News

ರಾಮ ಮಂದಿರ ನಿರ್ಮಾಣದ ಬಗ್ಗೆ ನಟಿ ರಮ್ಯಾ ಹೇಳಿದ್ದೇನು ಗೊತ್ತಾ! ನಿಮ್ಮ ಅನಿಸಿಕೆ ತಿಳಿಸಿ

ದಶಕದ ಹಿಂದೆ ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತಿಯಾಗಿರುವ ನಟಿ ರಮ್ಯಾ, ಸಿನಿಮಾಗಳಲ್ಲಿ ನಟಿಸಿಯೇ 3 5 ವರ್ಷದ ಮೇಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಿದ್ದ ನಟಿ ಒಂದು ವರ್ಷದಿಂದ ಅದರಿಂದಲೂ ದೂರ ಸರಿದಿದ್ದರು. ಮೊದಲಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುತ್ತಿದ್ದ ರಮ್ಯಾ, ಪ್ರಚಲಿತ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಅಭಿಮಾನಿಗಳ ಜೊತೆ ಚರ್ಚೆ ಮಾಡುತ್ತಿದ್ದರು. ಜೊತೆಗೆ, ತಮ್ಮ ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದರು. ಕಳೆದ ಒಂದು ವರ್ಷದಿಂದ ರಮ್ಯಾ ಅವರ ಅಭಿಮಾನಿಗಳು ಇದೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತಿದ್ದರು..
ಆದರೆ ಕಳೆದ ಒಂದೆರಡು ತಿಂಗಳಿನಿಂದ ಸಾಮಾಜಿಕ ಜಾಲತಾಣಕ್ಕೆ ಮತ್ತೆ ಬಂದಿರುವ ರಮ್ಯಾ, ಮತ್ತೊಮ್ಮೆ ಆಕ್ಟಿವ್ ಆಗಿದ್ದಾರೆ. ಆಗಾಗ ಪೋಸ್ಟ್ ಮಾಡಿದ್ದಾರೆ. ಹಿಂದಿನ ಹಾಗೆ ಪ್ರಚಲಿತ ಘಟನೆಗಳ ಬಗ್ಗೆ ಪೋಸ್ಟ್ ಮಾಡುವುದನ್ನು ಸಹ ಶುರು ಮಾಡಿದ್ದಾರೆ. ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು. ಇದರ ಕುರಿತು, ನಟಿ ರಮ್ಯಾ ತಮ್ಮ ಅಭಿಪ್ರಾಯವನ್ನು ಹೆಂಚಿಕೊಂಡಿದ್ದಾರೆ.
“ರಾಮಮಂದಿರ ನಿರ್ಮಾಣದ ಕಾರ್ಯದಿಂದ ಹಿಂದೂಗಳು ಸಂತೋಷವಾಗಿದ್ದಾರ್..ಅದರಿಂದ ನನಗೂ ಖುಷಿ ಆಗಿದೆ.. ನಾಳೆ ಮಸೀದಿ ನಿರ್ಮಾಣ ಕಾರ್ಯ ಆರಂಭವಾದಾಗ ಮುಸ್ಲಿಮರು ಸಂತೋಷ ಪಡುತ್ತಾರೆ..ಆಗಲೂ ನಾನು ಖುಷಿ ಪಡುತ್ತೇನೆ.. ಆದರೆ ನಾವು ಸಂತೋಷ ಪಡಲು ದೇವಸ್ಥಾನ ಅಥವಾ ಮಸೀದಿ ಅಗತ್ಯವಿಲ್ಲ ಎಂದು ಪ್ರತಿಯೊಬ್ಬರೂ ತಿಳಿದಾಗ ನನಗೆ ತುಂಬಾ ಖುಷಿ ಆಗುತ್ತದೆ. ಐಕ್ಯತೆ ಮತ್ತು ಒಗ್ಗಟ್ಟಿನಲ್ಲಿ ಎಲ್ಲಕ್ಕಿಂತ ಹೆಚ್ಚು ಸಂತೋಷವಿದೆ. ಬಾಹ್ಯವಾಗಿರೋದನ್ನ ನಿರ್ಲಕ್ಷಿಸಿ ಆಂತರ್ಯವನ್ನು ನೋಡಿ..ಅಲ್ಲಿ ನಿಜವಾದ ದೇವರು ಕಾಣುತ್ತಾನೆ.. ಅಲ್ಲಿ ನೀವು ನಿಜವಾಗಿಯೂ ಯಾರು ಎಂಬುದು ಕಾಣುತ್ತದೆ…” – ರಮ್ಯಾ..ನಟಿ ರಮ್ಯಾ ಅವರ ಈ ಮಾತುಗಳು ಅಭಿಮಾನಿಗಳಿಗೆ ಬಹಳ ಸಂತೋಷ ನೀಡಿದೆ. ದೇವರು ನಮ್ಮಲ್ಲೇ ಇದ್ದಾನೆ ಎಂಬುದನ್ನು ಅರ್ಥಪೂರ್ಣವಾಗಿ ತಿಳಿಸಿ, ಎಲ್ಲರ ಮನಗೆದ್ದಿದ್ದಾರೆ ರಮ್ಯಾ.

Trending

To Top