ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡಲು ಹೊರಟ ರಶ್ಮಿಕಾ ಅಂಡ್ ವಿಜಯ್ ದೇವರಕೊಂಡ…!

ಒಂದಲ್ಲ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ನಟಿಯೆಂದರೇ ನ್ಯಾಷನಲ್ ಕ್ರಷ್ ರಶ್ಮಿಕಾ ಎಂದು ಹೇಳಬಹುದು. ಆಕೆ ಏನೆ ಮಾಡಿದರೂ ಸಹ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೊಟೋಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿರುತ್ತಾರೆ. ಸೌಂದರ್ಯ ಹಾಗೂ ಹಾಟ್ ನೆಸ್ ಎರಡರ ಮೂಲಕ ಅಪಾರ ಸಂಖ್ಯೆ ಅಭಿಮಾನಿಗಳನ್ನು ಪಡೆದುಕೊಂಡ ಈಕೆ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಅದು ಬೇರೆ ಏನು ಅಲ್ಲ ತನ್ನ ಬಾಯ್ ಫ್ರೆಂಡ್ ವಿಜಯ್ ದೇವರಕೊಂಡ ಜೊತೆ ಮಾಲ್ಡೀವ್ಸ್ ಗೆ ಹಾರಿದ್ದು, ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಚರ್ಚೆಗೆ ಕಾರಣವಾಗಿದೆ.

ಪುಷ್ಪಾ ಸಿನೆಮಾದ ಮೂಲಕ ನ್ಯಾಷನಲ್ ಕ್ರಷ್ ಆಗಿರುವ ರಶ್ಮಿಕಾ ಮಂದಣ್ಣ ಹಾಗೂ ರೌಡಿ ಹಿರೋ ಎಂದೇ ಖ್ಯಾತಿ ಪಡೆದುಕೊಂಡ ವಿಜಯ್ ದೇವರಕೊಂಡ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಲೇ ಇದೆ. ಡಿಯರ್‍ ಕಾಮ್ರೇಟ್ ಸಿನೆಮಾದ ಬಳಿಕ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಆದರೆ ಈ ಕುರಿತು ರಶ್ಮಿಕಾ ಆಗಲಿ ಅಥವಾ ವಿಜಯ್ ದೇವರಕೊಂಡ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರೂ ಜೊತೆಯಲ್ಲೇ ಅನೇಕ ಬಾರಿ ಕಾಣಿಸಿಕೊಂಡರೂ ಸಹ ಅವರಿಬ್ಬರ ಮದ್ಯೆ ಇರುವ ರಿಲೇಷನ್ ಶಿಪ್ ಏನು ಎಂಬುದು ಮಾತ್ರ ರಿವೀಲ್ ಆಗಿಲ್ಲ. ಆದರೆ ಇವರಿಬ್ಬರ ನಡುವಣ ಸಂಬಂಧ ಮಾತ್ರ ಬಲವಾಗುತ್ತಲೇ ಇದೆ ಎಂಬ ಮಾತುಗಳು ಇದೀಗ ಜೋರಾಗಿ ಕೇಳಿಬರುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇತ್ತೀಚಿಗೆ ಏರ್‍ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರ ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿದೆ. ಇಬ್ಬರೂ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಬ್ಬರೂ ಏರ್‍ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು ಏಕೆ ಎಂಬ ಸುದ್ದಿ ಸಹ ಇದೀಗ ಸಖತ್ ಸದ್ದು ಮಾಡುತ್ತಿದೆ. ಇಬ್ಬರೂ ಮಾಲ್ಡೀವ್ಸ್ ಗೆ ರೊಮ್ಯಾಂಟಿಕ್ ಟೂರ್‍ ಗಾಗಿ ಹೊರಡುತ್ತಿದ್ದಾರೆ ಎಂಬ ಸುದ್ದಿ ಇದೀಗ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಇದರ ಜೊತೆಗೆ ಇಬ್ಬರೂ ಸಹಜೀವನ ನಡೆಸುತ್ತಿದ್ದಾರೆ ಎಂಬ ಅನುಮಾನಗಳನ್ನು ಸಹ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ರಶ್ಮಿಕಾ ವೈಟ್ ಡ್ರೆಸ್ ನಲ್ಲಿ ಹಾಗೂ ವಿಜಯ್ ದೇವರಕೊಂಡ ಕ್ಯಾಜುಯಲ್ ವೇರ್‍ ನಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರೂ ಗೀತಾ ಗೋವಿಂದಂ  ಹಾಗೂ ಡಿಯರ್‍ ಕಾಮ್ರೇಡ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದು, ಎರಡೂ ಸಿನೆಮಾಗಳಲ್ಲೂ ಸಹ ಇಬ್ಬರ ಮದ್ಯೆಒಳ್ಳೆಯ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು. ಜೊತೆಗೆ ಡಿಯರ್‍ ಕಾಮ್ರೇಡ್ ಸಿನೆಮಾದಲ್ಲೂ ರಶ್ಮಿಕಾ ಹಾಗೂ ವಿಜಯ್ ನಡುವಣ ಲಿಪ್ ಲಾಕ್ ದೃಶ್ಯ ಹಾಟ್ ಟಾಪಿಕ್ ಆಗಿತ್ತು. ಈ ದೃಶ್ಯದ ಬಗ್ಗೆ ಅನೇಕರು ಟ್ರೋಲ್ ಸಹ ಮಾಡಿದ್ದರು. ಇದಕ್ಕಾಗಿ ಅವರು ತುಂಬಾನೆ ದುಃಖ ಪಟ್ಟಿದ್ದಾಗಿ ಇತ್ತೀಚಿಗಷ್ಟೆ ಹೇಳಿಕೊಂಡಿದ್ದರು. ಅದೇನೇ ಇರಲಿ ಸದ್ಯ ವಿಜಯ್ ಅಂಡ್ ರಶ್ಮಿಕಾ ಮಾಲ್ಡೀವ್ಸ್ ಗೆ ಹಾರಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

Previous articleಗರ್ಭಿಣಿಯಾದರೂ ಕ್ಯೂಟ್ ನೆಸ್ ಮಾತ್ರ ಕಡಿಮೆಯಾಗಿಲ್ಲ, ಅದ್ದೂರಿಯಾಗಿ ನಡೆದ ಕ್ಯೂಟ್ ನಟಿ ಅಲಿಯಾ ಭಟ್ ಸೀಮಂತ ಕಾರ್ಯಕ್ರಮ..!
Next articleವರ್ಕೌಟ್ ಮಾಡುತ್ತಾ ಬೋಲ್ಡ್ ಆಗಿ ಕಾಣಿಸಿಕೊಂಡ ರಕುಲ್, ಆಕೆಯನ್ನು ನೋಡಿದವ್ರಿಗೂ ಬೆವರು ಬರೋದು ಖಚಿತವಂತೆ..!