ಜಾಕ್ ಪಾಟ್ ಹೊಡೆದ ರಶ್ಮಿಕಾ ಮಂದಣ್ಣ, ಸಲ್ಲು ಭಾಯ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ರಶ್…!

ಕನ್ನಡ ಸಿನೆಮಾ ಮೂಲಕ ಖ್ಯಾತಿ ಪಡೆದುಕೊಂಡ ಒಬ್ಬ ನಟಿ ಇದೀಗ ದೇಶವ್ಯಾಪಿ ಸ್ಟಾರ್‍ ನಟಿಯಾಗಿ ಖ್ಯಾತಿ ಪಡೆದುಕೊಂಡಿದ್ದಾರೆ. ಕಿರಿಕ್ ಪಾರ್ಟಿ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಇದೀಗ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಿಂದ ತೆಲುಗು, ತೆಲುಗು ನಿಂದ ತಮಿಳು ಇದೀಗ ಹಿಂದಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದೂ ಸ್ಟಾರ್‍ ನಟರ ಜೊತೆಯಲ್ಲೇ ತೆರೆ ಹಂಚಿಕೊಳ್ಳುತ್ತಿರುವ ಈಕೆ ಇದೀಗ ಮತ್ತೊಬ್ಬ ಬಾಲಿವುಡ್ ಸ್ಟಾರ್‍ ನಟನ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.

ದೇಶದ ಸಿನಿರಂಗದಲ್ಲಿ ತುಂಬಾ ಅದೃಷ್ಟವಂತೆ ನಟಿಯೆಂದರೇ ಅದು ರಶ್ಮಿಕಾ ಮಂದಣ್ಣ ಎಂದು ಹೇಳಲಾಗುತ್ತಿದೆ. ಕನ್ನಡದ ಕಿರಿಕ್ ಪಾರ್ಟಿ ಮೂಲಕ ಎಂಟ್ರಿ ಕೊಟ್ಟ ಈಕೆ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ಕನ್ನಡದಲ್ಲಿ ಸಾಲು ಸಾಲು ಸಿನೆಮಾಗಳ ಮೂಲಕ ಖ್ಯಾತಿ ಪಡೆದುಕೊಂಡರು. ಬಳಿಕ ಚಲೋ ಎಂಬ ಸಿನೆಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಬಳಿಕ ತೆಲುಗುನಲ್ಲೂ ಸಹ ಬ್ಯುಸಿ ನಟಿಯಾದರು. ಸದ್ಯ ಈಕೆ ಮೂರು ಕೋಟಿ ಡಿಮ್ಯಾಂಡ್ ಮಾಡುವ ಕ್ರೇಜಿ ನಟಿಯಾಗಿದ್ದಾರೆ. ಸುಮಾರು ವರ್ಷಕ್ಕೆ 10 ಕೋಟಿ ಆದಾಯ ಗಳಿಸುತ್ತಾ ಸಿನಿರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಇತ್ತೀಚಿಗಷ್ಟೆ ಪ್ಯಾನ್ ಇಂಡಿಯಾ ಸಿನೆಮಾ ಆದ ಪುಷ್ಪಾದಲ್ಲಿ ಈಕೆ ಕಾಣಿಸಿಕೊಂಡಿದ್ದರು ಎಲ್ಲರನ್ನೂ ಮೆಚ್ಚಿಸಿದ್ದಾರೆ. ಸದ್ಯ ಪುಷ್ಪಾ 2 ಸಿನೆಮಾದ ಮೇಲೆ ಹೆಚ್ಚು ನಿರೀಕ್ಷೆಯನ್ನು ಹುಟ್ಟಿಸಿದ್ದಾರೆ.

