Karnataka

ನನಗೆ ಪ್ರೋತ್ಸಾಹ ನೀಡಿ, ಉತ್ಸಾಹ ತುಂಬಿ,ಬೆಂಬಲಿಸಿ ಬೆಳೆಸಿದ್ದು ರಾಹುಲ್ ಗಾಂಧೀ ಎಂದ ರಮ್ಯಾ! ರಮ್ಯಾ ಹೀಗೆ ಹೇಳಿದ್ದೇಕೆ

ದಶಕದ ಹಿಂದೆ ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತಿಯಾಗಿರುವ ನಟಿ ರಮ್ಯಾ, ಸಿನಿಮಾಗಳಲ್ಲಿ ನಟಿಸಿಯೇ 3 ರಿಂದ 5 ವರ್ಷದ ಮೇಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಿದ್ದ ನಟಿ ಒಂದು ವರ್ಷದಿಂದ ಅದರಿಂದಲೂ ದೂರ ಸರಿದಿದ್ದರು. ಮೊದಲಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುತ್ತಿದ್ದ ರಮ್ಯಾ, ಪ್ರಚಲಿತ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಅಭಿಮಾನಿಗಳ ಜೊತೆ ಚರ್ಚೆ ಮಾಡುತ್ತಿದ್ದರು. ಜೊತೆಗೆ, ತಮ್ಮ ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದರು. ಕಳೆದ ಒಂದು ವರ್ಷದಿಂದ ರಮ್ಯಾ ಅವರ ಅಭಿಮಾನಿಗಳು ಇದೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತಿದ್ದರು..

ಆದರೆ ಕಳೆದ ಒಂದೆರಡು ತಿಂಗಳಿನಿಂದ ಸಾಮಾಜಿಕ ಜಾಲತಾಣಕ್ಕೆ ಮತ್ತೆ ಬಂದಿರುವ ರಮ್ಯಾ, ಮತ್ತೊಮ್ಮೆ ಆಕ್ಟಿವ್ ಆಗಿದ್ದಾರೆ. ಆಗಾಗ ಪೋಸ್ಟ್ ಮಾಡಿದ್ದಾರೆ. ಹಿಂದಿನ ಹಾಗೆ ಪ್ರಚಲಿತ ಘಟನೆಗಳ ಬಗ್ಗೆ ಪೋಸ್ಟ್ ಮಾಡುವುದನ್ನು ಸಹ ಶುರು ಮಾಡಿದ್ದಾರೆ. ಆದರೆ ಅವರ ಅಭಿಮಾನಿಗಳಿಗೆ ಹಾಗೂ ಕನ್ನಡ ಸಿನಿಪ್ರಿಯರು ರಮ್ಯಾ ಕುರಿತು ಹಲವಾರು ಪ್ರಶ್ನೆಗಳಿವೆ. ಇಷ್ಟು ದಿನ ರಮ್ಯಾ ಎಲ್ಲಿದ್ದರು ? ಏನಾಗಿದ್ದರು , ಇನ್ನು ಮುಂದೆ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಎಂದು.. ಈ ಪ್ರಶ್ನೆಗಳಿಗೆಲ್ಲಾ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಉತ್ತರ ನೀಡಿದ್ದಾರೆ.. ಇತ್ತೀಚೆಗೆ ರಮ್ಯಾ ಅವರು ಫೇಸ್ ಬುಕ್ ಬಗ್ಗೆ ಹಾಕಿದ್ದ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಾಜಕೀಯ ಪಕ್ಷಗಳ ವಿಚಾರದಲ್ಲಿ ಫೇಸ್ ಬುಕ್ ಸಹ ಪಕ್ಷಪಾತ ಮಾಡುತ್ತದೆ. ಇದು ನಿಮ್ಮ ಅನುಭವಕ್ಕೂ ಬಂದಿದೆಯೇ ? ಎಂದು ಪೋಸ್ಟ್ ಮಾಡಿದ್ದರು ರಮ್ಯಾ. ಇದರ ಕುರಿತು ಕೇಳಿರುವ ಪ್ರಶ್ನೆಗೆ..

