ದುಬಾರಿ ಬೆಲೆ ವಿದ್ಯುತ್ ಚಾಲಿತ ಕಾರು ಖರೀದಿಸಿ ಉಪಾಸನಾ, ಎಷ್ಟು ಕೋಟಿ ಗೊತ್ತಾ?

ನಟಿ ಉಪಾಸನಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿದ್ದು, ಅನೇಕ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಈ ಜೋಡಿ ಅನೇಕ ಜೋಡಿಗಳಿಗೆ ಮಾದರಿಯಾಗಿದೆ. ಉಪಾಸನಾ ಹಾಗೂ ರಾಮ್ ಚರಣ್  ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಇನ್ನೂ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹತ್ತು ವರ್ಷಗಳು ಕಳೆದಿದ್ದು, ಇಟಲಿಯಲ್ಲಿ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಕಳೆದ ಜೂ.20 ರಂದು ಅದ್ದೂರಿಯಾಗಿ ಕುಟುಂಬದೊಂದಿಗೆ ಅವರು ಹುಟ್ಟುಹಬ್ಬವನ್ನು ಸಹ ಆಚರಿಸಿಕೊಂಡಿದ್ದರು. ಇದೀಗ ಉಪಾಸನಾ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ತೆಲುಗು ಸಿನಿರಂಗದ ಮೆಗಾ ಫ್ಯಾಮಿಲಿಯ ರಾಮ್ ಚರಣ್ ತೇಜ್ ಪತ್ನಿ ಉಪಾಸನಾ ಇತ್ತೀಚಿಗೆ ಹೊಸ ಕಾರೊಂದನ್ನು ಖರೀದಿ ಮಾಡಿದ್ದಾರೆ. ಕೋಟಿ ಕೋಟಿ ಬೆಲೆ ಬಾಳುವ ಕಾರನ್ನು ಖರೀದಿ ಮಾಡಿದ್ದಾರೆ. ವಿದ್ಯುತ್ ಚಾಲಿತ ದುಬಾರಿ ಕಾರನ್ನು ಆಕೆ ಸ್ವಂತ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ಸದಾ ಒಂದಲ್ಲ ಒಂದು ದುಬಾರಿ ವಸ್ತುಗಳನ್ನು ಖರೀದಿಸುತ್ತಿರುತ್ತಾರೆ. ದುಬಾರಿ ಬೆಲೆಯುಳ್ಳ ಕಾರುಗಳು, ಕೈ ಗಡಿಯಾರಗಳು, ದುಬಾರಿ ಮನೆಗಳು ಹೀಗೆ ಖರೀದಿ ಮಾಡುತ್ತಾ ಸುದ್ದಿಯಾಗುತ್ತಿರುತ್ತಾರೆ. ಈ ಹಾದಿಯಲ್ಲಿ ರಾಮ್ ಚರಣ್ ಪತ್ನಿ ಉಪಾಸನಾ ಸಹ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಇನ್ನೂ ಉಪಾಸನಾ ಯಾವಾಗಾದರೂ ಹೊಸ ಕಾರು ಖರೀದಿ ಮಾಡಿದರೇ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಸದ್ದು ಮಾಡುತ್ತಾರೆ. ಇದೀಗ ವಿದ್ಯುತ್ ಚಾಲಿತ ದುಬಾರಿ ಕಾರನ್ನು ಖರೀದಿಸಿ, ಕಾರನ್ನೇರಿ ಪೊಟೋಗೆ ಪೋಸ್ ಕೊಟ್ಟಿದ್ದಾರೆ.

ಉಪಾಸನಾ ಖರೀದಿಸಿ ದುಬಾರಿ ಕಾರಿನಲ್ಲಿ ತುಂಬಾನೆ ಫೀಚರ್‍ ಗಳಿವೆ.  ಸುಮಾರು 1.66 ಕೋಟಿಗೂ ಅಧಿಕ ಬೆಲೆಯ ವಿದ್ಯುತ್ ಚಾಲಿತ ಆಡಿ ಇ-ಟ್ರಾನ್ ಕಾರನ್ನು ಆಕೆ ಖರೀದಿಸಿದ್ದಾರೆ. ಈ ದುಬಾರಿ ಕಾರಿನಲ್ಲಿ ಕುಳಿತು ಆಕೆ ಕಾರಿನ ವಿಶೇಷತೆಗಳ ಬಗ್ಗೆ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನೂ ವಿಡಿಯೋದಲ್ಲಿ ಆಕೆ ಹೇಳಿದಂತೆ, ವಿಶ್ವದಲ್ಲಿ ಪ್ರತಿಯೊಂದು ಅಪ್ ಗ್ರೇಡ್ ಆಗುತ್ತಿರುತ್ತದೆ. ಅದಕ್ಕನುಗುಣವಾಗಿ ನಾನು ಸಹ ಅಪ್ ಗ್ರೇಡ್ ಆಗಿದ್ದೇನೆ. ಇದರ ಭಾಗವಾಗಿಯೇ ಆಡಿ ಇ-ಟ್ರಾನ್ ಕಾರನ್ನು ಖರೀದಿ ಮಾಡಿದ್ದೇನೆ. ಇನ್ನೂ ಈ ಕಾರಿನಲ್ಲಿ ನಾನು ತುಂಬಾ ಸೌಕರ್ಯಯುತವಾಗಿ ಪ್ರಯಾಣ ಮಾಡುತ್ತಿದ್ದೇನೆ. ನನ್ನ ಅವಶ್ಯಕತೆಗಳಿಗೆ ತಕ್ಕಂತೆ ಈ ಕಾರು ಇದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಇನ್ನೂ ಇತ್ತೀಚಿಗಷ್ಟೆ ಉಪಾಸನಾಗೆ ಮಕ್ಕಳನ್ನು ಪಡೆಯುವ ವಿಚಾರದಲ್ಲಿ ಸದ್ಗುರು ರವರಿಂದ ಪ್ರಶ್ನೆಯೊಂದು ಬಂದಿದ್ದು, ಈ ವಿಚಾರ ಎಲ್ಲೆಡೆ ವೈರಲ್ ಆಗಿತ್ತು, ಇದಕ್ಕೆ ಉಪಾಸನಾ ನೀಡಿದ ಉತ್ತರ ಸಹ ಜೋರಾಗಿಯೇ ಹರಿದಾಡಿತ್ತು. ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಉಪಾಸನಾ ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ರಾಮ್ ಚರಣ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರೇ, ಉಪಾಸನಾ ಅಪೋಲೋ ಆಸ್ಪತ್ರೆಯ ನಿರ್ವಹಣೆಯ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುತ್ತಾರೆ.

Previous articleಹೋಟೆಲ್ ಉದ್ಯಮಕ್ಕೆ ಕಾಲಿಡುತ್ತಿದ್ದಾರಂತೆ ಪ್ರಿನ್ಸ್ ಮಹೇಶ್ ಬಾಬು, ಅವರ ಹೊಸ ಹೋಟೆಲ್ ಎಲ್ಲಿ ಗೊತ್ತಾ?
Next articleಕಾರ್ತಿಕೇಯ-2 ಸಿನೆಮಾ ತಂಡದಿಂದ ಭರ್ಜರಿ ಆಫರ್, ಆ ಕೆಲಸ ನೀವು ಮಾಡಿ 6 ಲಕ್ಷ ಗೆಲ್ಲಿ….!