ನಟಿ ರಶ್ಮಿಕಾರನ್ನು ಇದೀಗ ನ್ಯಾಷನಲ್ ಕ್ರಷ್ ಎಂದೇ ಕೆರೆಯಲಾಗುತ್ತಿದೆ. ಬಾಲಿವುಡ್ ರಂಗಕ್ಕೆ ಈಗಾಗಲೇ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮೊದಲನೇಯ ಸಿನೆಮಾವೇ ದೊಡ್ಡ ಸ್ಟಾರ್‍ ಅಮಿತಾಬ್ ಬಚ್ಚನ್ ಜೊತೆ ಕ್ರೇಜಿ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸಿದ್ದಾರ್ತ್ ಮೆಲ್ಹೋತ್ರಾ ಎಂಬ ಎನೆರ್ಜಿಟಿಕ್ ಸ್ಟಾರ್‍ ಜೊತೆ ದೇಶಭಕ್ತಿ ಕಥನವುಳ್ಳ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ರಣಬೀರ್‍ ಕಪೂರ್‍ ಜೊತೆ ಯಾನಿಮಲ್ ಎಂಬ ಸಿನೆಮಾದಲ್ಲಿ ಸಹ ನಟಿಸುತ್ತಿದ್ದಾರೆ. ಇನ್ನೂ ಈಗಾಗಲೇ ಮುಂಬೈನಲ್ಲಿ ಸೆಟಲ್ ಆಗಿರುವ ರಷ್ಮಿಕಾರವರಿಗೆ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇದೀಗ ಮತ್ತೊಂದು ಜಾಕ್ ಪಾಟ್ ಹೊಡೆದಿರುವ ನಟಿ ರಶ್ಮಿಕಾ ಬಾಲಿವುಡ್ ನ ಸ್ಟಾರ್‍ ನಟನ ಜೊತೆಗೆ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಬಾಲಿವುಡ್ ನ ಸ್ಟಾರ್‍ ನಟ ಸಲ್ಮಾನ್ ಖಾನ್ ಜೊತೆ ಕ್ರೇಜಿ ಸಿನೆಮಾವೊಂದರಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ ನಟಿ ರಶ್ಮಿಕಾ. ಸಲ್ಮಾನ್ ಖಾನ್ ರವರು ಮುಂದಿನ ಸಿನೆಮಾ “ನೋ ಎಂಟ್ರಿ-2” ಸಿನೆಮಾದಲ್ಲಿ ನಾಯಕಿಯಾಗಿ ಸಲ್ಲು ಭಾಯ್ ಜೊತೆ ನಟಿಸಲಿದ್ದಾರೆ ಎಂಬ ಮಾತುಗಳಲ್ಲಿ ಬಾಲಿವುಡ್ ರಂಗದಲ್ಲಿ ಜೋರಾಗಿ ಕೇಳಿಬರುತ್ತಿದೆ. ಈ ಸಿನೆಮಾದಲ್ಲಿ ಮತ್ತೆ ಕೆಲವರು ಸ್ಟಾರ್‍ ನಟರಾದ ಅನೀಲ್ ಕಪೂರ್‍, ಫರ್ದಿನ್ ಖಾನ್ ಸಹ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ನಟಿ ರಶ್ಮಿಕಾ ಬಣ್ಣ ಹಚ್ಚಲಿರುವುದು ವಿಶೇಷವೇ ಆಗಿದೆ.  ಇದರ ಮದ್ಯೆ ನಟಿ ರಶ್ಮಿಕಾ, ಪೂಜಾ ಹೆಗ್ಡೆ ಹಾಗೂ ಸಮಂತಾ ರವರನ್ನು ಸಹ ಸಿನೆಮಾಗೆ ಆಯ್ಕೆ ಮಾಡಲಾಗಿದೆ ಎನ್ನಲಾಗಿದ್ದು, ಈ ಪೈಕಿ ರಶ್ಮಿಕಾ ಆಯ್ಕೆಯಾಗುವುದು ಬಹುತೇಖ ಖಚಿತ ಎಂದು ಹೇಳಲಾಗುತ್ತಿದೆ.

Previous articleಡಾಲಿಂಗ್ ಪ್ರಭಾಸ್ ಸಂಭಾವನೆ ಏರಿಕೆ. ಬರೊಬ್ಬರಿ 120 ಕೋಟಿ ಪಡೆಯುವ ಮೂಲಕ ಟಾಪ್ 2ನೇ ಸ್ಥಾನ…!
Next articleಶೀಘ್ರದಲ್ಲೇ ಟಾಲಿವುಡ್ ಗೆ ಎಂಟ್ರಿಕೊಡಲಿದ್ದಾರಂತೆ ಬಾಲಿವುಡ್ ಸ್ಟಾರ್ ಕಿಡ್ ಜಾನ್ವಿ ಕಪೂರ್!