Film News

ಮಾಲ್ಡಿವ್ಸ್ ವೇಕೇಷನ್ ನಲ್ಲಿ ರಾಮ್ ಚರಣ್-ಉಪಾಸನಾ, ವೈರಲ್ ಆದ ಬ್ಯೂಟಿಪುಲ್ ಪೊಟೋಸ್….!

RRR ಸಿನೆಮಾದ ಮೂಲಕ ಗ್ಲೋಬಲ್ ಲೆವೆಲ್ ನಲ್ಲಿ ಕ್ರೇಜ್ ಸಂಪಾದಿಸಿಕೊಂಡ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಸದ್ಯ ವೇಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಉಪಾಸನಾ ಗರ್ಭಿಣಿಯಾದ ಸುದ್ದಿಯನ್ನು ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಕೆಯನ್ನು ಸಂತೋಷದಿಂದ ನೋಡಿಕೊಳ್ಳಲು ಹೆಚ್ಚಿನ ಸಮಯವನ್ನು ಆಕೆಯೊಂದಿಗೆ ಕಳೆಯುತ್ತಿದ್ದಾರೆ ರಾಮ್ ಚರಣ್. ಇದೀಗ ಈ ಜೋಡಿ ಮಾಲ್ಡೀವ್ಸ್ ನಲ್ಲಿದ್ದು, ಅಲ್ಲಿನ ಕೆಲವೊಂದು ಬ್ಯೂಟಿಪುಲ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟ ರಾಮ್ ಚರಣ್ ಶೀಘ್ರದಲ್ಲೇ ತಂದೆಯಾಗಿ ಪ್ರಮೋಷನ್ ಪಡೆದುಕೊಳ್ಳಲಿದ್ದಾರೆ. ತನ್ನ ಪ್ರೀತಿಯ ಪತ್ನಿಯನ್ನು ಸಂತೋಷವಾಗಿಟ್ಟುಕೊಳ್ಳಲು ಸದಾ ಟೂರ್‍, ವೇಕೇಷನ್ ಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇತ್ತೀಚಿಗಷ್ಟೆ ದುಬೈ ಟೂರ್‍ ನಲ್ಲಿದ್ದ ಈ ಸ್ಟಾರ್‍ ಕಪಲ್ ಅಲ್ಲಿಯೇ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮವನ್ನು ಸಹ ನಡೆಸಿಕೊಂಡರು. ಅದಕ್ಕೂ ಮುಂಚೆ ಒಂದು ರಾಷ್ಟ್ರೀಯ ಉದ್ಯಾನವನದಲ್ಲಿ ವಿಹಾರ ಮಾಡಿದ್ದರು. ಇದೀಗ ಸಮ್ಮರ್‍ ವೇಕೇಷನ್ ಗೆ ಮಾಲ್ಡೀವ್ಸ್ ಗೆ ಹಾರಿದ್ದಾರೆ. ಅಲ್ಲಿನ ಸುಂದರ  ತಾಣಗಳಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ರಾಮ್ ಚರಣ್ ಅಭಿಮಾನಿಗಳಿಗಾಗಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಇನ್ನೂ ರಾಮ್ ಚರಣ್ ಹಂಚಿಕೊಂಡ ಪೊಟೋಗಳನ್ನು ಕಂಡ ಮೆಗಾ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಚರಣ್ ಹಾಗೂ ಉಪಾಸನಾ ಪ್ಯಾರಾ ಗ್ಲೈಡ್ ನಲ್ಲಿ ಕುಳಿತು ಆಕಾಶದಲ್ಲಿ ವಿಹಾರ ಮಾಡುತ್ತಿದ್ದಾರೆ. ಇನ್ನೂ ಈ ಪೊಟೋಗಳನ್ನು ನೋಡಿದ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಇನ್ನೂ ಈ ಪೊಟೋಗಳಲ್ಲಿ ರಾಮ್ ಚರಣ್ ಕ್ಯಾಜುವಲ್ ವೇರ್‍ ನಲ್ಲಿ ಕಾಣಿಸಿಕೊಂಡಿದ್ದಾರೆ. ತುಂಬಾ ಸ್ಟೈಲಿಷ್ ಆಗಿ ಚರಣ್ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳು ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳೂ ಸಹ ಮೆಚ್ಚುಗೆಯ ಕಾಮೆಂಟ್ ಗಳನ್ನು ಹಾಗೂ ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ. ಶೀಘ್ರದಲ್ಲೇ ಚರಣ್ ಹಾಗೂ ಉಪಾಸನಾ ತಂದೆ ತಾಯಿಯಾಗಿ ಪ್ರಮೋಷನ್ ಪಡೆದುಕೊಳ್ಳುತ್ತಿರುವುದು ಸಹ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

ಇನ್ನೂ ರಾಮ್ ಚರಣ್ RRR ಸಿನೆಮಾದ ಬಳಿಕ ಸ್ಟಾರ್‍ ನಿರ್ದೇಶಕ ಶಂಕರ್‍ ಸಾರಥ್ಯದಲ್ಲಿ ಗೇಮೆ ಚೇಂಜರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಚರಣ್ ಹುಟ್ಟುಹಬ್ಬದ ಅಂಗವಾಗಿ ರಿಲೀಸ್ ಮಾಡಲಾಗಿತ್ತು. ಈ ಫಸ್ಟ್ ಲುಕ್ ಪೋಸ್ಟರ್‍ ಸಹ ಸಖತ್ ವೈರಲ್ ಆಗಿತ್ತು. ಇನ್ನೂ ಈ ಸಿನೆಮಾ ಮುಂದಿನ ವರ್ಷ ತೆರೆಕಾಣಲಿದ್ದು, ಶೀಘ್ರದಲ್ಲೇ RC16 ಸಿನೆಮಾದ ಶೂಟಿಂಗ್ ನಲ್ಲೂ ಸಹ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈ ಸಿನೆಮಾವನ್ನು ಡೈರೆಕ್ಟರ್‍ ಬುಚ್ಚಿಬಾಬು ನಿರ್ದೇಶನ ಮಾಡಲಿದ್ದು, ಈ ಸಿನೆಮಾದಲ್ಲಿ ಚರಣ್ ಗೆ ಜೋಡಿಯಾಗಿ ಜಾನ್ವಿ ಕಪೂರ್‍ ರವರನ್ನು ಸಂಪರ್ಕ ಮಾಡಲಾಗುತ್ತಿದೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ.

Most Popular

To Top