ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡ ರಾಮಾರ್ಜುನ ಚಿತ್ರದ ನಿರ್ದೇಶಕ

ಬೆಂಗಳೂರು: ಇತ್ತೀಚಿಗಷ್ಟೆ ರಾಮಾರ್ಜುನ ಚಿತ್ರ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರದ ಕುರಿತು ಉತ್ತಮವಾಗಿ ಪ್ರತಿಕ್ರಿಯೆ ಬಂದಿದ್ದರೂ ಕೂಡ ಚಿತ್ರಮಂದಿಗಳತ್ತ ಪ್ರೇಕ್ಷಕರು ಸುಳಿಯದೇ ಇರುವ ಕಾರಣ ಚಿತ್ರದ ನಿರ್ದೇಶಕ ಹಾಗೂ ನಟ ಅನೀಶ್ ತೇಜೇಶ್ವರ್ ಬೇಸರ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

ನಿರ್ದೇಶಕ ಹಾಗೂ ನಟ ಅನೀಶ್ ತೇಜೇಶ್ವರ್ ನಿರ್ದೇಶನದಲ್ಲಿ ರಾಮಾರ್ಜುನ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸುವಂತಿದೆ. ಚಿತ್ರದಲ್ಲಿ ಕಾಮಿಡಿ, ಆಕ್ಷನ್, ಕ್ಲೈಮ್ಯಾಕ್ಸ್ ಅಂತೂ ಸೂಪರ್ ಎಂದು ಚಿತ್ರದ ಪರವಾಗಿ ಪ್ರತಿಕ್ರಿಯೆ ಬಂದಿದೆ. ನಾನು ಇದೇ ಮೊದಲ ಬಾರಿಗೆ ಒಳ್ಳೆಯ ಮಾತುಗಳನ್ನು ನನ್ನ ಸಿನೆಮಾಗೆ ಕೇಳಿದ್ದು, ಆದರೆ ಎರಡನೇ ವಾರದಲ್ಲಿ ಜನರೇ ಚಿತ್ರಮಂದಿರಗಳತ್ತ ಬರುತ್ತಿಲ್ಲ ಎಂದಿದ್ದಾರೆ.

ಇನ್ನೂ ನಮ್ಮ ಸಿನೆಮಾವನ್ನು ಚಿತ್ರಮಂದಿರಗಳ ಮಾಲೀಕರ ಬಳಿ ಬೇಡಿಕೊಂಡು ಉಳಿಸಿಕೊಂಡಿದ್ದೇನೆ. ಒಳ್ಳೆಯ ಸಿನೆಮಾವನ್ನು ಉಳಿಸಿಕೊಡಲು ಪ್ರೇಕ್ಷಕರು ಮುಂದೆ ಬನ್ನಿ. ನೀವು ಚಿತ್ರವನ್ನು ವೀಕ್ಷಣೆ ಮಾಡಿದ ಪ್ರೇಕ್ಷಕರನ್ನು ಕೇಳಿಯೇ ಸಿನೆಮಾ ನೋಡಲು ಬನ್ನಿ ಎಂದು ಮನವಿಯನ್ನು ಸಹ ಮಾಡಿದ್ದಾರೆ. ಜೊತೆಗೆ ಇಷ್ಟೊಂದು ಒಳ್ಳೆಯ ಸಿನೆಮಾ ಮಾಡಿದ ನನಗೆ ಸೋಲನ್ನು ಅನುಭವಿಸುವ ಭಯ ಕಾಡಿದೆ. ಇದು ನಮ್ಮ ಕೊನೆಯ ಪ್ರಯತ್ನವಾಗಿದೆ. ತುಂಭಾ ಶ್ರಮಪಟ್ಟು ರಾಮಾರ್ಜುನ ಸಿನೆಮಾ ಮಾಡಿದ್ದು, ಇದೀಗ ಸಿನೆಮಾ ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಕೈಯಲ್ಲಿದೆ ಎಂದಿದ್ದಾರೆ.

ಇನ್ನೂ ರಾಮಾರ್ಜುನ ಚಿತ್ರವನ್ನು ಮುಂದಿನವಾರ ತೆಗೆದು ಹಾಕುತ್ತಾರೆ. ದಯವಿಟ್ಟು ಈಗಲೇ ಬಂದು ಸಿನೆಮಾ ಮಾಡಿ ಒಂದೊಳ್ಳೆ ಸಿನೆಮಾವನ್ನು ಉಳಿಸಿಕೊಡಿ ಎಂದು ಪ್ರೇಕ್ಷಕ ಪ್ರಭುಗಳಲ್ಲಿ ಮನವಿ ಮಾಡಿದ್ದಾರೆ. ಇನ್ನೂ ಈ ಚಿತ್ರದ ನಿರ್ದೇಶನ ಹಾಗೂ ನಾಯಕನಾಗಿ ಅನೀಶ್ ನಟಿಸಿದ್ದು, ನಿಶ್ಚಿಕಾ ನಾಯ್ಡು ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಖ್ಯಾತ ಕಲಾವಿದರಾದ ರಂಗಾಯಣ ರಘು, ಶರತ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

Previous articleಆರ್.ಜಿ.ವಿ. ದಿಶಾ ಎನ್ಕೌಂಟರ್ ಸಿನೆಮಾವನ್ನು ನಿರಾಕರಿಸಿದ ಸೆನ್ಸಾರ್ ಬೋರ್ಡ್!
Next articleಬಿಗ್ ಪ್ರಾಜೆಕ್ಟ್ ನಲ್ಲಿ ನಟಿ ಈಷಾರೆಬ್ಬ ನಟನೆ!