ಹೈದರಾಬಾದ್: ತೆಲುಗು ಸಿನಿರಂಗದ ಬಿಗೆಸ್ಟ್ ಮೂವಿ ಆಚಾರ್ಯ ಚಿತ್ರಕ್ಕಾಗಿ ಅಭಿಮಾನಿಗಳು ಯಾವ ಮಟ್ಟಿಗೆ ಕಾಯುತ್ತಿದ್ದಾರೆ ಎಂಬುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದೀಗ ಆಚಾರ್ಯ ಚಿತ್ರದಲ್ಲಿ ರಾಮ್ ಚರಣ್ ಸಹ ನಟಿಸಲಿದ್ದು, ಅವರ ಪೋಸ್ಟರ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೆಗಾಸ್ಟಾರ್ ಅಭಿನಯದ ಆಚಾರ್ಯ ಚಿತ್ರ ಈಗಾಗಲೇ ಟಾಲಿವುಡ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ಈ ಚಿತ್ರದಲ್ಲಿ ಅತಿಥಿ ಲುಕ್ ನಲ್ಲಿ ಕಾಣಿಸಿಕೊಳ್ಳಲಿರುವ ರಾಮ್ ಚರಣ್ ತೇಜ್ ರವರಿಗೆ ಸಂಬಂಧಿಸಿದಂತೆ ಪೋಸ್ಟರ್ ವೊಂದು ರಿಲೀಸ್ ಆಗಿದ್ದು. ಕಿಲ್ಲಿಂಗ್ ಲುಕ್ ನಲ್ಲಿ ಕಾಣಿಸಿಕೊಂಡ ರಾಮ್ ಚರಣ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮಟ್ಟದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ ಆ ಪೋಸ್ಟರ್ ನಿಜವಾದದ್ದು ಅಲ್ಲ. ಬದಲಿಗೆ ಅದು ಫ್ಯಾನ್ ಮೇಡ್ ಪೋಸ್ಟರ್ ಆಗಿದೆ. ಒರಿಜಿನಲ್ ಲುಕ್ ಸಹ ಇದೇ ಮಾಡದರಿಯಲ್ಲಿರುತ್ತದೆ ಎಂದು ಮೆಗಾ ಅಭಿಮಾನಿಗಳು ಕಾಮೆಂಟ್ಸ್ ಮಾಡುತ್ತಿದ್ದಾರೆ. ಆಚಾರ್ಯ ಹೆಸರಿನಲ್ಲಿ ಟ್ಯಾಗ್ ಮಾಡಿರುವ ಹಿನ್ನೆಲೆಯಲ್ಲಿ ಈ ಪೋಸ್ಟರ್ ಭಾರಿ ಟ್ರೆಡಿಂಗ್ ಕ್ರಿಯೇಟ್ ಮಾಡಿದೆಯಂತೆ.
ಈಗಾಗಲೇ ಆಚಾರ್ಯ ಚಿತ್ರದ ಒಂದು ಸೆಟ್ ಗಾಗಿ ಭಾರಿ ಮೊತ್ತ ಖರ್ಚು ಮಾಡುತ್ತಿದ್ದು, ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇಂತಹ ಸೆಟ್ ನಿರ್ಮಿಸಿಲ್ಲ ಎನ್ನಲಾಗುತ್ತಿದೆ. ಇನ್ನೂ ಈ ಚಿತ್ರವನ್ನು ರಾಮ್ ಚರಣ್ ತೇಜ್ ಹಾಗೂ ನಿರಂಜನ್ ರೆಡ್ಡಿ ಇಬ್ಬರೂ ನಿರ್ಮಾಣ ಮಾಡುತ್ತಿದ್ದಾರೆ.
