Uncategorized

ರಕ್ಷಿತಾಗೆ ಮನಃಪೂರ್ವಕವಾಗಿ ವಿಶ್ ಮಾಡಿದ ರಮ್ಯಾ !

ಸಿನೆಮಾ ಉದ್ಯಮಕ್ಕೆ ಏಕಕಾಲದಲ್ಲಿ ಕಾಲಿಟ್ಟ ನಟಿಯರು ರಮ್ಯಾ ಮತ್ತು ರಕ್ಷಿತಾ ಪ್ರೇಮ್ . ಇಬ್ಬರೂ ಯಾವ ಪಾತ್ರಕು ಸೈ ಎನ್ನುವ ಪ್ರತಿಭೆಗಳು. ಆದರೇ ಈಗ ಎಲ್ಲವು ಬದಲಾಗಿದೆ. ತೆರೆ ಹಿಂದೆ ಸರಿದಿರುವ  ರಕ್ಷಿತಾ ಪ್ರೇಮ್ ತಮ್ಮ ಸಾಂಸಾರಿಕ ಜೀವನ , ಸಿನೆಮಾ ನಿರ್ಮಾಣ , ರಿಯಾಲಿಟಿ ಷೋ ಇವುಗಳಲ್ಲಿ ಬ್ಯುಸಿಯಾಗಿದಾರೆ. ರಮ್ಯಾ ಕೆಲ ಕಾಲ ಸ್ಯಾಂಡಲ್‌ವುಡ್ ನಲ್ಲಿ ಮಿಂಚಿದ್ದರು. ನಂತರ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

2005 ರಿಂದ ಬರೋಬ್ಬರಿ ಒಂದು ದಶಕ ಚಂದನವನವನ್ನ  ಆಳಿದ ಸುರಸುಂದರಾಂಗಿ ರಮ್ಯ 2014 ರ ಬಳಿಕ ಮರೆಯಾಗಿರುವ ರಮ್ಯಾ ಈಗ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.
ರಮ್ಯಾ ಮತ್ತು ರಕ್ಷಿತಾ ರವರ ನಡುವೆ ಏನು ಸರಿ ಇಲ್ಲ ಎಂಬಂತಹ ಮಾತುಗಳು ಕೇಳಿಬಂದಿದ್ದವು. ಆದರೆ ‘ತನನಂ ತನನಂ’ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿ, ಎಲ್ಲರ ಗಮನಸೆಳೆದರು.ಈಗಲೂ ಅವರಿಬ್ಬರ ನಡುವೆ ಒಳ್ಳೆಯ ಒಡನಾಟ ಇದೆ. ಅದಕ್ಕೆ ರಕ್ಷಿತಾಗೆ ರಮ್ಯಾ ತಿಳಿಸಿರುವ ಈ ಶುಭಾಶಯವೇ ಸಾಕ್ಷಿ.

https://www.instagram.com/p/CNEhEALF6qp/?igshid=1q8ra50wvd1cy

“ಜನ್ಮದಿನದ ಶುಭಾಶಯಗಳು ರಾಕ್ಷಿತಾ ಚಲನಚಿತ್ರಗಳಲ್ಲಿ ನನ್ನ ಪ್ರಯಾಣವು ನೀವು ಇಲ್ಲದೆ ಅಪೂರ್ಣ! ನಿನ್ನೊಂದಿಗಿನ ಆ ದಿನಗಳು ತುಂಬಾ ಸಂತೋಷದಿಂದ ತುಂಬಿತ್ತು . ಸೆಂಡಿಂಗ್ ಯು ಸೋ ಮುಚ್ ಲವ್ ಟುಡೇ ಅಂಡ್ ಆಲ್ವೇಸ್! ಹ್ಯಾವ್ ಅ ವಂಡರ್ಫುಲ್ ಡೇ ! ಕಿಸ್ಸ್ ಕಿಸ್ಸ್ “ಎಂದು ಕ್ಯಾಪ್ಶನ್ ಬರೆದು ರಮ್ಯಾ ಪೋಸ್ಟ್ ಮಾಡಿದ್ದಾರೆ. ಇದು ಹೃದಯಸ್ಪರ್ಶಿಸುವ ಸಂಗತಿಯಾಗಿದೆ.
ಉದ್ಯಮದ ಸ್ನೇಹಿತರಿಂದಾಗಿ ಈ ಪೋಸ್ಟ್ ಸಾಕಷ್ಟು ಕಾಮೆಂಟ್‌ಗಳನ್ನು ಗಳಿಸಿದೆ ಎಂದು ಹೇಳಬೇಕಾಗಿಲ್ಲ.
ರಾಗಿಣಿ ದ್ವಿವೇದಿ ಯಿಂದ ಆಶಿಕಾ ರಂಗನಾಥ್‌ರವರೆಗೆ ಅನೇಕರು ಪ್ರತಿಕ್ರಿಯಿಸುತ್ತಾ ರಕ್ಷಿತಾ ರವರ ಹುಟ್ಟುಹಬ್ಬಕ್ಕೆ ಶುಭಹಾರೈಸಿದರು. ರಮ್ಯಾ ಅವರಲ್ಲದೆ, ದರ್ಶನ್ ಮತ್ತು ಸುದೀಪ್ ಕೂಡ ರಕ್ಷಿತಾಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.

Trending

To Top