Karnataka

ಭಾರತದ ಹೆಮ್ಮೆ, ರಾಮ ಮಂದಿರದ ವಾಸ್ತುಶಿಲ್ಪದ ಹಿಂದೆ ಇರುವ ಕುಟುಂಬ! ಈ ಕಥೆ ಏನು ಗೊತ್ತಾ, ವಿಡಿಯೋ ನೋಡಿ

ಆಗಸ್ಟ್ 5ರಂದು ಭಾರತದ ಇತಿಹಾಸದಲ್ಲೇ ಮರೆಯಲಾಗದ ದಿನ. 138 ವರ್ಷಗಳ ಹೋರಾಟದ ನಂತರ ಕೊನೆಗೂ, ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಿಸಲು ಅನುಮತಿ ಸಿಕ್ಕಿ, ಭೂಮಿ ಪೂಜೆ ನೆರವೇರಿದೆ. ಇದು ಭಾರತಿಯರೆಲ್ಲರಿಗೂ ಬಹಳ ಸಂಭ್ರಮದ ದಿನ. ಭಾರತದ ಎಲ್ಲೆಡೆ, ಸಾರ್ವಜನಿಕರು ಈ ದಿನವನ್ನು ಸಂಭ್ರಮಿಸಿದ್ದಾರೆ. ಸಿಹಿ ಹಂಚಿ, ಪಟಾಕಿ ಸಿಡಿಸಿ, ದೀಪ ಹಚ್ಚಿ ಸಂತೋಷ ವ್ಯಕ್ತ ಪಡಿಸಿದ್ದಾರೆ. ಇದೆಲ್ಲದರ ನಡುವೆ ನಮ್ಮ ಕರ್ನಾಟಕದ ಪ್ರತಿಭೆಯೊಬ್ಬರು ವಿಭಿನ್ನ ರೀತಿಯಲ್ಲಿ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ದೇಶದ ಎಲ್ಲೆಡೆ ರಾಮನಾಮ ಸ್ಮರಣೆ ನಡೆಯಿತ್ಯ್. ಪ್ರಧಾನಿ ಮೋದಿಯವರು 40 ಕೆಜಿ ಬೆಳ್ಳಿ ಇಟ್ಟಿಗೆ ಇಟ್ಟು ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಸಿ ಅದ್ಧೂರಿ ಇತಿಹಾಸ ಮುನ್ನುಡಿ ಬರೆದಿದ್ದಾರೆ. ರಾಮಮಂದಿರ ನಿರ್ಮಾಣದಲ್ಲಿ ಸಾಕಷ್ಟು ಕುಟುಂಬಗಳ ಶ್ರಮ ಅಡಗಿದೆ. ಇಂದು ನಿಮಗೆ ತಿಳಿಸುತ್ತಿರುವ ಫ್ಯಾಮಿಲಿ ಬಹಳ ವಿಶೇಷವಾದದ್ದು. ಅದು ಅಹಮದಬಾದ್​​ನಲ್ಲಿ ವಾಸ ಮಾಡುತ್ತಿರುವ ಸೊಂಪುರಸ್​​ ಫ್ಯಾಮಿಲಿ. ಈ ಕುಟುಂಬದ ವಿಶೇಷತೆ ಏನು ಅಂದ್ರೆ. ಈ ಕುಟುಂಬ ಶಿಲಾನ್ಯಾಸ ಮತ್ತು ವಾಸ್ತುಶಿಲ್ಪವನ್ನು ನಂಬಿಕೊಂಡು ಬದುಕುತ್ತಿರುವವರು. ಕಳೆದ 30 ವರ್ಷದಿಂದಲೂ ರಾಮಮಂದಿರ ನಿರ್ಮಾಣ ಕಾರ್ಯದ ಹೋರಾಟದಲ್ಲಿ ಈ ಕುಟುಂಬ ತೊಡಗಿಕೊಂಡಿದೆ. ರಾಮಮಂದಿರದ ವಾಸ್ತುಶಿಲ್ಪವನ್ನು ಅಂತಿಮವಾಗಿ ಫೈನಲ್ ಮಾಡಿರುವವರು ಕೂಡ ಇವರೇ.
