ಬೆಂಗಳೂರು: ರಾಜಕೀಯದಲ್ಲಿ ಬ್ಯೂಸಿ ಇದ್ದ ಕನ್ನಡ ಖ್ಯಾತ ನಟಿ ಮೋಹಕ ತಾರೆ ಎಂದು ಕರೆಯುವ ರಮ್ಯಾರವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸೇರಿದಂತೆ ಹಲವು ನಟರು ಶುಭಾಷಯಗಳನ್ನು ಕೋರಿದ್ದಾರೆ.
ಇತ್ತೀಚಿಗೆ ನಟಿ ರಮ್ಯಾ ಚಿತ್ರರಂಗಕ್ಕೆ ದೂರವಾಗಿ ರಾಜಕೀಯ ಕ್ಷೇತ್ರದತ್ತ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಸಿನೆಮಾ ರಂಗಕ್ಕೆ ದೂರವಾದರೂ ಕೂಡ ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ತಮ್ಮ ಪ್ರೀತಿಯ ನಟಿ ಪುನಃ ಚಿತ್ರರಂಗಕ್ಕೆ ವಾಪಸ್ಸು ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಸಹ ಟ್ವಿಟರ್ನಲ್ಲಿ ರಮ್ಯಾ ಅವರ ಪೊಟೊವೊಂದನ್ನು ಶೇರ್ ಮಾಡಿ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ. ನಿಮ್ಮೊಂದಿಗೆ ಮಾಡಿದ ಸಿನಿಮಾ ಪಯಣ ಇಂದಿಗೂ ನನಗೆ ನೆನಪು ಬರುತ್ತಿದೆ, ಸದಾ ಸಂತೋಷದಿಂದ ಹುಟ್ಟುಹಬ್ಬ ಆಚರಿಸಿ ಎಂದು ಟ್ವೀಟ್ ಮಾಡಿದ್ದಾರೆ.
ರಮ್ಯಾ ಕೂಡ ಹುಟ್ಟುಹಬ್ಬದ ಪ್ರತೀಯ ಸಂದೇಶಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ, ನಿಮ್ಮ ಶುಭಾಷಯಗಳಿಂದ ನನ್ನ ಹುಟ್ಟು ಹಬ್ಬಕ್ಕೆ ಮತಷ್ಟು ಸಂತಸ ತುಂಬಿದೆ ಎಂದು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
