Film News

ಆಲಿಯಾ-ರಣಬೀರ್ ಕಪೂರ್ ರವರಿಗೆ ನಿಶ್ಚಿತಾರ್ಥ ಆಗಿಲ್ಲವಂತೆ!

ಮುಂಬೈ: ಬಾಲಿವುಡ್ ನ ಸ್ಟಾರ್ ನಟರಾದ ಆಲಿಯಾ ಹಾಗೂ ರಣಬೀರ್ ಕಪೂರ್ ರವರ ನಿಶ್ಚಿತಾರ್ಥ ಆಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಹರಿದಾಡುತ್ತಿದ್ದಂತೆ ರಣಬೀರ್ ಕುಟುಂಬ ನಿಶ್ವಿತಾರ್ಥ ಆಗಿಲ್ಲವೆಂಬ ಮಾಹಿತಿ ನೀಡಿದ್ದಾರೆ.

ಆಲಿಯಾ ಹಾಗೂ ರಣಬೀರ್ ಕಪೂರ್ ರವರ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಜೈಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿ ಹರಿದಾಡಿದೆ. ಈ ರೀತಿ ಸುದ್ದಿ ಹರಿದಾಡಲು ಮತ್ತೊಂದು ಕಾರಣವೆಂದರೇ ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ನೀತು ಕಪೂರ್ ಸೇರಿದಂತೆ ಅನೇಕ ಸ್ಟಾರ್ ನಟರು ಜೈ ಪುರಕ್ಕೆ ತೆರಳಿರುವುದಾಗಿದೆ.

ಇನ್ನೂ ಈ ಕುರಿತು ಸ್ಪಷ್ಟನೆ ನೀಡಿರುವ ರಣಬೀರ್ ಕಪೂರ್ ರವರ ದೊಡ್ಡಪ್ಪ ರಣಧೀರ್ ಕಪೂರ್ ರಣಬೀರ್ ಹಾಗೂ ಆಲಿಯಾ ಭಟ್ ರವರಿಗೆ ನಿಶ್ಚಿತಾರ್ಥ ಆಗಿದೆ ಎಂಬುದು ಸುಳ್ಳು ಸುದ್ದಿಯಾಗಿದೆ. ಅವರ ನಿಶ್ಚಿತಾರ್ಥ ಇದ್ದರೇ ನಾವು ಭಾಗವಹಿಸುತ್ತಿದ್ದೆವು ಅಲ್ಲವೇ. ರಣಬೀರ್ ಹಾಗೂ ಆಲಿಯಾ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಗಾಗಿ ಜೈಪುರಕ್ಕೆ ಹೋಗಿದ್ದಾರೆ. ಅವರೊಂದಿಗೆ ನೀತೂ ಕಪೂರ್, ರಣ್ವೀರ್ ಸಿಂಗ್ ಹಾಗೂ ದಿಪೀಕಾ ಪಡುಕೋಣೆ ರವರು ಸಹ ಹೋಗಿದ್ದಾರೆ ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಂದಹಾಗೇ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಂದು ವರ್ಷದಿಂದ ಡೇಟಿಂಗ್ ನಲ್ಲಿದ್ದಾರೆ.

Trending

To Top