ಹೌದು, 30 ವರ್ಷಗಳಿಂದ ರಾಮಮಂದಿರ ನಿರ್ಮಾಣಕ್ಕಾಗಿ ನಡೀತಾ ಇರೋ ಹೋರಾಟ ಹಾಗೂ ವಾಸ್ತಶಿಲ್ಪ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 90 ರದಶಕದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನ್ಯಾಯಾಂಗದಲ್ಲಿ ಪ್ರಕರಣವನ್ನು ತಡೆ ಹಿಡಿದಿದ್ರು. ಆ ಸಂದರ್ಭದಿಂದ ಹಿಡಿದು 2019ರವರೆಗೆ ರಾಮಮಂದಿರ ನಿರ್ಮಾಣ ಆಗುತ್ತೆ ಅನ್ನೋ ಭರವಸೆಯನ್ನ ಕಳೆದುಕೊಂಡಿದ್ರು. ಆದ್ರೆ ಯಾವಾಗ 2019 ರಲ್ಲಿ ಮಂದಿರ ನಿರ್ಮಾಣ ಮಾಡಿ ಅಂತಾ ಒಪ್ಪಿಗೆ ಸಿಕ್ತೋ ಅಂದಿನಿಂದ ಇಂದಿನವರೆಗೂ ಈ ಕುಟುಂಬ ಮತ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ.ಆಶಿಶ್​​ ಸೊಂಪೂರ ಇವರ ವಯಸ್ಸು 49, ಇವರು ತಿಳಿಸಿರುವ ಪ್ರಕಾರ, ಪ್ರಧಾನಿ ಮೋದಿಯವರು ಗುಜರಾತ್​ ನ ಸಿಎಂ ಆಗಿದ್ದ ಸಮಯದಿಂದಲೂ ರಾಮಮಂದಿರ ನಿರ್ಮಾಣದ ಬಗ್ಗೆ ಪ್ರತಿಯೊಂದು ಸಣ್ಣ ಮಾಹಿತಿಗಳನ್ನು ಸಹ ಪಡೆಯುತ್ತಿದ್ದರು ಎಂದು ತಿಳಿಸಿದ್ದಾರೆ.
ರಾಮಮಂದಿರ ನಿರ್ಮಾಣದ ವಿಷಯವಾಗಿ 1990 ರಲ್ಲಿ ಸುಮಾರು 4 ರಿಂದ 5 ವಿವಿಧ ವಿನ್ಯಾಸಗಳ ಪ್ಲ್ಯಾನ್​ ಗಳನ್ನ ನೀಡಲಾಗಿತ್ತು. ಹಾಗೂ ಸೊಂಪುರಸ್​ ಕುಟುಂಬ ಕಳೆದ ತಿಂಗಳು ಹೊಸ ವಿನ್ಯಾಸವನ್ನು ನೀಡಿದ್ದರು. ಆದ್ರೆ ಆ ಪ್ಲ್ಯಾನ್ ಗಿಂತ ಎರಡರಷ್ಟು ಹೆಚ್ಚು ವಿನ್ಯಾಸ ಇರುವ ಪ್ಲ್ಯಾನ್​ ಅನ್ನು ನೀಡಿದ್ದಾರೆ. ಇದಕ್ಕೂ ಮೊದಲು ಈ ಕುಟುಂಬದ ಹಿರಿಯ ವಾಸ್ತುಶಿಲ್ಪಗಾರ ಶ್ರೀರಾಮನ ಬೇರೆ ದೇವಷ್ಟಗಳಲ್ಲಿ ರಾಮ ಮಂದಿರದ ವಿನ್ಯಾಸ ಹೇಗಿರುತ್ತೋ ಅದರ ಹಾಗೆಯೇ ಪ್ಲ್ಯಾನ್​​ ರೆಡಿ ಮಾಡಿದ್ದರಂತೆ. ಅಡದೆ ಬೇರೆ ವಿವಾದಗಳನ್ನು ಪರಿಶೀಲಿಸಿದ ನಂತರ ಅವರು ರಾಮಮಂದಿರದ ವಿನ್ಯಾಸವನ್ನ ಬದಲಾಯಿಸಿದ್ದಾರಂತೆ. ಚಂದ್ರಕಾಂತ್​ ಸೊಂಪುರ ಅವರಿಗೆ ಈಗ 78 ವರ್ಷ. ಹಾಗಾಗಿ ಚಂದ್ರಕಾಂತ್ ಅವರ ಮಕ್ಕಳಾದ ಆಶಿಶ್​ ಹಾಗೂ ನಿಖಿಲ್​​ ಸೊಂಪುರ ಅವರು ಮಂದಿರ ನಿರ್ಮಾಣ ಕಾರ್ಯವನ್ನ ಮುಂದುವರೆಸುವ ಕಾರ್ಯವನ್ನು ತೆಗೆದುಕೊಂಡಿದ್ದಾರೆ. ಚಂದ್ರಕಾಂತ್​​ ಅವರು ನಿರ್ಮಾಣದ ಕೆಲಸ ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಾರಂತೆ.ಸೊಂಪುರಸ್​ ಕುಟುಂಬದವರಿ ಮೂಲತಃ ಪಾಲಿಟಾನ ಪ್ರದೇಶದವರು ಅಲ್ಲಿಂದ ಅಹಮದಬಾದ್​ ಗೆ ವಲಸೆ ಬಂದವರಂತೆ.. ರಾಮಮಂದಿರ ನಿರ್ಮಾಣದ ಕೆಲಸಕ್ಕೆ, ಉತ್ಪಾದನೆ ಮತ್ತು ಹಣಕಾಸು ಸೇವೆಗಳ ಸಂಘಟನೆ ಎಲ್ಲಾ ನಾಗರಿಕ ಕಾರ್ಯಗಳನ್ನ ಮತ್ತು ನಿರ್ಮಾಣ ಕಾರ್ಯಗಳನ್ನು ಈ ಸಂಸ್ಥೆ ವಹಿಸಿಕೊಂಡಿದೆಯಂತೆ.
ಸೊಂಪುರಸ್​​ ಕುಟುಂಬ ಹೇಳುವ ಪ್ರಕಾರ, ರಾಮ ಮಂದಿರ ಮಾತ್ರವಲ್ಲದೇ ಭಾರತ ಮತ್ತು ವಿದೇಶಗಳಲ್ಲಿ 200 ಕ್ಕೂ ಹೆಚ್ಚು ದೇವಾಲಯಗಳನ್ನು ಈ ಕುಟುಂಬದವರು ನಿರ್ಮಾಣ ಮಾಡಿದ್ದಾರೆ. 1989-90ರ ದಶಕದಲ್ಲೇ ರಾಮಮಂದಿರ ನಿರ್ಮಾಣದ ವಿಷಯವಾಗಿ ಚಂದ್ರಕಾಂತ್​​ ಸೊಂಪುರ ಅವರನ್ನು ವಿಶ್ವ ಹಿಂದೂ ಪರಿಷತ್​​ ಮುಖ್ಯಸ್ಥರು ಸಂಪರ್ಕಿಸಿ ಅವರನ್ನು ದೆಹಲಿಗೆ ಬರುವಂತೆ ತಿಳಿಸಿದ್ದರಂತೆ. ರಾಮಮಂದಿರ ನಿರ್ಮಾಣದ ಅವರ ಬಗ್ಗೆ ಚರ್ಚೆ ನಡೆಸಿ, ಭೂಮಿಯನ್ನ ಹಿಂದಕ್ಕೆ ಪಡೆಯುವುದರ ಬಗ್ಗೆ ಅಯೋಧ್ಯೆಗೆ ಹೋಗಿದ್ದರಂತೆ. ಆದರೆ ಅಲ್ಲಿ ಸ್ಟ್ರಿಕ್ಟ್ ಇದ್ದಿದ್ದರಿಂದ, ಚಂದ್ರಕಾಂತ್​​​​ ಅವರು ಭಕ್ತನಂತೆ ವೇಷ ಧರಿಸಿ, ತಮ್ಮ ಹೆಜ್ಜೆಗಳಿಂದಲೇ ಭೂಮಿಯನ್ನ ಅಳೆದಿದ್ದರು ಎಂದು ಮಾಹಿತಿ ದೊರಕಿದೆ. .ಸೋಂಪುರಸ್ ಕುಟುಂಬದ ವಾಸ್ತುಶಿಲ್ಪದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ, ಬಹಳ ದೊಡ್ಡ ಜವಾಬ್ದಾರಿ ತಮ್ಮ ಮೇಲಿದೆ ಅಂದಿದೆ ಈ ಕುಟುಂಬ.

Trending

To Top