Film News

ಜ.29 ಕ್ಕೆ ರಾಮಾರ್ಜುನ ಸಿನೆಮಾ ರಿಲೀಸ್: ಪೋಸ್ಟರ್ ಬಿಡುಗಡೆ

ಬೆಂಗಳೂರು: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಸಹ ನಿರ್ಮಾಣಕತ್ವದಲ್ಲಿ ಮೂಡಿಬಂದ ನಟ ಅನೀಶ್ ಅಭಿನಯದ ರಾಮಾರ್ಜುನ ಚಿತ್ರ ಇದೇ ಜನವರಿ 29, 2021 ರಂದು ಬಿಡುಗಡೆಯಾಗಲಿದೆ. ಈ ಕುರಿತು ಪೋಸ್ಟರ್ ಒಂದನ್ನು ಸಹ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ.

ಕನ್ನಡ ಸಿನಿರಂಗದ ನಟ ಅನೀಶ್ ನಾಯಕನಾಗಿ ನಟಿಸಿರುವ ರಾಮಾರ್ಜುನ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಇನ್ನೂ ಈ ಚಿತ್ರದ ಪೋಸ್ಟರ್ ಅನ್ನು ನಟ ರಕ್ಷಿತ್ ಹಾಗೂ ಕೆ.ಆರ್.ಜಿ ಸ್ಟುಡಿಯೋದ ಮಾಲಿಕ ಕಾರ್ತಿಕ್ ಗೌಡ ಪ್ರಮೋಟ್ ಮಾಡಿದ್ದಾರೆ. ಇನ್ನೂ ಇದು ಅಭಿಮಾನಿಗಳ ಗಮನ ಸೆಳೆಯುವಂತಿದೆ. ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರೂ ಸಿನೆಮಾ ಪೋಸ್ಟರ್ ರಿಲೀಸ್ ಮಾಡಿದ್ದು, ಮೊದಲಿಗೆ ಈ ಪೋಸ್ಟರ್ ರಕ್ಷಿತ್ ಶೆಟ್ಟಿ ಅಭಿನಯಿಸುವ ಹೊಸ ಚಿತ್ರದ ಪೋಸ್ಟರ್ ಇರಬಹುದೆಂಬ ಅನುಮಾನ ಎಲ್ಲರಲ್ಲೂ ಮೂಡಿತ್ತು. ನಂತರ ರಾಮಾರ್ಜುನ ಸಿನೆಮಾದ ಬಗ್ಗೆ ಮಾಹಿತಿ ಹಂಚಿಕೊಂಡು ಈ ಎಲ್ಲಾ ಅನುಮಾನ ದೂರಮಾಡಿದರು.

ಇನ್ನೂ ಈ ಚಿತ್ರದ ಪೋಸ್ಟರ್ ಹಂಚಿಕೊಂಡ ರಕ್ಷಿತ್ ಶೆಟ್ಟಿ ಹೈ ವೋಲ್ಟೇಜ್ ಎಂಟರ್ ಟ್ರೈನ ಚಿತ್ರವಾದ ರಾಮಾರ್ಜುನ ಸಿನೆಮಾ ಜನವರಿ 29 ರಂದು ಬಿಡುಗಡೆಯಾಗುತ್ತಿದ್ದು, ಎಲ್ಲರ ಪ್ರೀತಿ ಪ್ರೋತ್ಸಾಹ ಇರಲಿ ಎಂದು ಮನವಿ ಮಾಡಿದ್ದಾರೆ. ಮತ್ತೊಂದು ಪ್ರಮುಖ ವಿಚಾರವೆಂದರೇ ರಾಮಾರ್ಜುನ ಚಿತ್ರದ ನಾಯಕನಾದ ಅನೀಶ್ ಹಿರೋ ಪಾತ್ರ ಪೋಷಣೆ ಮಾಡುವುದರ ಜೊತೆಗೆ ನಿರ್ದೇಶನದ ಹೊಣೆಯನ್ನು ಸಹ ಹೊತ್ತುಕೊಂಡಿದ್ದರು. ಇನ್ನೂ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ನಿಶ್ಚಿಕಾ ನಾಯ್ಡು ಬಣ್ಣ ಹಚ್ಚಿದ್ದಾರೆ.

Trending

To Top