Film News

ರಶ್ಮಿಕಾ ಹುಟ್ಟುಹಬ್ಬಕ್ಕೆ ರಕ್ಷಿತ್ ಶೆಟ್ಟಿ ಶುಭಕೋರಿದ್ದು ಹೀಗೆ !

ಬಹಳ ಕಡಿಮೆ ಅವಧಿಯಲ್ಲಿ ಅನೇಕ ಅಭಿಮಾನಿಗಳ ಹೃದಯದಲ್ಲಿ ಖ್ಯಾತಿ ಮತ್ತು ಸ್ಥಾನವನ್ನು ಪಡೆದ ಕೆಲವೇ ಕೆಲವು ನಟಿಗಳಲ್ಲಿ ರಶ್ಮಿಕಾ ಮಂದಣ್ಣ ಒಬ್ಬರು. ಕೆಲವೇ ಚಿತ್ರಗಳಲ್ಲಿ ನಟಿಸಿದ್ದರು ಈ ನಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇರುವ ಅಭಿಮಾನಿ ಪೇಜ್ ಗಳ ಸಂಖ್ಯೆ ಬಹಳ ದೊಡ್ಡದಿದೆ.ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅವರು “ಕಿರಿಕ್ ಪಾರ್ಟಿ” ಸಿನಿಮಾ ಸಮಯದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು ಮತ್ತು 2017 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಇಬ್ಬರ ನಡುವೆ ಹೊಂದಾಣಿಕೆಯ ಸಮಸ್ಯೆಗಳಿಂದಾಗಿ ಅವರು ತಮ್ಮ ನಿಶ್ಚಿತಾರ್ಥವನ್ನು ಕೈಬಿಟ್ಟರು ಎಂದು ವರದಿಗಳು ತಿಳಿಸಿವೆ.
ಮಾಧ್ಯಮಗಳಲ್ಲಿ ಸುದ್ದಿ ತಿಳಿದ ತಕ್ಷಣ, “ಗೀತಾ ಗೋವಿಂದಮ್” ನಟಿ ಸಾಕಷ್ಟು ಆನ್‌ಲೈನ್ ಟ್ರೋಲ್‌ಗಳು ಮತ್ತು ನಿಂದನೆಗಳಿಗೆ ಒಳಗಾಗಿದ್ದರು.ಇನ್ನು ನ್ಯಾಷನಲ್ ಕ್ರಶ್ ಹುಟ್ಟುಹಬ್ಬದ ದಿನವನ್ನು ನೆನೆದಿರುವ ರಕ್ಷಿತ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ರಶ್ಮಿಕಾ ಅವರ ಆಡಿಷನ್ ವಿಡಿಯೋ ಶೇರ್ ಮಾಡಿದ್ದು “ಕಿರಿಕ್ ಪಾರ್ಟಿ ಆಡಿಷನ್ ಸಮಯದ ಈ ಸುಂದರವಾದ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ಧೇನೆ. ಅಂದಿನಿಂದ ನೀವು ಇಲ್ಲಿಯವರೆಗೆ ನೀನು ತುಂಬಾ ಬೆಳೆದಿದ್ದೀಯಾ, ನೀನು ನಿನ್ನ ಕನಸುಗಳನ್ನು ನಿಜವಾದ ಯೋಧನಂತೆ ಬೆನ್ನಟ್ಟಿದ್ದೀಯಾ. ಪ್ರೌಡ್ ಆಫ್ ಯೂ ಗರ್ಲ್.. ಜನ್ಮದಿನದ ಶುಭಾಶಯಗಳು
ನಿನಗೆ ಇನ್ನು ಹೆಚ್ಚಿನ ಯಶಸ್ಸು ದೊರೆಯಲಿ..” ಎಂದು ಬರೆದುಕೊಳ್ಳುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.https://twitter.com/rakshitshetty/status/1378965495613812737?s=19

Trending

To Top