ಇನ್ನೂ ಮುಂದೆ ರಶ್ಮಿಕಾರನ್ನು ರಶ್ ಎಂದು ಕರೆಯಬೇಕಂತೆ….

ಸ್ಯಾಂಡಲ್ ವುಡ್ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಕೆಲವೇ ದಿನಗಳಲ್ಲಿ ಪ್ಯಾನ್ ಇಂಡಿಯಾ ರೇಂಜ್ ನಟಿಯಾದರು. ರಶ್ಮಿಕಾರನ್ನು ಇದೀಗ ನ್ಯಾಷನಲ್ ಕ್ರಶ್ ಎಂದಲೇ ಕರೆಯುತ್ತಾರೆ. ಇದಿಗ ತೆಲುಗು, ತಮಿಳು ಹಾಗೂ ಬಾಲಿವುಡ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ದೊಡ್ಡ ಸ್ಟಾರ್‍ ನಟರ ಜೊತೆ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೂ ನಟಿ ರಶ್ಮಿಕಾ ಸಿನೆಮಾ ವಿಚಾರಗಳಿಗೆ ಮಾತ್ರವಲ್ಲದೇ ಅನೇಕ ವಿಚಾರಗಳಿಗೆ ಆಗಾಗಾ ಸುದ್ದಿಯಾಗುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುವ ಈಕೆ ಮಾಡಿರುವ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ರಶ್ಮಿಕಾ ಪೋಸ್ಟ್ ವೈರಲ್ ಆಗಲು ಕಾರಣ ಅವರ ಹೆಸರು ಬದಲಾವಣೆ. ಹೌದು ನಟಿ ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳಿಗಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಿರುವುದಾಗಿ ಸೋಷಿಯಲ್ ಮಿಡೀಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸಣ್ಣ ವಿಡಿಯೋ ಒಂದರ ಮೂಲಕ ಈ ವಿಚಾರವನ್ನು ಹರಿಬಿಟ್ಟಿದ್ದಾರೆ. ರಶ್ಮಿಕಾ ನಿಜಕ್ಕೂ ಹೆಸರು ಬದಲಿಸಿಕೊಂಡರಾ ಅಥವಾ ಹೇಗೆ ಎಂಬುದರ ಬಗ್ಗೆ ತಿಳಿಯೋಣ ಮುಂದೆ ಓದಿ..

ನಟಿ ರಶ್ಮಿಕಾ ಹೇಳಿರುವಂತೆ ಆಕೆಯನ್ನು ಇನ್ನೂ ಮುಂದೆ ರಶ್ ಎಂದು ಕರೆಯಬೇಕಂತೆ. ತಮ್ಮ ಹೆಸರನ್ನು ಪೂರ್ಣವಾಗಿ ಕರೆಯಲು ಕಷ್ಟ ಆದರೆ ರಶ್ ಎಂದು ಕರೆಯಬಹುದು ಎಂದು ಪೋಸ್ಟ್ ಮಾಡಿದ್ದಾರೆ. ನಟಿ ರಶ್ಮಿಕಾ ಈ ಮೂಲಕ ತಮ್ಮ ಅಭಿಮಾನಿಗಳಿಗಾಗಿ ರಶ್ ಎಂದು ಹೆಸರನ್ನು ಬದಲಿಸಿಕೊಂಡಿದ್ದಾರೆ. ಇನ್ನೂ ರಶ್ಮಿಕಾ ಸದಾ ಸಿನೆಮಾ, ಜಾಹಿರಾತುಗಳಲ್ಲಿ ಪುಲ್ ಬ್ಯುಸಿಯಾಗಿರುತ್ತಾರೆ. ಈ ಸಮಯದಲ್ಲಿ ಶೂಟಿಂಗ್ ಸಮಯದಲ್ಲಿ ರಶ್ಮಿಕಾ ಎಂದು ಪೂರ್ಣ ಹೆಸರನ್ನು ಕರೆಯಲು ಕೆಲವರಿಗೆ ಕಷ್ಟ ಎನ್ನಿಸಿದೆಯಂತೆ. ಆದ್ದರಿಂದ ರಶ್ಮಿಕಾ ಹೆಸರನ್ನು ಕರೆಯಲು ಕಷ್ಟಪಡುತ್ತಿದ್ದವ ವಿಡಿಯೋ ಹಂಚಿಕೊಂಡು ರಶ್ಮಿಕಾ ಎಂಬ ಹೆಸರು ದೊಡ್ಡದು ಆದ್ದರಿಂದ ನನ್ನನ್ನು ರಶ್ ಎಂದು ಕರೆಯಿರಿ ತೊಂದರೆಯಿಲ್ಲ ಎಂದು ಬರೆದು ಶೇರ್‍ ಮಾಡಿದ್ದಾರೆ.

ಇನ್ನು ಇತ್ತೀಚಿಗೆ ನಟಿ ರಶ್ಮಿಕಾ ತಮ್ಮ ಸಿನೆಮಾ ಕೆಲಸಗಳ ಬ್ಯುಸಿ ನಡುವೆಯೂ ಸಹ ತಮ್ಮ ಸ್ನೇಹಿತೆಯ ಮದುವೆಗೆ ತೆರಳಿದ್ದರು. ಅಲ್ಲಿನ ಕೆಲವೊಂದು ಪೊಟೋಗಳನ್ನು ಹಂಚಿಕೊಂಡು ಸಾಲು ಸಾಲು ಸಂದೇಶಗಳನ್ನು ಸಹ ಹಾಕಿದ್ದರು. ಬಳಿ ತಮ್ಮ ಮನೆಗೆ ಭೇಟಿ ನೀಡಿ ಕುಟುಂದ ಜೊತೆ ಸಂತೋಷದಿಂದ ಕಾಲ ಕಳೆದಿದ್ದಾರೆ. ಇನ್ನೂ ತಮ್ಮ ಕುಟುಂಬದೊಂದಿಗೆ ಇರುವ ಪೊಟೋಗಳನ್ನು ಸಹ ರಶ್ಮಿಕಾ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಇನ್ನೂ ಟಾಲಿವುಡ್ ನಲ್ಲಿ ಪುಷ್ಪ-2 ಸೇರಿದಂತೆ ಕಾಲಿವುಡ್ ಹಾಗೂ ಬಾಲಿವುಡ್ ನ ಕೆಲವೊಂದು ಸಿನೆಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

Previous articleನಾಳೆ ಜೂನಿಯರ್ ಎನ್.ಟಿ.ಆರ್ ಹುಟ್ಟುಹಬ್ಬಕ್ಕೆ ಕೊರಟಾಲ ಶಿವ ಸಪ್ರೈಸ್…
Next articleಬೆಡ್ ರೂಂ ವಿಡಿಯೋ ಶೇರ್ ಮಾಡಿದ ಈಶಾ ಗುಪ್ತ… ಎಲ್ಲರನ್ನೂ ನಿಬ್ಬೆರಗುಗೊಳಿಸುವ ವಿಡಿಯೋ.….