Film News

ಸೆಟ್ಟೇರಲಿದೆ ರಾಣಿ ಅಬ್ಬಕ್ಕನ ಅಬ್ಬರ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಪ್ಯಾನ್ ಇಂಡಿಯಾ ಪರ್ವ ಶುರುವಾಗಿದ್ದು, ಇತ್ತೀಚಿಗಷ್ಟೆ ತೆರೆಕಂಡ ಆಕ್ಟ್ 1978 ಚಿತ್ರದ ನಿರ್ದೇಶಕ ಮಂಸೋರೆ ಸ್ವಾಂತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕನ ಚಿತ್ರದ ಪ್ರಿ ಪ್ರೋಡಕ್ಷನ್ ಪ್ರಾರಂಭಿಸಿದ್ದಾರೆ.

ತುಳುನಾಡಿನ ಛಲಗಾತಿ ರಾಣಿ ಅಬ್ಬಕ್ಕನ ಜೀವನದ ಸಾಹಸಗಾಥೆಯನ್ನು ಪ್ರೇಕ್ಷಕರ ಮುಂದಿಡಲು ಆಕ್ಟ್-1978 ಚಿತ್ರದ ನಿರ್ದೇಶಕ ಮಂಸೋರೆ ಸಜ್ಜಾಗಿದ್ದಾರೆ. 16ನೇ ಶತಮಾನದ ಐತಿಹಾಸಿಕ ಕಥೆಯನ್ನು ತೆರೆ ಮೇಲೆ ತರಲಿದ್ದಾರೆ. ಪೋರ್ಚುಗೀಸರೊಂದಿಗೆ ಸೆಣಸಾಡುವಂತಹ ಸಾಹಸ ಕಥನವನ್ನೊಳಗೊಂಡಿದೆ. ಚಿತ್ರದ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದು, ಸಿನೆಮಾ ಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸಮುದ್ರದ ಮಧ್ಯದಲ್ಲಿ ದೊಡ್ಡ ಹಡಗೊಂದನ್ನು ಒಳಗೊಂಡ ಚಿತ್ರ ಪೋಸ್ಟರ್‌ನಲ್ಲಿದ್ದು, ಅರೇಬಿಯನ್ ಸಮುದ್ರದ ಅಭಯ ರಾಣಿ ಎಂಬ ಟ್ಯಾಗ್‌ಲೈನ್ ಸಹ ನೀಡಲಾಗಿದೆ. ಇದೊಂದು ಭಾರಿ ಮೊತ್ತದ ಚಿತ್ರವಾಗಲಿದ್ದು, ಸುಮಾರು ವರ್ಷಗಳ ನಂತರ ಮಹಿಳಾ ಪ್ರಧಾನವಾದ ರಾಣಿಯೊಬ್ಬಳ ಕಥೆ ಅದರಲ್ಲೂ ಸ್ವಾತಂತ್ರ ಹೋರಾಟಗಾರ್ತಿಯ ಕಥೆಯ ಸಿನೆಮಾ ಆಗಲಿದೆ. ಜೊತೆಗೆ ಈ ಚಿತ್ರ ದೇಶವ್ಯಾಪಿ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

ಈಗಾಗಲೇ ಆಕ್ಟ್-1978 ಚಲನಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ್ದು, ರಾಣಿ ಅಬ್ಬಕ್ಕ ಚಿತ್ರ ಕೂಡ ಇನಷ್ಟು ಅಬ್ಬರಿಸಲಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸ್ವಾತಂತ್ರ ಹೋರಾಟಗಾರರನ್ನು ನೆನಪಿಸುವಂತಹ ಇಂತಹ ಚಲನಚಿತ್ರಗಳು ಇನಷ್ಟು ಬರಲಿ, ಯುವಜನತೆ ಹೋರಾಟಗಾರರ ಆದರ್ಶಗಳನ್ನು, ಅವರು ಸ್ವಂತಂತ್ರ ದೊರಕಿಸಿಕೊಡಲು ಪಟ್ಟಂತಹ ಶ್ರಮವನ್ನು ತಿಳಿಯಲಿ ಎಂದು ಪ್ರಬುದ್ದರು ಹೇಳುತ್ತಿದ್ದಾರೆ.

Trending

To Top