ಈ ವಿಷಯಗಳು ನನ್ನ ಅನುಭವಕ್ಕು ಬಂದಿದೆ.. ಒಂದು ದಿನ ಬೆಳಿಗ್ಗೆ ನಾನು ಫೇಸ್ ಬುಕ್ ನಲ್ಲಿ ಕಾಂಗ್ರೆಸ್ ಅಭಿಯಾನ ಆರಂಭ ಮಾಡಬೇಕಿತ್ತು. ನಮ್ಮ ಪ್ರಣಾಳಿಕೆ ಸಹ ಬಿಡುಗಡೆ ಆಗಿತ್ತು.. ನಮಗೆಲ್ಲ ತಿಳಿದಿರುವ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಸಮಯಕ್ಕೆ ಬಹಳ ಮಹತ್ವ ಇದೆ. ಇಲ್ಲಿ ನೀವು ಆಟದಲ್ಲಿ ಇದ್ದಿರೋ ಅಥವಾ ಇಲ್ಲವೋ ಎನ್ನುವುದಕ್ಕಿಂತ. ಆ ಪ್ಲಾಟ್ ಫಾರ್ಮ್ ನಲ್ಲಿ ಸರಿಯಾದ ಸಮಯಕ್ಕೆ ಇರುವುದು ಬಹಳ ಮುಖ್ಯವಾಗುತ್ತದೆ.. ಚುನಾವಣಾ ಆಯೋಗದ ನೀತಿ-ನಿಯಮ, ಅನುಮತಿ ಎಲ್ಲವೂ ಇದ್ದರೂ ಸಹ, ಫೇಸ್‌ಬುಕ್‌ ಸಂಸ್ಥೆ ಅದನ್ನು ಬಿಡುಗಡೆ ಮಾಡಲು ತನ್ನದೇ ಆದ ಸಮಯ ತೆಗೆದುಕೊಂಡಿತು. ಪ್ರಣಾಳಿಕೆ ಬಿಡುಗಡೆಯಾದ ಒಂದು ದಿನದ ನಂತರ ಜಾಹೀರಾತುಗಳನ್ನು ಫೇಸ್ ಬುಕ್ ನಲ್ಲಿ ಅಂತಿಮವಾಗಿ ಪ್ರಕಟಿಸಲಾಯಿತು. ಫೇಸ್‌ಬುಕ್‌ನವರಿಗೆ ಒತ್ತಡ ಹಾಕುವ ಅನೇಕ ಕರೆಗಳು ಬರುತ್ತಿದ್ದವು ಎಂದು ನಂತರ ತಿಳಿಯಿತು ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿದ್ದ ನೀವು ನಂತರ ಬ್ರೇಕ್ ತೆಗೆದುಕೊಂಡಿರಿ, ಇದೀಗ ಮತ್ತೆ ಬಂದಿದ್ದೀರಿ.. ಈ ಬ್ರೇಕ್ ನಡುವೆ ಏನಾಯಿತು ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ರಮ್ಯಾ ಉತ್ತರಿಸಿದ್ದು ಹೀಗೆ.. ನನ್ನ ಜೀವನದಲ್ಲಿ ಹೊಸ ರೀತಿಯ ಆಯಾಮಗಳನ್ನು ಕಂಡುಕೊಂಡಿದ್ದೇನೆ. ಮುಂದಿನ ಭವಿಷ್ಯದಲ್ಲಿ ಏನಾಗಲಿದೆ ಎಂಬುದು ಗೊತ್ತಿಲ್ಲ. ನಡೆಯುವ ಯಾವುದು ಸಹ ಹಿಂದೆ ನಿರ್ಧರಿಸಿದ್ದಲ್ಲ. ಹೌದು, ನಾನು ಬ್ರೇಕ್‌ ತೆಗೆದುಕೊಂಡಿದ್ದೆ. ವಿಶ್ರಾಂತಿ ಪಡೆಯಲು ಬ್ರೇಕ್ ತೆಗೆಡಿಕೊಂಡೇ. ನನ್ನ ಜೀವನದಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಹಿಂದಿರುಗಿ ನೋಡಲು ಒಂದು ಹೆಜ್ಜೆ ಹಿಂದೆಯಿಟ್ಟೆ. ಈಗ ನಾನು ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡಿದ್ದೇನೆ. ಮೂರು ವರ್ಷಗಳ ಕಾಲ ನಡೆಯುವ ವೇದಾಂತ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಆ ಕಾರ್ಯಕ್ರಮದಲ್ಲಿ ಈಗ ನಾನು ಮೊದಲ ವರ್ಷದಲ್ಲಿದ್ದೇನೆ, ಇನ್ನೇನು ಕೆಲವೇ ತಿಂಗಳಲ್ಲಿ ಈ ಕೋರ್ಸ್ ಮುಗಿಯಲಿದೆ. ಜೊತೆಗೆ ಹಿಂದುಸ್ತಾನಿ, ಕಾರ್ನಟಿಕ್, ವೆಸ್ಟರ್ನ್ ಸಂಗೀತ ಕೇಳುವುದನ್ನು ತುಂಬಾ ಇಷ್ಟಪಡುತ್ತೇನೆ. ಪೇಂಟಿಂಗ್ ಮಾಡುವುದನ್ನು ಸಹ ಆರಂಭಿಸಿದ್ದೇನೆ ಎನ್ನುತ್ತಾರೆ ರಮ್ಯಾ.

