ವಿಕ್ರಾಂತ್ ರೋಣದ ಗಡಂಗ್ ರಕ್ಕಮ್ಮಾ ಹಾಡಿಗೆ ಫಿದಾ ಆದ ಕಿಚ್ಚ ಫ್ಯಾನ್ಸ್….

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನೆಮಾದ ಬಿಡುಗಡೆಗಾಗಿ ಅಭಿಮಾನಿಗಳು ಹಾಗೂ ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ಸೆಲೆಬ್ರೆಟಿಗಳೂ ಸಹ ಈ ಸಿನೆಮಾ ಬಿಡುಗಡೆಗಾಗಿ ಕಾದಿದ್ದಾರೆ. ಈ ಸಿನೆಮಾದ ಒಂದು ಸ್ಪೇಷಲ್ ಸಾಂಗ್ ಇಂದು (ಮೇ.23) ರಂದು ಬಿಡುಗಡೆಯಾಗಿದ್ದು, ಸಖತ್ ಟ್ರೆಂಡಿಂಗ್ ಆಗಿದೆ. ಇನ್ನೂ ಗಡಂಗ್ ರಕ್ಕಮ್ಮ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇದೇ ಜೂ.28 ರಂದು ತೆರೆಯ ಮೇಲೆ ಅಬ್ಬರಿಸಲು ಸಿದ್ದವಾಗಿರುವ ವಿಕ್ರಾಂತ್ ರೋಣ ಸಿನೆಮಾ ದೇಶದ ಸಿನಿರಂಗ ಮಾತ್ರವಲ್ಲದೇ ವಿದೇಶದಲ್ಲೂ ಸಹ ದೊಡ್ಡ ಮಟ್ಟದಲ್ಲೇ ಕ್ರೇಜ್ ಹುಟ್ಟಿಸಿದೆ. ಇನ್ನೂ ಈ ಸಿನೆಮಾ ಶೂಟಿಂಗ್ ಪ್ರಾರಂಭವಾದಾಗಿನಿಂದ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದೆ. ಸಿನೆಮಾ ಪೋಸ್ಟರ್‍, ಟೀಸರ್‍, ಫಸ್ಟ್ ಗ್ಲೀಂಪ್ಸ್ ಹೀಗೆ ಪ್ರತಿಯೊಂದು ಅಪ್ಡೇಟ್ ಬಂದಾಗಲೆಲ್ಲಾ ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹೆಚ್ಚಾಗುತ್ತಿದೆ. ಇದೀಗ ಸಿನೆಮಾದ ವಿಶೇಷ ಸಾಂಗ್ ನ ಲಿರಿಕಲ್ ವರ್ಷನ್ ಕನ್ನಡದಲ್ಲಿ ಬಿಡುಗಡೆಯಾಗಿದ್ದು, ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ವಿಕ್ರಾಂತ್ ರೋಣ ಸಿನೆಮಾದ ಮೂಲಕ ಕನ್ನಡ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಜಾಕ್ವೆಲಿನ್ ವಿಕ್ರಾಂತ್ ರೋಣ ಸಿನೆಮಾದಲ್ಲಿ ಐಟಂ ಸಾಂಗ್ ಒಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಇನ್ನೂ ಈ ಹಾಡು ಸಿನೆಮಾದಲ್ಲಿ ಹೈಲೆಟ್ ಆಗಲಿದೆ ಎಂದೂ ಸಹ ಹೇಳಲಾಗುತ್ತಿದೆ. ಕಿಚ್ಚ ಸುದೀಪ್ ರೊಂದಿಗೆ “ರಾ ರಾ ರಕ್ಕಮ್ಮ” ಎಂಬ ಸಾಂಗ್ ನಲ್ಲಿ ನಟಿ ಜಾಕ್ವೆಲಿನ್ ಭರ್ಜರಿಯಾದ ಸ್ಟೆಪ್ಸ್ ಹಾಕಿದ್ದಾರೆ.

