Entertainment

ಪಬ್ಲಿಕ್ ಟಿವಿ ರಂಗನಾಥ್ ಅವರ ಮಗಳ ಮದುವೆ ಸಂಭ್ರಮ ನೋಡಿ

ಕೆಲವು ದಿನಗಳಿಂದ ಪಬ್ಲಿಕ್ ಟಿವಿ ರಂಗಣ್ಣ ಅವರು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಕಾರಣ ತಮ್ಮ ಮಗಳ ಮದುವೆ ಇನ್ವಿಟೇಶನ್ ಕಾರ್ಡ್ ಅನ್ನ ದೊಡ್ಡ ದೊಡ್ಡ ಸೆಲೆಬ್ರೆಟಿಗಳಿಗೆ, ರಾಜಕಾರಣಿಗಳಿಗೆ ಮಠಾಧೀಶರಿಗೆ ಕೊಟ್ಟು ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಜೊತೆಗೆ ಯಶ್ ಅವರ ಮನೆಗೆ ರಂಗಣ್ಣ ಭೇಟಿ ನೀಡಿರುವ ಫೋಟೋಗಳನ್ನ ಯಶ್ ಅವರ ಅಭಿಮಾನಿಗಳು ಸಾಕಷ್ಟು ವೈರಲ್ ಮಾಡಿದ್ದರು.

ಇದೀಗ ಪಬ್ಲಿಕ್ ಟಿವಿ ಟಿವಿ ಖ್ಯಾತಿಯ ರಂಗಣ್ಣ ಅವರು ತಮ್ಮ ಮಗಳ ಮದುವೆಯನ್ನ ಬಹಳ ಅದ್ಭುತವಾಗಿ ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಇಂದು ರಂಗಣ್ಣ ಅವರ ಮಗಳ ಮದುವೆ ತುಂಬಾ ಅದ್ಧೂರಿಯಾಗಿ ಶಾಸ್ತ್ರೋಕ್ತವಾಗಿ ನಡೆಸಲಾಗಿದೆ. ಈ ಒಂದು ಮದುವೆ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ರಾಜಕಾರಣಿಗಳು ಸೆಲೆಬ್ರೆಟಿಗಳು ಹಾಗೂ ಮಠಾಧೀಶರು ಬಂದು ರಂಗಣ್ಣ ಅವರ ಮಗಳಿಗೆ ಶುಭ ಹಾರೈಸಿದ್ದಾರೆ.

ಪ್ರತಾಪ್ ಸಿಂಹ ಸೇರಿದಂತೆ ದೊಡ್ಡ ದೊಡ್ಡ ರಾಜಕಾರಣಿಗಳು ಯಶ್ ಅವರ ಕುಟುಂಬ ಸೇರಿದಂತೆ ಹಾಗೂ ಅನೇಕ ಸೆಲೆಬ್ರೆಟಿಗಳು ಈ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Trending

To Top