ಕೊನೆಯದಾಗಿ ಸಿನಿಮಾ ಮತ್ತು ರಾಜಕೀಯ, ರಾಜಕೀಯ ವೃತ್ತಿ, ಅಲ್ಲಿ ರಾಜೀನಾಮೆ ನೀಡಿದ್ದರ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಮ್ಯಾ.. ನಾನು ಚುನಾವಣೆ ಆರಂಭವಾಗುವ ಮೊದಲೇ ರಾಜೀನಾಮೆ ಪತ್ರ ನೀಡಿದ್ದರೂ ಸಹ ಅವರು ಅದನ್ನು ಸ್ವೀಕರಿಸಲಿಲ್ಲ. ಎರಡೂವರೆ ವರ್ಷಗಳ ಸಮಯ ನಿರಂತರವಾಗಿ ಕೆಲಸ ಮಾಡಿ ಆನಂತರ ನನ್ನ ಕೆಲಸದಿಂದ ಸ್ವಲ್ಪ ಬ್ರೇಕ್ ಪಡೆದುಕೊಳ್ಳಬೇಕು ಎಂದುಕೊಂಡಿದ್ದೆ. ನನಗೆ ನಾನು ಮಾಡುತ್ತಿರುವ ಕೆಲಸ ತುಂಬ ಇಷ್ಟ ಆಗಿತ್ತು. ರಾಹುಲ್ ಗಾಂಧಿ ಅವರು ನನಗೆ ಪ್ರೋತ್ಸಾಹ, ಐಡಿಯಾ ಮತ್ತು ಬೆಂಬಲ ನೀಡುತ್ತಿದ್ದರು. ನನ್ನ ಕಮಿಟ್ಮೆಂಟ್ ಪ್ರಕಾರ ಚುನಾವಣೆ ಮುಗಿಯುವವರೆಗು ನಾನು ಕೆಲಸ ನಿಲ್ಲಿಸಲಿಲ್ಲ. ರಾಷ್ಟ್ರದ ಜವಾಬ್ದಾರಿಯುತ ಪ್ರಜೆಯಾಗಿ ನಾನು ಅಧರ್ಮ, ಅನ್ಯಾಯದ ವಿರುದ್ಧದ ಚಟುವಟಿಕೆ ನಡೆದಾಗ ಅದರ ವಿರುದ್ಧ ನಾನು ಮಾತನಾಡುತ್ತೇನೆ. ರಾಷ್ಟ್ರಧ್ವಜ ಹಿಡಿದುಕೊಳ್ಳುವುದು, ಬೋರ್ಡರ್ ಬಳಿ ನಿಂತುಕೊಳ್ಳುವುದು ರಾಷ್ಟ್ರಪ್ರೇಮವಲ್ಲ. ತಪ್ಪಿದ್ದಾಗ ಮಾತನಾಡುವುದು ನಿಜವಾದ ನಾಗರಿಕನ ಗುಣ.. ಎಂದು ಸಂದರ್ಶನದಲ್ಲಿ ಹೇಳಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ.

Trending

To Top