ಈ ಸಾಂಗ್ ಬಿಡುಗಡೆಯ ಕುರಿತು ಕಿಚ್ಚ ಸುದೀಪ್ ತಮ್ಮ ಟ್ವಿಟರ್‍ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಹಾಡನ್ನುಬಿಡುಗಡೆ ಮಾಡಲು ಚಿತ್ರತಂಡ ಡಿಫರೆಂಟ್ ಆಗಿ ಥಿಂಕ್ ಮಾಡಿದೆ. ಮೊದಲಿಗೆ ಮೇ.23 ರಂದು ಕನ್ನಡದಲ್ಲಿ ರಿಲೀಸ್ ಆಗಿದೆ.  ಬಳಿಕ ಹಿಂದಿಯಲ್ಲಿ ಮೇ.24, ತೆಲುಗಿನಲ್ಲಿ ಮೇ.25, ತಮಿಳು ಮೇ. 26 ಹಾಗೂ ಮಲಯಾಳಂನಲ್ಲಿ ಮೇ.27 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಇನ್ನೂ ಈ ಹಾಡಿನಲ್ಲಿ ಜಾಕ್ವೆಲಿನ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.

ಬಾಲಿವುಡ್ ನಟಿ ಜಾಕ್ವೆಲಿನ್ ಹಾಗೂ ಕಿಚ್ಚನ ಈ ಹಾಡು ಸಿನೆಮಾದಲ್ಲಿ ಹೈಲೆಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬಿಡುಗಡೆಯಾದ ರಾ ರಾ ರಕ್ಕಮ್ಮ ಹಾಡಿನ ಲಿರಿಕಲ್ ವರ್ಷನ್ ಬಿಡುಗಡೆಯಾಗಿದ್ದು, ಇದರಲ್ಲಿ ಸ್ವಲ್ಪ ಡ್ಯಾನ್ಸ್ ಹಾಗೂ ಸಾಂಗ್ ಮೇಕಿಂಗ್ ವಿಡಿಯೋಗಳನ್ನು ಅಳವಡಿಸಲಾಗಿದೆ. ಮೂಲಗಳ ಪ್ರಕಾರ ಈ ಹಾಡು ಐಟಂ ಸಾಂಗ್ ಅಲ್ಲ. ಈ ಹಾಡಿನ ಮೂಲಕ ಸಿನೆಮಾದಲ್ಲಿ ಒಂದು ಟ್ವಿಸ್ಟ್ ಸಹ ಇರಲಿದೆ ಎಂದು ಹೇಳಲಾಗುತ್ತಿದೆ. ಈ ಹಾಡಿನಲ್ಲಿ ನಟಿ ಜಾಕ್ವೆಲಿನ್ ಹಾಟ್ ಡ್ರೆಸ್ ನಲ್ಲಿ ಮಿಂಚುತ್ತಿದ್ದಾರೆ. ದೇಶಿ ಲುಕ್ ನಲ್ಲಿ ಜಾಕ್ವೆಲಿನ್ ಕಾಣಿಸಿಕೊಂಡಿದ್ದು, ಕಿಚ್ಚ ಡಿಟೆಕ್ವಿವ್ ಮಾದರಿಯಲ್ಲಿ ಕಾಣಿಸಿಕೊಂಡಿದ್ದಾರೆ ಸದ್ಯ ಈ ಹಾಡು ಸಖತ್ ರೆಸ್ಪಾನ್ಸ್ ಸಹ ಬಂದಿದೆ.

Previous articleವಿಶೇಷ ವಿಡಿಯೋ ಮೂಲಕ ಮೊಬೈಲ್ ಬಳಕೆ ಕುರಿತು ಸಂದೇಶ ನೀಡಿದ ನಟಿ ಮೇಘನಾ…
Next articleಭಾರತದ ಸಿನಿರಂಗದಲ್ಲಿ ರಜನಿಕಾಂತ್ ನಂಬರ್ ಒನ್ ನಟ, ಏರಿದ ತಲೈವಾ ಸಂಭಾವನೆ…..