Film News

ಸ್ಯಾಂಡಲ್ ವುಡ್ ಬಗ್ಗೆ ಸಂಚಲನಾತ್ಮಕ ಸ್ಟೇಟ್ ಮೆಂಟ್ ಕೊಟ್ಟ ವರ್ಮಾ

ಹೈದರಾಬಾದ್: ಟಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ಎಂತಲೇ ಕರೆಯುವ ರಾಮಗೋಪಲ್ ವರ್ಮಾ ಸ್ಯಾಂಡಲ್ ವುಡ್ ಕುರಿತಂತೆ ಸಂಚಲನಾತ್ಮಕ ಸ್ಟೇಟ್‌ಮೆಂಟ್ ಗಳನ್ನು ಕೊಡುವುದರ ಮೂಲಕ ಸುದ್ದಿಯಾಗಿದ್ದಾರೆ.

ಅಂದಹಾಗೆ ನಿರ್ದೇಶಕ ವರ್ಮಾ ಸ್ಯಾಂಡಲ್ ವುಡ್ ನ ಸಾಮರ್ಥ್ಯದ ಬಗ್ಗೆ ಇತ್ತೀಚಿಗೆ ಸ್ಯಾಂಡಲ್ ವುಡ್ ಗಳಿಸುತ್ತಿರುವ ಪ್ರಶಂಸೆಯ ಬಗ್ಗೆ ಟ್ವಿಟರ್ ನಲ್ಲಿ ಹೇಳಿಕೆಗಳನ್ನು ನೀಡಿದ್ದು, ಇದು ಟಾಲಿವುಡ್ ನ ಕೆಲವೊಂದು ನಿರ್ದೇಶಕರಿಗೆ ನೇರ ಟಾಂಗ್ ಕೊಡುವಂತಿದೆ ಎನ್ನಲಾಗುತ್ತಿದೆ.

ಈ ಹಿಂದೆ ಭಾರತದಲ್ಲಿ ಸಿನೆಮಾರಂಗದಲ್ಲಿ ಬಾಲಿವುಡ್, ತೆಲುಗು, ತಮಿಳು ನಂತರದ ಸ್ಥಾನದಲ್ಲಿ ಕನ್ನಡ ಸಿನಿರಂಗ ಎನ್ನುವಂತಹ ಭಾವನೆಯಿತ್ತು. ಆದರೆ ಈ ಭಾವನೆಯನ್ನು ಕೆಜಿಎಫ್ ಚಿತ್ರ ಕ್ಲೀನ್ ಸ್ವೀಪ್ ಮಾಡಿದೆ. ಕೆಜಿಎಫ್ ಚಿತ್ರ ರಿಲೀಸ್ ಆದ ಮೇಲೆ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಕುರಿತು ಇಡೀ ವಿಶ್ವವೇ ಮಾತನಾಡುತ್ತಿದೆ. ಕೆಜಿಎಫ್-೨ ಟೀಸರ್ ಗೆ ದೊರೆತಂಹ ಪ್ರತಿಕ್ರಿಯೆ, ದಾಖಲೆ ಎಲ್ಲರೂ ಕಣ್ಣು ಬಿಟ್ಟು ನೋಡುವಂತೆ ಮಾಡಿದೆ. ಸಿನಿರಂಗದಲ್ಲಿ ಈ ಹಿಂದೆ ಪಾರುಪತ್ಯ ಸಾಧಿಸಿದ್ದವರನ್ನು ಹಿಂದಿಕ್ಕಿದ ಕೀರ್ತಿ ಯಶ್ ಹಾಗೂ ಪ್ರಶಾಂತ್ ನೀಲ್ ರವರಿಗೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಟ್ವೀಟರ್ ನಲ್ಲಿ ವರ್ಮಾ ಹೇಳಿದಂತೆ ೨ ವರ್ಷದ ಹಿಂದೆಯವರೆಗೂ ಬಾಲಿವುಡ್ ಮಾತ್ರವಲ್ಲದೇ, ದಕ್ಷಿಣ ಭಾರತದ ಚಿತ್ರರಂಗವೂ, ಕನ್ನಡ ಇಂಡಸ್ಟ್ರಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಇದೀಗ ಯಶ್-ಪ್ರಶಾಂತ್ ನೀಲ್ ಕನ್ನಡ ಸಿನಿರಂಗವನ್ನು ವಿಶ್ವದ ಭೂಪಟದಲ್ಲಿ ಗುರ್ತಿಸುವಂತೆ ಮಾಡಿದ್ದಾರೆ ನಿಮಗೆ ಸೆಲ್ಯೂಟ್ ಎಂದು ಟ್ವೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಮತ್ತೊಂದು ಟ್ವೀಟ್ ಸಹ ಮಾಡಿದ್ದು, ಅದರಲ್ಲಿ ಬಾಹುಬಲಿ-೨ ಸಿನೆಮಾ ಟ್ರೈಲರ್ ೧೧ ಕೋಟಿ ವೀಕ್ಷಣೆ ಪಡೆಯಲು ಮೂರು ವರ್ಷ ತೆಗೆದುಕೊಂಡಿದೆ. ಆದರೆ ಕೆಜಿಎಫ್-೨ ಟೀಸರ್ ಕೇವಲ ೩ ದಿನದಲ್ಲಿ ಸುಮಾರು ೧೪ ಕೋಟ ವೀಕ್ಷಣೆ ಕಂಡಿದೆ ಎಂದು ರಾಜಮೌಳಿಗೆ ಟಾಂಗ್ ನೀಡಿದ್ದಾರೆ. ಎಲ್ಲಾ ಕನ್ನಡಿಗರ ಪರವಾಗಿ, ಇತರೆ ಚಿತ್ರರಂಗಗಳಿಗೆ ನಿರ್ದೇಶಕ ಪ್ರಶಾಂತ್ ನೀಲ್ ನೀಡಿದ ಪಂಚ್ ಇದಾಗಿದ್ದು, ಇದರಿಂದ ದೇಶದ ಇತರೆ ಚಿತ್ರರಂಗದವರ ಹೊಟ್ಟೆ ಉರಿಯುತ್ತಿದೆ ಎಂದು ವರ್ಮಾ ಟೀಕೆ ಸಹ ಮಾಡಿದ್ದಾರೆ.

Trending

To Top