Film News

ರಶ್ಮಿಕಾ ಮಂದಣ್ಣ ತಲೆಯಲ್ಲಿ ಹೂವಿಟ್ಟ ಅಭಿಮಾನಿ!

ಹೈದರಾಬಾದ್: ಸ್ಯಾಂಡಲ್‌ವುಡ್‌ನ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಕೆಲವೇ ಚಿತ್ರಗಳ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗಷ್ಟೆ ಅವರ ಅಭಿಮಾನಿಯೊಬ್ಬ ರಶ್ಮಿಕಾ ತಲೆಯಲ್ಲಿ ಹೂವಿಟ್ಟ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚಿಗಷ್ಟೆ ತೆರೆಕಂಡ ಪೊಗರು ಸಿನೆಮಾ ಭಾರಿ ಕಲೆಕ್ಷನ್‌ಗಳಿಂದ ಮುನ್ನುಗ್ಗುತ್ತಿದ್ದು, ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಇನ್ನೂ ರಶ್ಮಿಕಾ ಒಂದು ಪೋಸ್ಟ್ ಹಾಕಿದರೇ ಸಾಕು ಅವರ ಅಭಿಮಾನಿಗಳು ಕೂಡಲೇ ವೈರಲ್ ಮಾಡುತ್ತಿರುತ್ತಾರೆ. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಅಭಿಮಾನಿಯೊಬ್ಬ ನಟಿ ರಶ್ಮಿಕಾ ಜಡೆಯಲ್ಲಿ ಮಲ್ಲಿಗೆ ಹೂವಿಟ್ಟ ವಿಡಿಯೋ ಹಾಟ್ ಟಾಪಿಕ್ ಆಗಿದ್ದು, ವೈರಲ್ ಆಗುತ್ತಿದೆ. ನಿಜಕ್ಕೂ ರಶ್ಮಿಕಾ ಜಡೆಯಲ್ಲಿ ಹೂವಿಟ್ಟಿಲ್ಲ. ಬದಲಿಗೆ ಪೊಗರು ಚಿತ್ರದ ಪೋಸ್ಟರ್‌ನಲ್ಲಿರುವ ರಶ್ಮಿಕಾ ಮಂದಣ್ಣಗೆ ಅಭಿಮಾನಿ ಮಲ್ಲಿಗೆ ಹೂವಿಟ್ಟಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.

ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್ ರಂಗದತ್ತ ಪ್ರಯಾಣ ಬೆಳೆಸಿದ ವಿಚಾರ ತಿಳಿದದ್ದೇ ಆಗಿದೆ. ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಪುಷ್ಪ ಚಿತ್ರದಲ್ಲೂ ಸಹ ನಾಯಕಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಆಡಾಳ್ಳು ಮೀಕು ಜೋಹಾರ್‍ಲು ಎಂಬ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಇನ್ನೂ ಕನ್ನಡ ಸಿನೆಮಾ ಮೂಲಕ ಖ್ಯಾತಿ ಪಡೆದುಕೊಂಡ ರಶ್ಮಿಕಾ ಮಂದಣ್ಣ ಕನ್ನಡವನ್ನು ಮರೆಯುತ್ತಿದ್ದಾರೆ ಎಂಬ ಆರೋಪಗಳು ಸಹ ಬಲವಾಗಿ ಕೇಳಿಬರುತ್ತಿರುತ್ತದೆ.

Trending

To Top