Film News

ನಟ ರಮೇಶ್ ಅರವಿಂದ್ ತಮ್ಮ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದು ಹೀಗೆ!

ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ ನಿರ್ದೇಶಕ ಸೃಜನಶೀಲ ವ್ಯಕ್ತಿ ಎಂದರೆ ಅದು ರಮೇಶ್ ಅರವಿಂದ್ ಇತ್ತೀಚೆಗಷ್ಟೇ ತಮ್ಮ ಮಗಳ ಮದುವೆಯನ್ನ ನಟ ಅದ್ದೂರಿಯಾಗಿ ನೆರವೇರಿಸಿದರು. ಇದೀಗ ಅವರು ಅವರ ವೈವಾಹಿಕ ಜೀವನದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಹೌದು ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ಅವರ 30 ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.ಈ ಹಿನ್ನೆಲೆಯಲ್ಲಿ ನಟ ತಮ್ಮ ಮದುವೆಯ ಎರಡು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಂಚಿಕೊಂಡಿದ್ದಾರೆ.ಅಲ್ಲದೆ ವಿಶೇಷ ಸಾಲು ಕೂಡ ಬರೆದುಕೊಂಡಿದ್ದಾರೆ.

ಅಂದು ಬೆಸ್ಟ್ ಫ್ರೆಂಡ್ ಹೆಂಡತಿಯಾದರು, ಇಂದು ಹೆಂಡತಿಯೇ ಬೆಸ್ಟ್ ಫ್ರೆಂಡ್ ಕೂಡ ಎಂದು ಬರೆದುಕೊಂಡಿದ್ದಾರೆ.ಈ ಮೂಲಕ ನಟ ತಮ್ಮ ಪತ್ನಿಯನ್ನು ಒಳ್ಳೆಯ ಗೆಳತಿ ಎಂದು ಬಣ್ಣಿಸಿದ್ದಾರೆ.ರಮೇಶ್ ಅರವಿಂದ್ ಅವರು ಜುಲೈ 7 ರಂದು 1991ರಲ್ಲಿ ತಾವು ಪ್ರೀತಿಸಿದ ಅರ್ಚನಾ ಜೆ0ತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ಇಂದಿಗೆ ಅವರ ದಾಂಪತ್ಯಕ್ಕೆ 30 ವರ್ಷವಾಗಿದೆ.

https://www.instagram.com/p/CRArpTKsUig/?utm_medium=copy_link

Trending

To Top