣ ಸ್ಯಾಂಡಲ್ ವುಡ್ ಸೇರಿದಂತೆ ಟಾಲಿವುಡ್ ನಲ್ಲೂ ಮಿಂಚಿದ್ದರು. ಇದೀಗ ಬಾಲಿವುಡ್ ಗೂ ಕಾಲಿಟ್ಟ ರಶ್ಮೀಕಾ ಈಗಾಗಲೇ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಸಿದ್ದಾರ್ಥ ಮೆಲ್ಹೋತ್ರ ಅಭಿನಯಿಸುವ ಮಿಷನ್ ಮಜ್ನು ಚಿತ್ರ ಖಚಿತವಾಗಿದ್ದು, ಅಮಿತಾಭ್ ಬಚ್ಚನ್ ಜೊತೆ ನಟಿಸುವ ಅವಕಾಶ ವನ್ನು ಗಿಟ್ಟಿಸಿಕೊಂಡಿದ್ದಾರೆ ರಶ್ಮೀಕಾ.

ಬಾಲಿವುಡ್ ಖ್ಯಾತ ನಿರ್ದೇಶಕ ವಿಕಾಸ್ ಬಹ್ಲ್ ರವರ ಹೊಸ ಸಿನೆಮಾದಲ್ಲಿ ಅಮಿತಾಭ್ ಬಚ್ಚನ್ ರವರ ಮಗಳ ಪಾತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ನಟಿ ರಶ್ಮೀಕಾ ಮಂದಣ್ಣ. ಇನ್ನೂ ಈ ಚಿತ್ರದಲ್ಲಿ ನೀನಾ ಗುಪ್ತಾ ಸಹ ಅಭಿನಯಿಸಲಿದ್ದಾರೆ. ಮುಂದಿನ ವರ್ಷದ ಏಪ್ರಿಲ್ ಮಾಹೆಯಿಂದ ಶೂಟಿಂಗ್ ಸಹ ಆರಂಭವಾಗಲಿದ್ದು, ರಶ್ಮೀಕಾ ತಮ್ಮ ಪಾತ್ರಕ್ಕಾಗಿ ಬರೋಬ್ಬರಿ ೫ ಕೋಟಿ ಸಂಭಾವನೆ ಕೇಳಿದ್ದಾರಂತೆ. ಇನ್ನೂ ಇದಕ್ಕೆ ನಿರ್ಮಾಪಕರೂ ಸಹ ಒಪ್ಪಿಗೆ ಸೂಚಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಶ್ಮೀಕಾ ಅಭಿನಯದ ಪೊಗರು, ಸುಲ್ತಾನ್ ಸಿನೆಮಾಗಳು ಚಿತ್ರಮಂದರಿಗಳಲ್ಲಿ ಬಿಡುಗಡೆಯಾಗಲು ರೆಡಿಯಾಗಿದ್ದು, ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಜೊತೆಗಿನ ಪುಷ್ಪ ಚಿತ್ರದ ಶೂಟಿಂಗ್ ಸಹ ಬಿರುಸಿನಿಂದ ನಡೆಯುತ್ತಿದೆ. ಆಡಾಲ್ಲೂ ಮೀಕು ಜೋಹಾರುಲು ಎಂಬ ಮತ್ತೊಂದು ತೆಲುಗು ಚಿತ್ರವನ್ನು ಸಹ ರಶ್ಮೀಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Trending

To Top